Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 56:2 - ಕನ್ನಡ ಸತ್ಯವೇದವು C.L. Bible (BSI)

2 ವಿರೋಧಿಗಳು ದಿನವಿಡೀ ಬೆನ್ನಟ್ಟಿ ಬರುತಿಹರು I ಸೊಕ್ಕಿನಿಂದ ನನಗೆದುರಾಗಿ ನಿಂತಿರುವರು ಹಲವರು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಹೊಂಚುಹಾಕಿ ನನ್ನನ್ನು ನುಂಗಿಬಿಡಬೇಕೆಂದು ಯಾವಾಗಲೂ ಬಾಯ್ದೆರೆದಿದ್ದಾರೆ; ಸೊಕ್ಕಿನಿಂದ ನನ್ನ ಮೇಲೆ ಯುದ್ಧಕ್ಕೆ ನಿಂತವರು ಎಷ್ಟೋ ಜನರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಹೊಂಚುಹಾಕಿ ನನ್ನನ್ನು ನುಂಗಿಬಿಡಬೇಕೆಂದು ಯಾವಾಗಲೂ ಬಾಯ್ದೆರೆದಿದ್ದಾರೆ; ಸೊಕ್ಕಿನಿಂದ ನನ್ನ ಮೇಲೆ ಯುದ್ಧಕ್ಕೆ ನಿಂತವರು ಎಷ್ಟೋ ಮಂದಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನನ್ನ ವೈರಿಗಳು ಸತತವಾಗಿ ನನ್ನ ಮೇಲೆ ಆಕ್ರಮಣ ಮಾಡುವರು. ಅವರಲ್ಲಿರುವ ಹೋರಾಟಗಾರರು ಅಸಂಖ್ಯಾತ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ಬೆನ್ನಟ್ಟುತ್ತಿದ್ದಾರೆ. ಗರ್ವದಿಂದ ನನಗೆ ವಿರೋಧವಾಗಿ ಯುದ್ಧ ಮಾಡುತ್ತಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 56:2
16 ತಿಳಿವುಗಳ ಹೋಲಿಕೆ  

ಆತ ನೆರವಾಗುವನೆನಗೆ ಪರಲೋಕದಿಂದ I ತಪ್ಪಿಸುವನು ನನ್ನನು ಬೆನ್ನಟ್ಟಿ ಬರುವವರಿಂದ II ತೋರ್ಪಡಿಸುವನು ಸತ್ಯತೆಯನು I ತನ್ನ ಅಚಲ ಪ್ರೀತಿಯನಾ ದೇವನು II


ಇವು ಪವಾಡ ಕಾರ್ಯಗಳನ್ನು ಎಸಗುವ ದೆವ್ವಾತ್ಮಗಳು. ಸರ್ವಶಕ್ತ ದೇವರ ಮಹಾದಿನದಲ್ಲಿ ನಡೆಯುವ ಯುದ್ಧಕ್ಕಾಗಿ ಭೂಲೋಕದ ರಾಜರುಗಳನ್ನೆಲ್ಲಾ ಒಟ್ಟುಗೂಡಿಸಲು ಅವು ಹೊರಟವು.


ನಾನು ಸರ್ವೇಶ್ವರಸ್ವಾಮಿಯ ಸನ್ನಿಧಿಗೆ ಯಾವ ಕಾಣಿಕೆಯೊಂದಿಗೆ ಹೋಗಲಿ? ಮಹೋನ್ನತ ದೇವರಿಗೆ ಹೇಗೆ ಅಡ್ಡಬೀಳಲಿ? ಹೋಮಕ್ಕಾಗಿ, ಒಂದು ವರ್ಷದ ಎಳೆಕರುಗಳನ್ನು ತೆಗೆದುಕೊಂಡುಹೋಗಲೇ?


ಪರಾತ್ಪರ ದೇವರು ನಿಮ್ಮ ತಂದೆಯಾದ ನೆಬೂಕದ್ನೆಚ್ಚರ್ ಅವರಿಗೆ ರಾಜ್ಯ ಮಹತ್ವವನ್ನು ಹಾಗೂ ಮಾನ ಸನ್ಮಾನಗಳನ್ನು ದಯಪಾಲಿಸಿದ್ದರು.


“ಪರಮ ಪವಿತ್ರನ, ಶಾಶ್ವತ ಲೋಕದ ನಿತ್ಯನಿವಾಸಿಯಾದ ಮಹೋನ್ನತನ ಮಾತಿದು : ಉನ್ನತವಾದ ಪವಿತ್ರಾಲಯದಲ್ಲಿ ವಾಸಿಸುವವನು ನಾನು; ಆದರೂ ಪಶ್ಚಾತ್ತಾಪಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.


ಸಾಗರಗಳ ಗರ್ಜನೆಗಿಂತ I ಸಮುದ್ರ ತರಂಗಗಳಿಗಿಂತ I ಮಹೋನ್ನತ ಪ್ರಭು ಬಲವಂತ II


ನೀನಾದರೊ ಪ್ರಭು, ಸರ್ವದಾ ಇರುವೆ I ಮಹೋನ್ನತದೊಳು ವಿರಾಜಿಸುತ್ತಿರುವೆ II


ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ I ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ II


ಪರಾತ್ಪರ ಪ್ರಭುವಿನ ಮೊರೆಹೊಕ್ಕಿರುವವನು I ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು II


ತಿರುಗುಬಾಣವಾಗಲಿ ಶತ್ರುಗಳೆನಗೆ ಬಯಸುವ ಕೇಡು I ಸತ್ಯಸ್ವರೂಪಿಯಾದ ನೀನು ಅವರನು ನಾಶಮಾಡು II


ನನ್ನೊಡನೆ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯ ಮಾಡು I ನನ್ನೊಡನೆ ಕದನ ಮಾಡುವವರೊಡನೆ ಪ್ರಭು, ಕದನ ಮಾಡು


ಪರಾತ್ಪರನೇ, ಮಾಡುವೆನು ನಿನ್ನ ನಾಮಸ್ತುತಿ I ಹರ್ಷಾನಂದಗೊಳ್ವೆನು‍ ದೇವಾ, ನಿನ್ನಲ್ಲತಿ II


ಪ್ರಭೂ, ನನಗೆ ವಿರೋಧಿಗಳು ಅನೇಕ I ನನಗೆದುರಾಗಿ ನಿಂತವರು ಅತ್ಯಧಿಕ II


“ಇವನ ಸಾವೆಂದು? ಇವ ನಿರ್ನಾಮವಾಗುವದೆಂತು?” I ನನಗೆ ಕೇಡು ಬಯಸುವವರ ಕುಹಕ ನುಡಿಯಿದು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು