Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 76:2 - ಕನ್ನಡ ಸತ್ಯವೇದವು C.L. Bible (BSI)

2 ಆತನ ಬಿಡಾರ ಸಾಲೇಮಿನಲಿ I ಆತನ ನಿವಾಸ ಸಿಯೋನಿನಲಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಸಾಲೇಮಿನಲ್ಲಿ ಆತನ ಬಿಡಾರವಿದೆ; ಚೀಯೋನಿನಲ್ಲಿ ಆತನು ವಾಸಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಸಾಲೇವಿುನಲ್ಲಿ ಆತನ ಬೀಡಾರವಿದೆ; ಚೀಯೋನಿನಲ್ಲಿ ಆತನು ನಿವಾಸಿಸುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಆತನ ಗುಡಾರವು ಸಾಲೇಮಿನಲ್ಲಿದೆ. ಆತನ ಆಲಯವು ಸಿಯೋನ್ ಬೆಟ್ಟದ ಮೇಲಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಸಾಲೇಮಿನಲ್ಲಿ ದೇವರ ಗುಡಾರವೂ ಚೀಯೋನಿನಲ್ಲಿ ಅವರ ವಾಸಸ್ಥಾನವೂ ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 76:2
9 ತಿಳಿವುಗಳ ಹೋಲಿಕೆ  

ಸಾಲೇಮಿನ ಅರಸನೂ ಪರಾತ್ಪರ ದೇವರ ಯಾಜಕನೂ ಆಗಿದ್ದ ಮೆಲ್ಕಿಸದೇಕನು ಸಹ ಅಲ್ಲಿಗೆ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಅರ್ಪಿಸಿ ಅಬ್ರಾಮನಿಗೆ ಇಂತೆಂದು ಆಶೀರ್ವಾದ ಮಾಡಿದನು:


ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ ಭಜನ ನಿಮ್ಮ ಮಧ್ಯೆಯಿರುವ ಆ ಘನವಂತನ ಇಸ್ರಯೇಲಿನಾ ಸ್ವಾಮಿ ಪರಮಪಾವನ.”


ಆದರೆ ಈಗ ನನ್ನ ನಾಮಸ್ಥಾಪನೆಗಾಗಿ ಜೆರುಸಲೇಮನ್ನೂ ನನ್ನ ಪ್ರಜೆಗಳಾದ ಇಸ್ರಯೇಲರನ್ನು ಆಳುವುದಕ್ಕೆ ದಾವೀದನನ್ನೂ ಆರಿಸಿಕೊಂಡಿದ್ದೇನೆ’, ಎಂದು ಹೇಳಿದ್ದರು.


ತನ್ನ ಗರ್ಭಗುಡಿಯನ್ನೂ ಉತ್ಸವಸ್ಥಾನವನ್ನೂ ಹಾಳುಮಾಡಿದ ತೋಟದ ಗುಡಿಸಲನ್ನೋ ಎಂಬಂತೆ. ಮಹೋತ್ಸವಗಳನ್ನೂ ಸಬ್ಬತ್‍ದಿನಗಳನ್ನೂ ಅಳಿಸಿಬಿಟ್ಟ ನೆನಪಿಗೂ ಬಾರದಂತೆ. ರಾಜರನ್ನೂ ಯಾಜಕರನ್ನೂ ಸರ್ವೇಶ್ವರ ಧಿಕ್ಕರಿಸಿದ ಅತಿ ರೋಷಾವೇಷಗೊಂಡವನಂತೆ.


ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ I ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ II


ಸಂಕೀರ್ತಿಸಿರಿ ಸಿಯೋನಿನಲಿ ವಾಸಿಸುವ ಪ್ರಭುವನು I ಪ್ರಕಟಿಸಿರಿ ಜನತೆಗೆ ಆತನ ಮಹತ್ಕಾರ್ಯಗಳನು II


ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ I ಆನಂದದಾಯಕ ರಾಜಾಧಿರಾಜನ ಆ ನಗರ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು