Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 52:8 - ಕನ್ನಡ ಸತ್ಯವೇದವು C.L. Bible (BSI)

8 ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆಮರದಂತಿರುವೆನು I ದೇವರ ಸ್ಥಿರಪ್ರೀತಿಯನು ಯುಗಾಂತರಕು ನಂಬಿಕೊಂಡಿರುವೆನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು; ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ. ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಾನಾದರೋ ದೇವರ ಆಲಯದಲ್ಲಿರುವ ಅಭಿವರ್ದಿಸುವ ಓಲಿವ್ ಮರದ ಹಾಗೆ ಇರುವೆನು. ದೇವರ ಒಡಂಬಡಿಕೆಯ ಪ್ರೀತಿಯಲ್ಲಿ ಯುಗಯುಗಾಂತರವೂ ಭರವಸವಿಟ್ಟಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 52:8
10 ತಿಳಿವುಗಳ ಹೋಲಿಕೆ  

ನದಿಯ ಬದಿಯಲೇ ಬೆಳೆದಿಹ ಮರದಂತೆ I ಸಕಾಲಕೆ ಫಲವೀವ ವೃಕ್ಷದಂತೆ I ಎಲೆಬಾಡದೆ ಪಸಿರಿರುವ ತರುವಂತೆ I ಸಿಗುವುದು ಅವನ ಕಾರ್ಯಗಳಿಗೆ ಸಫಲತೆ II


ನಿನ್ನಚಲ ಪ್ರೀತಿಯಲ್ಲಿದೆ ನನಗಿದೆ ವಿಶ್ವಾಸ I ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ II


ಸರ್ವೇಶ್ವರನಾದ ನಾನು ಅದಕ್ಕೆ ‘ಸುಂದರ ಫಲದಿಂದ ಕೂಡಿದ ಚೆಲುವಾದ ಹಚ್ಚನೆಯ ಓಲಿವ್ ಮರ’ ಎಂದು ಹೆಸರಿಟ್ಟೆ. ಆದರೆ ಅದೇ ಮರಕ್ಕೆ ಬೆಂಕಿಯಿಟ್ಟು ಧಗಧಗನೆ ಉರಿಯುವಂತೆ ಮಾಡುವೆನು. ಅದರ ರೆಂಬೆಗಳು ಸುಟ್ಟುಹೋಗುವುವು.


ನೀನು ಕಾಡು ಓಲಿವ್ ಮರದಿಂದ ಕಡಿದ ರೆಂಬೆ. ಉತ್ತಮ ತಳಿಯ ಓಲಿವ್ ಮರಕ್ಕೆ ಕೃತಕವಾಗಿ ಕಸಿಕಟ್ಟಲಾಗಿರುವೆ. ಇಸ್ರಯೇಲರಾದರೋ ಉತ್ತಮ ತಳಿಯ ಓಲಿವ್ ಮರದಲ್ಲೇ ಹುಟ್ಟಿ ಬೆಳೆದ ರೆಂಬೆಗಳು. ಅದೇ ಮರದಲ್ಲಿ ಹುಟ್ಟಿ ಬೆಳೆದ ರೆಂಬೆಗಳನ್ನು ಕಡಿದು ಮತ್ತೆ ಅದಕ್ಕೆ ಕಸಿಕಟ್ಟುವುದು ಎಷ್ಟೋ ಸುಲಭವಲ್ಲವೆ?


ಮೆಚ್ಚುವನಾತ ತನ್ನಲಿ ಭಯಭಕ್ತಿಯುಳ್ಳವರನು I ತನ್ನಚಲ ಪ್ರೀತಿಯಲಿ ಭರವಸೆಯುಳ್ಳವರನು II


ಇರುವಳು ನಿನ್ನ ಪತ್ನಿ ಮನೆಯಲ್ಲಿ ಫಲಭರಿತ ದ್ರಾಕ್ಷಾಲತೆಯಂತೆ I ಕೂರುವರು ನಿನ್ನ ಮಕ್ಕಳು ಊಟದ ಪಂಕ್ತಿಯಲಿ ಓಲಿವ್ ಸಸಿಗಳಂತೆ II


ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II


“ನ್ಯಾಯ ನಿರ್ಣಯಿಸುವಂಥ ದೇವನಿಹನು ಜಗದಲಿ I ಸಜ್ಜನರಿಗೆ ಸತ್ಫಲ ಕಟ್ಟಿಟ್ಟ ಬುತ್ತಿ,” ಇದು ನಾಣ್ನುಡಿ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು