Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 48:4 - ಕನ್ನಡ ಸತ್ಯವೇದವು C.L. Bible (BSI)

4-5 ಕೂಡಿದರೊಂದಾಗಿ ರಾಜರುಗಳು, ದಾಳಿಮಾಡಬಂದರು I ನೋಡಿ ನಿಬ್ಬೆರಗಾದರು, ತಲ್ಲಣಗೊಂಡು ಓಡಿಹೋದರು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ರಾಜರು ಕೂಡಿಕೊಂಡರು; ಅವರು ಒಗ್ಗಟ್ಟಾಗಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ರಾಜರು ಕೂಡಿಕೊಂಡರು; ಅವರು ಒಗ್ಗಟ್ಟಾಗಿ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಒಮ್ಮೆ, ಕೆಲವು ರಾಜರು ಒಟ್ಟಾಗಿ ಸೇರಿಬಂದರು. ಆ ಪಟ್ಟಣದ ಮೇಲೆ ದಾಳಿ ಮಾಡಲೆಂದು ಅವರೆಲ್ಲ ಅದರತ್ತ ನಡೆದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಏಕೆಂದರೆ, ಇಗೋ, ಅರಸರು ಕೂಡಿಬಂದರು. ಅವರು ಒಟ್ಟಾಗಿ ದಾಳಿಮಾಡಲು ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 48:4
12 ತಿಳಿವುಗಳ ಹೋಲಿಕೆ  

ಮೃಗವನ್ನು ಸೆರೆಹಿಡಿಯಲಾಯಿತು. ಅದರ ಜೊತೆಯಲ್ಲಿ ಕಪಟ ಪ್ರವಾದಿಯೂ ಸೆರೆಸಿಕ್ಕಿಬಿದ್ದನು. ಮೃಗದ ಮುಂದೆ ಪವಾಡ ಕಾರ್ಯಗಳನ್ನೆಸಗಿ ಅದರ ಮುದ್ರೆ ಒತ್ತಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಪೂಜೆ ಮಾಡಿದವರನ್ನು ಮರುಳುಗೊಳಿಸಿದವನು ಇವನೇ. ಇವರಿಬ್ಬರನ್ನೂ ಜೀವಸಹಿತ ಹಿಡಿದು ಗಂಧಕದಿಂದ ಉರಿಯುವ ಅಗ್ನಿಸರೋವರಕ್ಕೆ ಎಸೆಯಲಾಯಿತು.


“ನನ್ನ ದಂಡನಾಯಕರೆಲ್ಲ ಅರಸರಲ್ಲವೇ?


ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮೆಲ್ಯನ ಮಗನೂ ಇಸ್ರಯೇಲಿನ ಅರಸನೂ ಆದ ಪೆಕಹ ಎಂಬವರು ಜೆರುಸಲೇಮಿನ ಮೇಲೆ ದಂಡೆತ್ತಿಬಂದರು. ಆದರೆ ಅದನ್ನು ಜಯಿಸಲು ಅವರಿಂದಾಗಲಿಲ್ಲ.


ಈ ಕಾರಣ ಸಿರಿಯಾದ ಅರಸನು ಕಳವಳಗೊಂಡು, ತನ್ನ ಸೇನಾಪತಿಗಳನ್ನು ಕರೆದು, “ನಮ್ಮವರಲ್ಲಿ ಇಸ್ರಯೇಲರ ಅರಸನ ಪಕ್ಷದವರು ಯಾರೋ ಇದ್ದಾರೆ; ನನಗೆ ನೀವು ಯಾರೂ ತಿಳಿಸುವುದಿಲ್ಲವೇ?’ ಎಂದು ಕೇಳಿದನು.


ಹೊರನಾಡಿನ ರಾಯಭಾರಿಗಳಿಗೆ ನಮ್ಮ ಉತ್ತರವೇನು? “ಸರ್ವೇಶ್ವರ ಸ್ವಾಮಿ ಸ್ಥಾಪಿಸಿಹರು ಸಿಯೋನನ್ನು, ದೀನದಲಿತರು ಆಶ್ರಯಿಸಿಕೊಳ್ಳುವರು ಅದನ್ನು.”


ಕಾಲ ಬರುವುದು; ಆಗ ಹಾಡುವರು ಜುದೇಯ ನಾಡಿನಲ್ಲಿ ಈ ಗೀತೆಯನು : ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಾಕಾರ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು