Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 73:4 - ಕನ್ನಡ ಸತ್ಯವೇದವು C.L. Bible (BSI)

4 ಆ ಜನರಿಗೆ ನೋವುಕಾವೆಂಬುದಿಲ್ಲ I ಅವರ ದೇಹ ಸಬಲವಾಗಿದೆಯಲ್ಲ! II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅವರ ಮರಣವು ನಿರ್ಬಾಧಕವಾಗಿದೆ; ಅವರ ದೇಹವು ಕೊಬ್ಬಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಅವರ ಮರಣವು ನಿರ್ಬಾಧಕವಾಗಿದೆ; ಅವರ ಕಾಯವು ಕೊಬ್ಬುಳ್ಳದ್ದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅವರು ಆರೋಗ್ಯವಂತರಾಗಿದ್ದಾರೆ. ಜೀವನೋಪಾಯಕ್ಕಾಗಿ ಅವರು ಹೋರಾಡಬೇಕಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಏಕೆಂದರೆ ಅವರಿಗೆ ಹೋರಾಟಗಳು ಇಲ್ಲ. ಅವರ ದೇಹವು ಆರೋಗ್ಯಕರ ಮತ್ತು ದೃಢವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 73:4
10 ತಿಳಿವುಗಳ ಹೋಲಿಕೆ  

“ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವಸಂಸ್ಕಾರವೂ ಮುಗಿಯಿತು.


ಏಕೆಂದರೆ ಮೂಢನನ್ನು ಹೇಗೋ ಹಾಗೆಯೇ ಜ್ಞಾನಿಯನ್ನೂ ಜನರು ನಿರಂತರವಾಗಿ ಮರೆತುಹೋಗುವರು. ಮುಂದಿನ ಕಾಲದವರು ಈಗಿನವರನ್ನೆಲ್ಲ ಮರೆತುಬಿಡುವರು ಎಂಬುದು ನಿಶ್ಚಯ. ನಿಸ್ಸಂದೇಹವಾಗಿ ಮೂಢನಂತೆ ಜ್ಞಾನಿಯು ಮೃತನಾಗುವನು.


ಇಳೆಯ ಮಾನವರಿಂದ ಪ್ರಭು, ಎನ್ನನು ಕೈಯಾರೆ ಕಾಪಾಡು I ಜಗವೇ ತಮ್ಮ ಪಾಲಿನ ಪರಿಮಿತಿ ಎನ್ನುವವರಿಂದ ಕಾದಿಡು II ಅವರಾದರೊ ನಿನ್ನ ನಿಧಿಯಿಂದ ಉದರ ತುಂಬಿಸಿಕೊಳ್ಳಲಿ I ಮಕ್ಕಳು, ಮರಿಮಕ್ಕಳಿಗೆ ಯಥೇಚ್ಛವಾಗಿ ಉಳಿಸಿಕೊಳ್ಳಲಿ II


ಕರುಣೆಗೆಡೆಯಿಲ್ಲ ಕೊಬ್ಬಿದಾ ಹೃದಯಗಳಲಿ I ಗರ್ವ ತುಳುಕುತಿದೆ ಆ ಜನರ ಬಾಯಿಗಳಲಿ II


ಹೆತ್ತಕರುಳೇ ಅವನನು ಮರೆತುಬಿಡುವುದು ಹುಳು ಅವನ ಹೆಣವನು ಆಸೆಯಿಂದ ಕಬಳಿಸುವುದು. ಇನ್ನು ಅವನ ನೆನಪು ಯಾರಿಗೂ ಇರದು ಅಕ್ರಮವು ಮುರಿದುಬಿದ್ದ ಮರದಂತಾಗುವುದು.


ಸಜ್ಜನನು ಸದ್ಧರ್ಮಿಯಾಗಿ ಜೀವಿಸುತ್ತಾ ಗತಿಸಿಹೋಗುತ್ತಾನೆ; ದುರ್ಜನನಾದರೋ ಅಧರ್ಮದಲ್ಲಿ ಬಹುಕಾಲ ಬದುಕುತ್ತಾನೆ. ಇದನ್ನು ಎಲ್ಲಾ ನನ್ನ ನಿರರ್ಥಕ ಜೀವನದಲ್ಲಿ ಎಷ್ಟೋ ನೋಡಿದ್ದೇನೆ.


ಕೊಬ್ಬೇರಿತ್ತು ಅವನ ಮೋರೆಯಲಿ ಬೊಜ್ಜು ಬೆಳೆದಿತ್ತು ಅವನ ಸೊಂಟದಲಿ.


ದಿನಗಳನು ಕಳೆಯುತ್ತಾರೆ ಸುಖಸಂತೋಷದಿಂದ ಸಮಾಧಿ ಸೇರುತ್ತಾರೆ ಸಮಾಧಾನದಿಂದ.


ಕೊಬ್ಬಿ ಮೆರೆಯುತ್ತಿದ್ದಾರೆ. ಕೆಟ್ಟ ಕಾರ್ಯಗಳಲ್ಲಂತೂ ನಿಸ್ಸೀಮರಾಗಿದ್ದಾರೆ. ಅನಾಥರ ಏಳಿಗೆಗಾಗಿ ಅವರ ಪಕ್ಷ ಹಿಡಿದು ವಾದಿಸುವುದಿಲ್ಲ. ದಿಕ್ಕಿಲ್ಲದವರಿಗೆ ನ್ಯಾಯ ದೊರಕಿಸುವುದಿಲ್ಲ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು