Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 54:5 - ಕನ್ನಡ ಸತ್ಯವೇದವು C.L. Bible (BSI)

5 ತಿರುಗುಬಾಣವಾಗಲಿ ಶತ್ರುಗಳೆನಗೆ ಬಯಸುವ ಕೇಡು I ಸತ್ಯಸ್ವರೂಪಿಯಾದ ನೀನು ಅವರನು ನಾಶಮಾಡು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ನನ್ನ ಕೆಡುಕಿಗೆ ಸಮಯ ನೋಡುವವರು ತಾವೇ ಕೇಡನ್ನು ಅನುಭವಿಸಲಿ. ನೀನು ನಂಬಿಗಸ್ತನಲ್ಲವೇ; ಅವರನ್ನು ನಿರ್ಮೂಲಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ನನ್ನ ಕೆಡುಕಿಗೆ ಸಮಯನೋಡುವವರು ತಾವೇ ಕೇಡನ್ನು ಅನುಭವಿಸಲಿ. ನೀನು ನಂಬಿಗಸ್ತನಲ್ಲವೇ; ಅವರನ್ನು ನಿರ್ಮೂಲ ಮಾಡು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ನನಗೆ ವಿರೋಧವಾಗಿ ತಿರುಗಿರುವ ಜನರನ್ನು ನನ್ನ ದೇವರು ದಂಡಿಸುವನು. ದೇವರು ನನಗೆ ನಂಬಿಗಸ್ತನಾಗಿದ್ದಾನೆ. ಆತನು ಅವರನ್ನು ನಾಶಮಾಡುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ನನ್ನ ಕೆಡುಕನ್ನು ಬಯಸುವವರು ಕೇಡನ್ನು ಅನುಭವಿಸಲಿ. ನಿಮ್ಮ ನಂಬಿಗಸ್ತಿಕೆಯಿಂದ ನೀವು ಅವರನ್ನು ದಂಡಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 54:5
11 ತಿಳಿವುಗಳ ಹೋಲಿಕೆ  

ನಿನ್ನಚಲ ಪ್ರೀತಿಯಿಂದ ಧ್ವಂಸಮಾಡು ಶತ್ರುಗಳನು I ನಶಿಸಿಹಾಕು ಪ್ರಾಣವೈರಿಗಳನು, ನಾ ನಿನ್ನ ದಾಸನು II


ದಾವೀದನಿಗೆ ಪ್ರಭು, ನೀನಿತ್ತ ವಾಗ್ದಾನವೆಲ್ಲಿ? I ಗತಕಾಲದಲಿ ನೀ ತೋರಿದಚಲ ಪ್ರೀತಿಯೆಲ್ಲಿ? II


ದಂಡಿಸುವನಾ ಕೆಡುಕರನು ಅವರ ಕೆಟ್ಟತನಕ್ಕಾಗಿ I ನಿರ್ಮೂಲ ಮಾಡುವನಾ ಜನರ ದುಷ್ಟತನಕ್ಕಾಗಿ I ನಮ್ಮೊಡೆಯ ದೇವನು ಸಂಹರಿಸಿಬಿಡುವನು ಈ ಕಾರಣಕ್ಕಾಗಿ II


ಪ್ರಭುವಿನ ಭಕ್ತರೇ, ಪ್ರೀತಿಸಿ ನೀವಾತನನು ಅಧಿಕಾಧಿಕವಾಗಿ I ಶರಣರನು ರಕ್ಷಿಸಿ, ಸೊಕ್ಕಿನವರನು ಶಿಕ್ಷಿಸುವನಾತ ಸರಿಯಾಗಿ II


ಬೋಧಿಸೆನಗೆ ಪ್ರಭು, ನಿನ್ನ ಮಾರ್ಗವನು I ಶತ್ರುರಹಿತ ಹಾದಿಯಲಿ ನಡೆಸು ಎನ್ನನು II


ಅವಳು ಅಳೆದ ಅಳತೆಯಲ್ಲೇ ನೀವು ಅವಳಿಗೆ ಅಳೆಯಿರಿ; ಅವಳ ಕೃತ್ಯಗಳಿಗೆ ಇಮ್ಮಡಿಯಾಗಿ ಹಿಂದಿರುಗಿಸಿರಿ ಬೆರೆಸಿಕೊಡಿ ದ್ವಿಗುಣದಿ ಅವಳೇ ಬೆರೆಸಿದ ಮದ್ಯದ ಬಟ್ಟಲಲಿ.


ಕಂಚುಗಾರನಾದ ಅಲೆಗ್ಸಾಂಡರನು ನನಗೆ ಬಹಳ ಕೇಡುಮಾಡಿದ್ದಾನೆ. ಪ್ರಭು ಅವನ ಕೃತ್ಯಗಳಿಗೆ ತಕ್ಕ ಶಿಕ್ಷೆಯನ್ನು ವಿಧಿಸುವರು.


ಬಾಬಿಲೋನ್ ನಗರವೇ ಕೇಳು : ಅಳಿವು ಕಾದಿದೆ ನಿನಗೆ I ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ ತೀರಿಸುವವಗೆ I ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ II


ಶತ್ರುಗಳು ಮುತ್ತಿಹರು, ಸತ್ಯ ಪಥದಲಿ ನಡೆಸೆನ್ನನು I ನೇರಮಾಡೆನಗೆ ದೇವಾ, ನಿನ್ನ ಸಿರಿಮಾರ್ಗವನು II


ಆಲಿಸು ಪ್ರಭು ನನ್ನ ಪ್ರಾರ್ಥನೆ ಸೇರಲಿ ನಿನಗೀ ಬಿನ್ನಹ I ನಿನ್ನ ನೀತಿಸತ್ಯತೆಗಳನುಸಾರ ಪಾಲಿಸೆನಗೆ ಸದುತ್ತರ II


ಗರ್ವಿಗಳೆದ್ದಿಹರು ದೇವಾ, ನನ್ನ ವಿರುದ್ಧವಾಗಿ I ನನ್ನ ಪ್ರಾಣಕೆ ಕಾದಿಹರು ಕ್ರೂರಿಗಳು ಗುಂಪಾಗಿ I ಕಾಣುತ್ತಿಹರವರು ನಿನ್ನನು ಪ್ರಭು, ಅಲಕ್ಷ್ಯವಾಗಿ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು