Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 50:16 - ಕನ್ನಡ ಸತ್ಯವೇದವು C.L. Bible (BSI)

16 ದುರ್ಜನರಿಗೆ ದೇವ ಹೇಳುವನು ಇಂತೆಂದು I “ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು? I ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?” II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ, “ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು? ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ದುಷ್ಟರಿಗಾದರೋ ದೇವರು ಹೇಳುವದೇನಂದರೆ - ನನ್ನ ವಿಧಿಗಳನ್ನು ಪಠಿಸುವದಕ್ಕೆ ನಿಮಗೇನು ಬಾಧ್ಯತೆ ಉಂಟು? ನನ್ನ ನಿಬಂಧನೆಯನ್ನು ಉಚ್ಚರಿಸುವದು ನಿಮಗೇನು ಕೆಲಸ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ದೇವರು ದುಷ್ಟರಿಗೆ ಹೀಗೆನ್ನುವನು: “ನೀವು ನನ್ನ ಕಟ್ಟಳೆಗಳ ಕುರಿತು ಮಾತಾಡುವಿರಿ; ನನ್ನ ಒಡಂಬಡಿಕೆಯ ಕುರಿತು ಮಾತಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆದರೆ ದುಷ್ಟನಿಗೆ ದೇವರು ಹೇಳುವುದೇನೆಂದರೆ: “ನನ್ನ ನಿಯಮಗಳನ್ನು ಪಠಿಸುವುದಕ್ಕೆ ಹಕ್ಕು ನಿಮಗೆ ಏನಿದೆ? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಛರಿಸುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 50:16
20 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಹೀಗೆಂದರು : “ಈ ಜನರು ನನ್ನನ್ನು ಸಮೀಪಿಸುವುದು ಬರೀ ಮಾತಿನ ಮರ್ಯಾದೆಯಿಂದ, ಇವರು ನನ್ನನ್ನು ಸನ್ಮಾನಿಸುವುದು ಬರೀ ಮಾತಿನ ಮಾಲೆಯಿಂದ, ಇವರ ಹೃದಯವಾದರೋ ಬಲು ದೂರವಿದೆ ನನ್ನಿಂದ, ಇವರು ನನಗೆ ಸಲ್ಲಿಸುವ ಭಕ್ತಿ ಕೂಡಿದೆ ಕೇವಲ ಭಯದಿಂದ, ಕಲಿತಿಹರಿವರು ಮಾನವಕಲ್ಪಿತ ಕಟ್ಟಳೆಯನು ಬಾಯಿಪಾಠದಿಂದ.


ಪ್ರಭುವಿನ ಮೈತ್ರಿ, ಭಯಭಕುತಿಯುಳ್ಳವರಿಗೆ I ಅಂಥವರಿಗೆ ವ್ಯಕ್ತ, ಆತನ ಒಡಂಬಡಿಕೆ II


ಇವರು ಹಾದಿತಪ್ಪಿದವರು, ಸನ್ಮಾರ್ಗವನ್ನು ತ್ಯಜಿಸಿದವರು; ಬೆಯೋರನ ಮಗ ಬಿಳಾಮನ ದಾರಿಯನ್ನು ಹಿಡಿದವರು.


ಈ ಒಡಂಬಡಿಕೆ, ನಾನು ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕೈಹಿಡಿದು ಕರೆತಂದಾಗ ಮಾಡಿದ ಒಡಂಬಡಿಕೆಯಂತಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ; ಎಂದೇ, ನಾನು ಅವರನ್ನು ಲಕ್ಷಿಸಲೂ ಇಲ್ಲ, ಎಂದರು ಸರ್ವೇಶ್ವರ.


ದೇವರು ಆತ್ಮಸ್ವರೂಪಿ, ಅವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು,” ಎಂದು ಹೇಳಿದರು.


ತುಂಟ ಆಡುವ ಜ್ಞಾನೋಕ್ತಿಯು ಕುಂಟಕಾಲಿನ ಜೋಲಾಟವು.


ಇತರರಿಗೆ ಕರೆಕೊಟ್ಟ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ, ನನ್ನನ್ನೇ ನಾನು ಹತೋಟಿಯಲ್ಲಿಟ್ಟುಕೊಳ್ಳುತ್ತೇನೆ.


ದುಷ್ಟನು ತಾನು ಮಾಡುತ್ತಿದ್ದ ದುಷ್ಟತನವನ್ನು ಬಿಟ್ಟು, ನ್ಯಾಯನೀತಿಗಳನ್ನು ನಡೆಸಿದರೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.


“ದುಷ್ಟರಿಗಿಲ್ಲ ಶಾಂತಿಸಮಾಧಾನ” ಇದು ಸರ್ವೇಶ್ವರ ಸ್ವಾಮಿಯ ವಚನ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು