Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 50:18 - ಕನ್ನಡ ಸತ್ಯವೇದವು C.L. Bible (BSI)

18 ಕಂಡೊಡನೆ ಬೇಕು ನಿಮಗೆ ಚೋರರ ಕೂಟ I ಸಾಕಾಗಿಲ್ಲ ನಿಮಗೆ ಜಾರರ ಒಡನಾಟ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನೀವು ಕಳ್ಳರೊಡನೆ ಸೇರಿ ಅವರಿಗೆ ಸಮ್ಮತಿ ನೀಡುತ್ತೀರಿ; ಜಾರರ ಒಡನಾಟದಲ್ಲಿ ನೀವು ಸಂತೋಷದಿಂದ ಇರುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನೀವು ಚೋರರೊಡನೆ ಸಂತೋಷದಿಂದ ಸೇರುತ್ತೀರಿ; ಜಾರರ ಒಡನಾಟವೇ ನಿಮಗೆ ಇಷ್ಟ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ನೀವು ಕಳ್ಳನನ್ನು ಕಂಡು ಅವನೊಂದಿಗೆ ಸೇರಿಕೊಳ್ಳಲು ಓಡಿಹೋಗುವಿರಿ; ವ್ಯಭಿಚಾರಿಗಳ ಒಡನಾಟ ಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಕಳ್ಳನನ್ನು ಕಂಡರೆ ಅವನೊಂದಿಗೆ ಸೇರಿಕೊಳ್ಳುತ್ತೀರಿ. ವ್ಯಭಿಚಾರಿಗಳ ಸಂಗಡ ನಿಮಗೆ ಪಾಲು ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 50:18
14 ತಿಳಿವುಗಳ ಹೋಲಿಕೆ  

ದೇವರ ಸೇವೆಗೆಂದು ಅವಸರದಿಂದ ಯಾರ ಮೇಲೂ ಹಸ್ತನಿಕ್ಷೇಪ ಮಾಡಿ ದೀಕ್ಷೆ ನೀಡಬೇಡ. ಹಾಗೆ ಮಾಡಿದರೆ, ಅವರ ಪಾಪಗಳಲ್ಲಿ ನೀನೂ ಭಾಗಿಯಾಗುವೆ. ನೀನು ಪರಿಶುದ್ಧನಾಗಿರುವ ಹಾಗೆ ನೋಡಿಕೋ.


ಇಂಥವುಗಳನ್ನು ಮಾಡುವವರು ಮರಣದಂಡನೆಗೆ ಪಾತ್ರರು ಎಂಬ ದೈವನಿಯಮವನ್ನು ಅರಿತಿದ್ದರೂ ಇಂಥ ಹೀನ ಕೃತ್ಯಗಳನ್ನು ಮಾಡುತ್ತಾರೆ. ತಾವು ಮಾಡುವುದೇ ಅಲ್ಲದೆ ಹಾಗೆಮಾಡುವ ಇತರರನ್ನೂ ಪ್ರೋತ್ಸಾಹಿಸುತ್ತಾರೆ.


ವಿವಾಹಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.


ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. ‘ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ’ ಎಂದುಕೊಳ್ಳುತ್ತೀರಿ.


ದುಷ್ಕೃತ್ಯಗಳನ್ನು ಮಾಡುವುದರಲ್ಲಿ ಅವರದು ನುರಿತ ಕೈ. ಅಧಿಕಾರಿಗಳು ಮತ್ತು ನ್ಯಾಯಾಧಿಪತಿಗಳು ಲಂಚಕ್ಕಾಗಿ ಕೈಯೊಡ್ಡುತ್ತಾರೆ. ದೊಡ್ಡ ದೊಡ್ಡ ವ್ಯಕ್ತಿಗಳು ತಮ್ಮ ಅಂತರಂಗದ ದುರಾಸೆಯನ್ನು ವ್ಯಕ್ತಪಡಿಸುತ್ತಾರೆ. ಎಲ್ಲರು ಒಟ್ಟಿಗೆ ಸೇರಿ ಒಳಸಂಚುಮಾಡುತ್ತಾರೆ.


ಲಂಚಕ್ಕೋಸ್ಕರ ನಿರ್ದೋಷಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿ ವಂಚಿಸುವವರಿಗೆ ಧಿಕ್ಕಾರ !


“ಯಾವನಾದರು ಪರಪತ್ನಿಯೊಡನೆ ವ್ಯಭಿಚಾರ ಮಾಡಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು.


ಆಗ ಯೋನಾದಾಬನು, “ನೀನು ಅಸ್ವಸ್ಥನಾದವನಂತೆ ನಟಿಸಿ ಹಾಸಿಗೆಯ ಮೇಲೆ ಮಲಗಿಕೋ; ನಿನ್ನ ತಂದೆ ನಿನ್ನನ್ನು ನೋಡುವುದಕ್ಕೆ ಬಂದಾಗ, ‘ದಯವಿಟ್ಟು ನನ್ನ ತಂಗಿ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವುದಕ್ಕೆ ಕಳುಹಿಸಿ. ಆಕೆ ನನ್ನೆದುರಿನಲ್ಲೇ ಸಿದ್ಧಮಾಡಿಕೊಡುವುದಾದರೆ ಊಟಮಾಡುತ್ತೇನೆ’ ಎಂದು ಹೇಳು,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು