Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 55:20 - ಕನ್ನಡ ಸತ್ಯವೇದವು C.L. Bible (BSI)

20 ಮಿತ್ರರ ಮೇಲೆ ಕೈಯೆತ್ತಿರುವನು ಆ ನನ್ನ ಗೆಳೆಯನು I ತಾನು ಮಾಡಿದ ಒಪ್ಪಂದವನು ತಾನೆ ಮೀರಿ ನಡೆದಿಹನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಆ ದ್ರೋಹಿಯಾದರೋ ತನ್ನೊಡನೆ ಸಮಾಧಾನದಿಂದಿದ್ದವರ ಮೇಲೆ ವಿರುದ್ಧವಾಗಿ ಕೈಯೆತ್ತಿ ತಾನು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 ಆ ದ್ರೋಹಿಯಾದರೋ ತನ್ನೊಡನೆ ಸಮಾಧಾನದಿಂದಿದ್ದವರ ಮೇಲೆ ವಿರೋಧವಾಗಿ ಕೈಯೆತ್ತಿ ತಾನು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ನನ್ನ ವೈರಿಗಳು ತಮ್ಮ ಸ್ನೇಹಿತರ ಮೇಲೆಯೇ ಆಕ್ರಮಣ ಮಾಡುವರು; ತಮ್ಮ ಒಡಂಬಡಿಕೆಗಳನ್ನು ತಾವೇ ಉಲ್ಲಂಘಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ನನ್ನ ಜೊತೆಗಾರನು ತನ್ನ ಸ್ನೇಹಿತನ ಮೇಲೆ ದಾಳಿಮಾಡಿದ್ದಾನೆ. ತಾನು ಮಾಡಿದ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 55:20
20 ತಿಳಿವುಗಳ ಹೋಲಿಕೆ  

ಆ ದಿನಗಳಲ್ಲಿ ಅರಸ ಹೆರೋದನು ಕ್ರೈಸ್ತಸಭೆಯ ಸದಸ್ಯರಲ್ಲಿ ಕೆಲವರನ್ನು ಹಿಂಸಿಸಲು ಆರಂಭಿಸಿದನು.


ಭಂಗಪಡಿಸೆನು ಎನ್ನ ಒಡಂಬಡಿಕೆಯನು I ಮೀರೆನು ನಾನವನಿಗೆ ಕೊಟ್ಟ ಮಾತನು II


ಉಪಕಾರಕ್ಕೆ ಅಪಕಾರವನ್ನೆಸಗಿಹರು I ಗೆಳೆತನಕ್ಕೆ ಹಗೆತನವನ್ನೇ ತೋರಿಹರು II


ದೇವರ ಮೇಲೆ ಇಟ್ಟ ಆಣೆಯ ನಿಮಿತ್ತ ಅರಸನ ಆಜ್ಞೆಯನ್ನು ಕೈಗೊಳ್ಳಬೇಕೆಂಬುದು ನನ್ನ ಬೋಧೆ.


ಇಂತೆಂದ ನೀನೆ ತ್ಯಜಿಸಿರುವೆ ನಿನ್ನಾಭಿಷಿಕ್ತನನು I ತಳ್ಳಿಬಿಟ್ಟಿರುವೆ ಕೋಪಾವೇಶದಿಂದ ಅವನನು II


ಇರುವುದು ಎನ್ನಚಲ ಪ್ರೀತಿ ಅವನ ಮೇಲೆ ಶಾಶ್ವತವಾಗಿ I ಅವನೊಡನೆ ನಾ ಮಾಡಿದೊಪ್ಪಂದ ಸ್ಥಿರಸ್ಥಾಯಿಯಾಗಿ II


ಅದಕ್ಕೆ ಆ ವ್ಯಕ್ತಿ, “ನೀವು ನನ್ನ ಕೈಯಲ್ಲಿ ಸಾವಿರ ಬೆಳ್ಳಿ ನಾಣ್ಯಗಳನ್ನು ಇಟ್ಟರೂ ಅರಸರ ಮಗನಿಗೆ ವಿರೋಧವಾಗಿ ಕೈಯೆತ್ತೆನು. ಅರಸರು ನಮ್ಮೆಲ್ಲರಿಗೆ ಕೇಳಿಸುವಂತೆ ನಿಮಗೆ, ಅಬೀಷೈಗೆ ಹಾಗು ಇತ್ತೈಗೆ, ‘ಜಾಗರೂಕತೆಯಿಂದಿರಿ! ಆ ಯುವಕ ಅಬ್ಷಾಲೋಮನನ್ನು ಯಾರೂ ಮುಟ್ಟಬಾರದು’ ಎಂದು ಆಜ್ಞಾಪಿಸಿದರಲ್ಲವೇ?


ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.


ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು. ಸೌಲನ ಶವವನ್ನು ಸಮಾಧಿಮಾಡಿದವರು ಯಾಬೇಷ್ ಗಿಲ್ಯಾದಿನವರೇ ಎಂಬ ಸಂಗತಿ ದಾವೀದನಿಗೆ ತಿಳಿಯಿತು.


ಇಂದು ಈ ಗವಿಯಲ್ಲಿ ಸರ್ವೇಶ್ವರ ನಿಮ್ಮನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೆಂಬುದು ಈಗ ನಿಮಗೆ ಗೊತ್ತಾಗಿರಬೇಕು. ನಿಮ್ಮನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಸರ್ವೇಶ್ವರನಿಂದ ಅಭಿಷಿಕ್ತರಾದ ನನ್ನ ಒಡೆಯರ ಮೇಲೆ ಕೈಯೆತ್ತುವುದಿಲ್ಲ,’ ಎಂದು ಹೇಳಿ ನಿಮ್ಮನ್ನು ಉಳಿಸಿದೆ.


ತನ್ನ ಬಳಿಯಲ್ಲಿದ್ದ ಸಿಪಾಯಿಗಳಿಗೆ, “ನೀವು ಹಿಂದಿರುಗಿ ಸರ್ವೇಶ್ವರನ ಈ ಯಾಜಕರನ್ನು ಕೊಲ್ಲಿರಿ; ದಾವೀದನು ಪಲಾಯನ ಆದದ್ದು ಗೊತ್ತಿದ್ದರೂ ನನಗೆ ತಿಳಿಸದೆ ಅವನಿಗೆ ಸಹಾಯಮಾಡಿದ್ದಾರೆ,” ಎಂದು ಆಜ್ಞಾಪಿಸಿದನು. ಆದರೆ ಅರಸನ ಸಿಪಾಯಿಗಳು ಸರ್ವೇಶ್ವರನ ಯಾಜಕರ ಮೇಲೆ ಕೈಹಾಕುವುದಕ್ಕೆ ಮನಸ್ಸುಮಾಡಲಿಲ್ಲ.


ಆ ಕಾಲದ ಪದ್ಧತಿಯನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ಸರ್ವೇಶ್ವರನಲ್ಲಿ ಭಯಭಕ್ತಿ ಇಸ್ರಯೇಲರಿಗಿಲ್ಲ; ಅವರಿಂದಲೇ ಇಸ್ರಯೇಲನೆಂಬ ಹೆಸರು ಹೊಂದಿದ ಯಕೋಬನ ಸಂತಾನದವರಿಗೆ ಕೊಡಲಾದ ಆಜ್ಞಾನಿಯಮವಿಧಿ ಧರ್ಮಶಾಸ್ತ್ರಗಳನ್ನು ಅವರು ಅನುಸರಿಸಲಿಲ್ಲ.


ತತ್ತರಿಸುವರು ಶತ್ರುಗಳೆಲ್ಲ ನಿರಾಶೆಯಿಂದ I ತಟ್ಟನೆ ಹಿಂಜರಿಯುವರವರೆಲ್ಲ ಅತಿ ಲಜ್ಜೆಯಿಂದ II


ನಿನ್ನ ಸಿಂಹಾಸನ ಸ್ಥಿರ ಆದಿಯಿಂದ I ನೀನಿರುವೆ ಪ್ರಭು ಅನಾದಿಯಿಂದ II


ಸ್ವಾಮಿ ಸರ್ವೇಶ್ವರನ ಕಣ್ಣು ನಾಟಿಸುವುದು ಸತ್ಯದ ಮೇಲೆ. ಅವರು ದಂಡಿಸಿದರೂ ನೀವು ಪಶ್ಚಾತ್ತಾಪಪಡಲಿಲ್ಲ. ಅವರು ನಸುಕಿದರೂ ನೀವು ತಿದ್ದುಕೊಳ್ಳಲು ಒಪ್ಪಲಿಲ್ಲ. ನಿಮ್ಮ ಮುಖವನ್ನು ಕಲ್ಲಿಗಿಂತ ಕಠಿಣ ಮಾಡಿಕೊಂಡಿರಿ. ಅವರಿಗೆ ಅಭಿಮುಖರಾಗಲು ಸಮ್ಮತಿಸದೆಹೋದಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು