Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 74:21 - ಕನ್ನಡ ಸತ್ಯವೇದವು C.L. Bible (BSI)

21 ಕುಗ್ಗಿದವರು ಹಿಂದಿರುಗದಿರಲಿ ಅವಮಾನದಿಂದ I ಬಡವರು ಕೀರ್ತಿಸಲಿ ನಿನ್ನ ನಾಮವನು ಭಕ್ತಿಯಿಂದ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ; ದುಃಖಿತರೂ, ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಕುಗ್ಗಿದವರು ಆಶಾಭಂಗದಿಂದ ಹಿಂದಿರುಗದಿರಲಿ; ದುಃಖಿತರೂ ಬಡವರೂ ನಿನ್ನ ನಾಮವನ್ನು ಕೀರ್ತಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ದೇವರೇ, ನಿನ್ನ ಜನರಿಗೆ ಅವಮಾನವಾಗಿದೆ. ಅವರಿಗೆ ಕೇಡಾಗಲು ಬಿಡಬೇಡ. ನಿನ್ನ ಬಡಜನರೂ ನಿಸ್ಸಹಾಯಕರೂ ನಿನ್ನನ್ನು ಕೊಂಡಾಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಕುಗ್ಗಿದವನು ಅವಮಾನದಿಂದ ಹಿಂದಿರುಗದಿರಲಿ. ದೀನನೂ, ಬಡವನೂ ನಿಮ್ಮ ಹೆಸರನ್ನು ಸ್ತುತಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 74:21
9 ತಿಳಿವುಗಳ ಹೋಲಿಕೆ  

ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II


ಸಾಧಿಸುವನು ಪ್ರಭು ನ್ಯಾಯನೀತಿಯನು I ದೊರಕಿಸುವನು ಶೋಷಿತರಿಗೆ ನ್ಯಾಯವನು II


“ಬಿಡಿಸಿದೆ ಬಡವನನು ದರೋಡೆಗಾರರಿಂದ I ರಕ್ಷಿಸಿದೆ ದುರ್ಬಲನನು ಬಲಾಢ್ಯರಿಂದ I ಹೇ ಪ್ರಭು, ನಿನಗೆ ಸಮಾನರಾರೆಂದು” I ಹೊಗಳುವುವು ನನ್ನೆಲುಬುಗಳೊಂದೊಂದು II


ದರಿದ್ರರನು ದೇವರು ಎಂದಿಗು ಮರೆಯುವುದಿಲ್ಲ I ನಿರ್ಗತಿಕರ ನಿರೀಕ್ಷೆ ಕೈಗೂಡದೆ ಇರುವುದಿಲ್ಲ II


ಪರಸ್ಪರವಾಗಿ ಹಾಡುತ್ತಾ ಸರ್ವೇಶ್ವರನನ್ನು ಕೀರ್ತಿಸಿದರು. “ಸರ್ವೇಶ್ವರ ಒಳ್ಳೆಯವರು! ಅವರ ಅಚಲಪ್ರೀತಿ ಇಸ್ರಯೇಲರ ಮೇಲೆ ಶಾಶ್ವತ!” ಎಂದು ಕೃತಜ್ಞತಾಸ್ತುತಿ ಮಾಡಿದರು. ಈ ಸ್ತುತಿ ಕೀರ್ತನೆ ಕೇಳಿಸಿದ ಕೂಡಲೆ ಸರ್ವೇಶ್ವರನ ಆಲಯಕ್ಕೆ ಅಸ್ತಿವಾರ ಹಾಕಲಾಯಿತೆಂದು ಜನರೆಲ್ಲರು ಉತ್ಸಾಹಧ್ವನಿಯಿಂದ ಆರ್ಭಟಿಸಿದರು.


ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ, ಇವು ಮತ್ತೆ ಕೇಳಿಬರುವುವು. ‘ಸೇನಾಧೀಶ್ವರ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರ ಮಾಡಿ; ಆತ ಒಳ್ಳೆಯವನು, ಆತನ ಪ್ರೀತಿ ಶಾಶ್ವತ’ ಎಂದು ಹಾಡುತ್ತಾ ಕೃತಜ್ಞತಾಬಲಿಯನ್ನು ದೇವಾಲಯಕ್ಕೆ ತರುವರು. ಅವರ ಗಾನ ನಿಮ್ಮ ಕಿವಿಗೆ ಬೀಳುವುದು. ನಾಡನ್ನು ಬಿಡುಗಡೆಮಾಡಿ ಹಿಂದಿನ ಸುಸ್ಥಿತಿಗೆ ಏರಿಸುವೆನು.


ಇಸ್ರಯೇಲಿಗಾದರೋ, ದೊರೆವುದು ಶಾಶ್ವತ ರಕ್ಷಣೆ ಸರ್ವೇಶ್ವರನಿಂದ; ಯುಗಯುಗಾಂತರಕ್ಕೂ ಅದಕ್ಕಾಗದು ಲಜ್ಜೆ, ಮಾನಭಂಗ.”


ಬಡವ ನಾನು, ನನಗಿದೆ ಕುಂದುಕೊರತೆ I ನನ್ನ ಎದೆಗೆ ಅಲಗೇ ನಾಟಿದಂತಿದೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು