Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 65:13 - ಕನ್ನಡ ಸತ್ಯವೇದವು C.L. Bible (BSI)

13 ಹುಲ್ಲುಗಾವಲುಗಳು ತುಂಬಿತುಳುಕುತಿವೆ ಕುರಿಹಿಂಡುಗಳಿಂದ I ಕಣಿವೆ ಕಂದರಗಳಿದೊ ಕಂಗೊಳಿಸುತ್ತಿವೆ ತೆನೆಕಾಳುಗಳಿಂದ I ಇಳೆ ಮೊಳಗುತಿದೆ ಆನಂದಘೋಷ, ಸಂತಸ ಗೀತೆಗಳಿಂದ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಹುಲ್ಲುಗಾವಲುಗಳು ಕುರಿಹಿಂಡುಗಳೆಂಬ ವಸ್ತ್ರವನ್ನು ಹೊದ್ದುಕೊಂಡಿವೆ; ತಗ್ಗುಗಳು ಬೆಳೆಯಿಂದ ಶೋಭಿಸುತ್ತವೆ; ಅವು ಆನಂದಘೋಷಮಾಡಿ ಹಾಡುತ್ತವೋ ಎಂಬಂತಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಹುಲ್ಲುಗಾವಲುಗಳು ಕುರಿಹಿಂಡುಗಳೆಂಬ ವಸ್ತ್ರವನ್ನು ಹೊದೆದುಕೊಂಡಿವೆ; ತಗ್ಗುಗಳು ಬೆಳೆಯಿಂದ ಶೋಭಿಸುತ್ತವೆ; ಅವು ಆನಂದಘೋಷಮಾಡಿ ಹಾಡುತ್ತವೋ ಎಂಬಂತಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ. ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ. ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಹುಲ್ಲುಗಾವಲುಗಳು ಮಂದೆಗಳಿಂದ ಹೊದಿಕೆಯಾಗಿವೆ. ಕಣಿವೆಗಳು ಸಹ ಧಾನ್ಯದಿಂದ ಮುಚ್ಚಿರುತ್ತವೆ. ಅವು ಉತ್ಸಾಹಗೊಂಡು ಹಾಡುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 65:13
17 ತಿಳಿವುಗಳ ಹೋಲಿಕೆ  

ಹೊರಡುವಿರಿ ನೀವು ಆನಂದಭರಿತರಾಗಿ ಬರುವಿರಿ ನೆಮ್ಮದಿಯಿಂದ ಸಾಲಾಗಿ. ನಿಮ್ಮ ಮುಂದೆ ತಟ್ಟಾಡುವುವು ಬೆಟ್ಟಗುಡ್ಡಗಳು ಚಪ್ಪಾಳೆ ಹೊಡೆಯುವುವು ಅಡವಿಯ ಗಿಡಮರಗಳು.


ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ.”


ಜಯ ಜಯಕಾರ ಮಾಡು ಓ ಆಕಾಶವೇ, ಜಯಘೋಷ ಮಾಡು ಭೂ ತಳವೇ, ಹರ್ಷಧ್ವನಿಗೈಯಿರಿ ಬೆಟ್ಟಗುಡ್ಡಗಳೇ ವನವೃಕ್ಷಗಳೇ. ವಿಮೋಚಿಸಿದನು ಸರ್ವೇಶ್ವರ ಯಕೋಬನನು, ಇಸ್ರಯೇಲನ್ನು ರಕ್ಷಿಸಿ ಪ್ರಚಾರಗೊಳಿಸಿದನು ತನ್ನ ಮಹಿಮೆಯನು.


ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.


ಆಹಾ! ಎಷ್ಟು ಸುಂದರ, ಎಷ್ಟು ಮನೋಹರ ಆ ನಾಡಿನ ದೃಶ್ಯ! ಪುಷ್ಟಿಗೊಳಿಸುವುವು ಯುವಕಯುವತಿಯರನು ದ್ರಾಕ್ಷೆ, ದವಸಧಾನ್ಯ!


ಹರ್ಷಾನಂದಗಳು ತೋಟಗಳಿಂದಲೂ ಮೋವಾಬಿನ ಇಡೀ ನಾಡಿನಿಂದಲೂ ತೊಲಗಿವೆ. ತೊಟ್ಟಿಗಳಲ್ಲಿ ದ್ರಾಕ್ಷಾರಸ ಇಲ್ಲದಂತಾಗಿದೆ. ಯಾರೂ ತೊಟ್ಟಿಯಲ್ಲಿ ತುಳಿಯುತ್ತಾ ಆನಂದ ಧ್ವನಿಗೈಯುತ್ತಿಲ್ಲ. ಕೇಳಿಸುವಾ ಧ್ವನಿ ಆನಂದ ಧ್ವನಿ ಅಲ್ಲ.


ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ, ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ, ಬಿಡುಗಡೆ ಮಾಡಿರುವನು ಸರ್ವೇಶ್ವರ ಜೆರುಸಲೇಮನು ತಂದಿರುವನು ತನ್ನ ಜನರಿಗೆ ಸಮಾಧಾನವನು.


ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖದುಗುಡದ ಕಹಿ.


ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ ಕಣಜಗಳು I ಈಯಲಿ ಸಾವಿರಾರು ಮರಿಗಳನು ನಮ್ಮ ಹೊಲದ ಕುರಿಗಳು II


ಸಮೃದ್ಧಿಯಾಗಲಿ ನಾಡಿನ ದವಸಧಾನ್ಯ ನೆಲಮಲೆಗಳ ಮೇಲೆ I ಸೊಂಪಾಗಲಿ ಅದರ ಹಣ್ಣುಹಂಪಲು ಲೆಬನೋನಿನ ಮರಗಳಂತೆ I ಹುಲುಸಾಗಲಿ ನಗರ ನಿವಾಸಿಗಳ ಸಂಖ್ಯೆ ಬಯಲಿನ ಹುಲ್ಲಿನಂತೆ II


ಹೀಗೆ ಜನಾಂಗಗಳನ್ನು ಪೋಷಣೆ ಮಾಡುತ್ತಾನೆ ಆಹಾರವನ್ನು ಧಾರಾಳವಾಗಿ ದಯಪಾಲಿಸುತ್ತಾನೆ.


ಹರ್ಷಧ್ವನಿಗೈ ಆಕಾಶವೇ ಉಲ್ಲಾಸಪಡು ಪೊಡವಿಯೇ ತಟ್ಟಾಡಿರಿ ಬೆಟ್ಟಗುಡ್ಡಗಳೇ ಏಕೆನೆ ಸಂತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು ಕನಿಕರಿಸಿಹನು ಶೋಷಿತರಾದ ತನ್ನ ಜನರನು.


ಭೂಜಂತುಗಳೇ ಅಂಜಬೇಡಿ, ವನವೃಕ್ಷಗಳು ಫಲಭರಿತವಾಗಿರುವುವು; ಅಂಜೂರ, ದ್ರಾಕ್ಷಿಗಳೆಲ್ಲವೂ ತುಂಬಿ ತುಳುಕುವುವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು