Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 59:4 - ಕನ್ನಡ ಸತ್ಯವೇದವು C.L. Bible (BSI)

4 ನಿರಪರಾಧಿ, ನಿರ್ದೋಷಿ ನಾನಾದರು I ಮೇಲೆ ಬೀಳಲಿದೋ ಸಜ್ಜುಗೊಂಡಿಹರು I ಎಚ್ಚೆತ್ತು ಪ್ರಭು, ನನಗೆ ನೆರವಾಗಿರು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಮುತ್ತಿಗೆ ಹಾಕಿ ನಿಂತಿದ್ದಾರೆ; ಎದ್ದು ಬಂದು ಪರಾಂಬರಿಸಿ ನನಗೆ ಸಹಾಯಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಓಡಿಬಂದು ನಿಂತಿದ್ದಾರೆ; ಎದ್ದು ಬಂದು ಪರಾಂಬರಿಸಿ ನನಗೆ ಸಹಾಯ ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅವರು ನನ್ನ ಮೇಲೆ ಆಕ್ರಮಣಮಾಡಲು ಬರುತ್ತಿದ್ದಾರೆ, ಆದರೆ ನಾನೇನು ತಪ್ಪು ಮಾಡಿಲ್ಲ. ಯೆಹೋವನೇ, ಸ್ವತಃ ನೀನೇ ಬಂದು ನೋಡು!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಹಾನಿಮಾಡಲು ಸಿದ್ಧರಾಗಿದ್ದಾರೆ. ನನ್ನ ಅವಸ್ಥೆಯನ್ನು ನೋಡಿರಿ, ನನಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 59:4
13 ತಿಳಿವುಗಳ ಹೋಲಿಕೆ  

ನನ್ನ ನ್ಯಾಯವನು ನಿರ್ಣಯಿಸು ದೇವಾ ಎಚ್ಚೆತ್ತು I ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು ನಿಂತು II


ಕಾಲುಕೆರೆದು ನಿಂತಿಹರು ರಕುತ ಪಾತಕೆ


ಆದುದರಿಂದ ನೀವು ನ್ಯಾಸಭೆಯವರೊಂದಿಗೆ ಸೇರಿ ಪೌಲನನ್ನು ನಿಮ್ಮ ಬಳಿಗೆ ಕರೆದುತರಬೇಕೆಂದು ಸಹಸ್ರಾಧಿಪತಿಗೆ ಹೇಳಿಕಳುಹಿಸಿರಿ. ಅವನ ಬಗ್ಗೆ ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆಯೆಂದು ನಟಿಸಿರಿ. ನಾವು ಹೊಂಚುಹಾಕಿಕೊಂಡಿದ್ದು ಅವನು ಇಲ್ಲಿಗೆ ಬರುವ ಮೊದಲೇ ಅವನನ್ನು ಸಂಹರಿಸಿಬಿಡುತ್ತೇವೆ,” ಎಂದರು.


ನಿಮ್ಮ ಕಾಲುಗಳು ಓಡುವುದು ಕೇಡಿಗಾಗಿ, ನೀವು ತವಕಪಡುವುದು ನಿರಪರಾಧಿಯ ರಕ್ತಪಾತಕ್ಕಾಗಿ. ನಿಮ್ಮ ಈ ಆಲೋಚನೆಗಳು ದುಷ್ಟವಾದುವು, ನೀವು ಹಿಡಿದ ಹಾದಿಗಳು ತರುವುದು ನಾಶವಿನಾಶವನ್ನೇ.


ಎಚ್ಚರಗೊಳ್ಳು ಸರ್ವೇಶ್ವರನ ಭುಜವೇ, ಎಚ್ಚರಗೊಂಡು ಬಲವನು ತಂದುಕೊ ಭುಜವೇ, ಪೂರ್ವಕಾಲದೊಳು ಪುರಾತನ ಪೀಳಿಗೆಯೊಳು ಎಚ್ಚರಗೊಂಡಂತೆ ಎಚ್ಚೆತ್ತುಕೊ ಈಗಲು. ರಹಬನ್ನು ಛೇದಿಸಿಬಿಟ್ಟ ಭುಜ ನೀನಲ್ಲವೆ? ಘಟಸರ್ಪವನು ಅಪ್ಪಳಿಸಿದ ಭುಜ ನೀನಲ್ಲವೆ?


ಅವರ ಕಾಲು ಕೇಡನ್ನು ಹಿಂಬಾಲಿಸಿ ಓಡುತ್ತವೆ ರಕ್ತಪಾತಕ್ಕಾಗಿ ಅವರು ತುಡಿಯುತ್ತಿರುತ್ತಾರೆ.


ಪ್ರಭೂ, ಎದ್ದೇಳು, ನಿದ್ರಿಸಬೇಡ I ನಮ್ಮನು ಎಂದೆಂದಿಗೂ ತೊರೆಯಬೇಡ II


ಕಳ್ಳ ವೈರಿಗಳೆನ್ನ ನೋಡಿ ಹಿಗ್ಗಲು ಬಿಡಬೇಡ I ಈ ಕಾರಣ ಶತ್ರುಗಳು ಕಣ್ಣು ಮಿಟುಕಿಸುವುದು ಬೇಡ II


ಹುಸಿ ನುಡಿವವರನು ಪ್ರಭು, ನೀ ನಾಶಮಾಡುವೆ I ಹಿಂಸಕರನು, ವಂಚಕರನು ನೀ ಹೇಸಿಬಿಡುವೆ II


ನಾನು ಹಿಬ್ರಿಯ ದೇಶದವನು. ಕೆಲವರು ನನ್ನನ್ನು ಗುಲಾಮನನ್ನಾಗಿ ಈ ದೇಶಕ್ಕೆ ಹಿಡಿದುತಂದರು. ಇಲ್ಲಿಯೂ ಸೆರೆಗೆ ಗುರಿಯಾಗಿಸುವಂಥ ದ್ರೋಹವನ್ನು ನಾನೇನು ಮಾಡಿಲ್ಲ,” ಎಂದನು.


ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿದನು. “ಒಡೆಯರಾದ ತಾವು ತಮ್ಮ ಸೇವಕ ದಾವೀದನಿಗೆ ಅನ್ಯಾಯ ಮಾಡಬಾರದು; ಅವನು ನಿಮಗೆ ದ್ರೋಹ ಮಾಡಲಿಲ್ಲ; ಅವನು ಮಾಡಿದ್ದೆಲ್ಲವು ನಿಮ್ಮ ಹಿತಕ್ಕಾಗಿಯೇ.


ಇಂಥಾ ದ್ರೋಹಿಗಳು ತಪ್ಪಿಸಿಕೊಳ್ಳಬಾರದಯ್ಯಾ I ರೌದ್ರದಿಂದಾ ಜನರನು ನೀ ಕೆಡವಿಬಿಡು ದೇವಾ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು