Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 72:14 - ಕನ್ನಡ ಸತ್ಯವೇದವು C.L. Bible (BSI)

14 ಅವರ ಜೀವ ಆತನ ದೃಷ್ಟಿಯಲಿ ಅಮೂಲ್ಯ I ಜುಲುಮೆ ಶೋಷಣೆಗಳ ನೀಗಿಪುದು ಆತನ ಕಾರ್ಯ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಕುಯುಕ್ತಿ, ಬಲಾತ್ಕಾರಗಳಿಗೆ ತಪ್ಪಿಸಿ ಅವರ ಜೀವವನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಕುಯುಕ್ತಿ ಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಕ್ರೂರಿಗಳಿಂದ ಅವರನ್ನು ತಪ್ಪಿಸಿ ರಕ್ಷಿಸುವನು. ಆ ಬಡವರ ಜೀವಗಳು ರಾಜನಿಗೆ ಅಮೂಲ್ಯವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಮೋಸ ದಬ್ಬಾಳಿಕೆಯಿಂದ ಜನರನ್ನು ಬಿಡುಗಡೆ ಮಾಡುವನು. ಜನರ ಜೀವವು ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 72:14
16 ತಿಳಿವುಗಳ ಹೋಲಿಕೆ  

ಪ್ರಭು ಅಲ್ಪವೆಂದೆಣಿಸನು I ತನ್ನ ಭಕ್ತರ ಮರಣವನು II


ಆತನ ನ್ಯಾಯತೀರ್ಪು ಸತ್ಯವಾದುದು, ನೀತಿಬದ್ಧವಾದುದು. ಇತ್ತಿರುವನಾತ ತೀರ್ಪನು ಮಹಾ ವೇಶ್ಯೆಯ ವಿರುದ್ಧ ಪೃಥ್ವಿಯನೇ ಹೊಲಸೆಬ್ಬಿಸಿದ ವ್ಯಭಿಚಾರಿಯ ವಿರುದ್ಧ ತನ್ನ ದಾಸರ ರಕ್ತಪಾತದ ಸೇಡನು ತೀರಿಸಿಹನಾತ,” ಎಂದು ಜನಸಮೂಹವು ಘೋಷಿಸಿತು.


ಹತ್ತಿರ ಬಂದೆನ್ನ ಉದ್ಧರಿಸಯ್ಯಾ I ಶತ್ರುಗಳ ಕೈಯಿಂದ ರಕ್ಷಿಸಯ್ಯಾ II


ದಾವೀದನು ಬೇರೋತಿನ ರಿಮ್ಮೋನನ ಮಕ್ಕಳು ಆದ ಆ ರೇಕಾಬ್ ಹಾಗು ಬಾಣ ಎಂಬವರಿಗೆ,


ದೇವಜನರ ರಕ್ತವನ್ನು ಮತ್ತು ಕ್ರಿಸ್ತೇಸುವಿಗೋಸ್ಕರ ಹುತಾತ್ಮರಾದವರ ರಕ್ತವನ್ನು ಹೀರಿ ಮತ್ತಳಾಗಿದ್ದಳು ಅವಳು. ಇದನ್ನು ಕಂಡು ನನಗೆ ದಿಗ್ಭ್ರಮೆಯಾಯಿತು.


ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟನು.


ಇಸ್ರಯೇಲನು ಉದ್ಧರಿಸುವನಾತ I ಅದು ಗೈದ ಸಕಲ ದೋಷಗಳಿಂದ II


ಉದ್ಧರಿಸು ದೇವಾ, ಇಸ್ರಯೇಲರನು I ಸಮಸ್ತ ಬೇನೆ ಬವಣೆಗಳಿಂದವರನು II


ಆಗ ಸೌಲನು, “ನಾನು ಪಾಪಮಾಡಿದೆ, ದಾವೀದನೇ, ನನ್ನ ಪುತ್ರನೇ, ಹಿಂದಿರುಗಿ ಬಾ; ಈ ದಿನ ನನ್ನ ಜೀವ ನಿನ್ನ ದೃಷ್ಟಿಯಲ್ಲಿ ಬಲು ಬೆಲೆಯುಳ್ಳದೆಂದು ಮಾನ್ಯವಾಯಿತು. ಆದುದರಿಂದ ನಾನು ಇನ್ನು ಮುಂದೆ ನಿನಗೆ ಕೇಡು ಮಾಡುವುದಿಲ್ಲ. ಈವರೆಗೆ ನಾನು ಮಾಡಿದ್ದು ಹುಚ್ಚುತನ ಹಾಗೂ ದೊಡ್ಡ ತಪ್ಪು,” ಎಂದು ಹೇಳಿದನು.


ಸಕಲ ಆಪತ್ತು ಕೇಡುಗಳಿಂದ ನನ್ನನ್ನು ಕಾಪಾಡಿಕೊಂಡು ಬಂದ ಆ ದೂತನು, ಈ ಹುಡುಗರನ್ನು ಆಶೀರ್ವದಿಸಲಿ! ಅವರ ಮುಖಾಂತರ ನನ್ನ ಹೆಸರೂ ನನ್ನ ಪಿತೃಗಳಾದ ಅಬ್ರಹಾಮ್ - ಇಸಾಕರ ಹೆಸರೂ ಊರ್ಜಿತಗೊಳ್ಳಲಿ; ಧರೆಯಲ್ಲಿ ಇವರು ದೊಡ್ಡ ಜನಸ್ತೋಮವಾಗಿ ಬೆಳೆಯಲಿ!”


“ಸರ್ವೇಶ್ವರಾ, ಈ ನೀರನ್ನು ಕುಡಿಯುವುದು ನನಗೆ ದೂರವಾಗಿರಲಿ.ಇದು ಜೀವದಾಶೆ ತೊರೆದವರ ರಕ್ತ; ಇದನ್ನು ಕುಡಿಯುವುದೇ ಇಲ್ಲ,” ಎಂದು ಹೇಳಿ ಅದನ್ನು ಸರ್ವೇಶ್ವರನಿಗೆ ಸಮರ್ಪಣೆಯಾಗಿ ಹೊರಗೆ ಹೊಯ್ದುಬಿಟ್ಟನು. ಆ ಮೂರುಮಂದಿ ಪರಾಕ್ರಮಿಗಳ ಕೃತ್ಯಗಳಿವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು