Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 46:6 - ಕನ್ನಡ ಸತ್ಯವೇದವು C.L. Bible (BSI)

6 ನಡುಗಿದವು ರಾಷ್ಟ್ರಗಳು, ಉಡುಗಿದವು ರಾಜ್ಯಗಳು I ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಜನಾಂಗಗಳು ಕಳವಳಗೊಂಡವು; ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಜನಾಂಗಗಳು ಕಳವಳಗೊಂಡವು; ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಆತನು ಗರ್ಜಿಸಲು, ಜನಾಂಗಗಳು ಭಯದಿಂದ ನಡುಗುತ್ತವೆ, ರಾಷ್ಟ್ರಗಳು ಬಿದ್ದುಹೋಗುತ್ತವೆ; ಭೂಮಿಯು ಕರಗಿಹೋಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ರಾಷ್ಟ್ರಗಳು ಕೋಲಾಹಲದಲ್ಲಿವೆ ರಾಜ್ಯಗಳು ಬೀಳುತ್ತವೆ. ದೇವರು ತಮ್ಮ ಧ್ವನಿಯನ್ನೆತ್ತಲು ಭೂಮಿಯು ಕರಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 46:6
34 ತಿಳಿವುಗಳ ಹೋಲಿಕೆ  

ಸೇನಾಧಿಶ್ವರ ದೇವರಾದ ಸರ್ವೇಶ್ವರ ಮುಟ್ಟಿದ ಮಾತ್ರಕ್ಕೆ ಕರಗುವುದು ಭೂಮಿ. ಗೋಳಿಡುವುದು ಸಕಲ ಜನತೆ ಉಬ್ಬುವುದು ನಾಡೆಲ್ಲ ನೈಲ್ ನದಿಯಂತೆ ಕುಗ್ಗಿ ಕರಗುವುದು ಈಜಿಪ್ಟಿನ ನದಿಯಂತೆ


ಆತನೆದುರು ಅದರುತ್ತವೆ ಬೆಟ್ಟಗಳು ಕರಗುತ್ತವೆ ಗುಡ್ಡಗಳು. ಆತನ ದರ್ಶನಕೆ ಕಂಪಿಸುತ್ತದೆ ಭೂಗೋಳವು ತಲ್ಲಣಿಸುತ್ತದೆ ಲೋಕ ಲೋಕನಿವಾಸಿಗಳೆಲ್ಲವು.


ಬೆಂಕಿಗೆ ಕರಗುವ ಮೇಣದಂತೆ ಇಳಿಜಾರು ಪ್ರದೇಶದ ನೀರು ನೆಲವನ್ನು ಕೊರೆವಂತೆ ಕರಗಿಹೋಗುವುವು ಆತನ ಪಾದದಡಿ ಪರ್ವತಗಳು; ಸೀಳಿಹೋಗುವುವು ಕೊಲ್ಲಿಗಳು.


ಸರ್ವೇಶ್ವರ ಗರ್ಜಿಸಿ ತಮ್ಮ ಸೈನ್ಯಕ್ಕೆ ಆಜ್ಞಾಪಿಸುತ್ತಾರೆ. ಅವರ ಸೈನ್ಯ ದೊಡ್ಡದು. ಅವರ ಆಜ್ಞೆಯನ್ನು ಪಾಲಿಸುವವನು ಬಲಾಢ್ಯನು. ಸರ್ವೇಶ್ವರಸ್ವಾಮಿಯ ದಿನ ಮಹತ್ತರ; ಅತಿ ಭಯಂಕರ; ಅದರೆದುರಿಗೆ ನಿಲ್ಲಲು ಯಾರಿಗಿದೆ ಧೈರ್ಯ?


ಗುಡುಗಿದನು ಸರ್ವೇಶ್ವರ ಗಗನಮಂಡಲದಿಂದ I ಮೊಳಗಿತು ವಾಣಿ ಆ ಪರಾತ್ಪರನ ವದನದಿಂದ I ಸುರಿಯಿತಿದೋ ಕಲ್ಮಳೆ, ಉರಿಗೆಂಡ ಮೇಲಿಂದ II


ಕಾಲ ಬರುವುದು: ಆಗ - ಹೊಸ ಬಿತ್ತನೆಯಾಗುವುದು ಕೊಯ್ಯುವವನ ಹಿಂದೆಯೆ; ಹೊಸ ಫಸಲು ಸಿದ್ಧವಾಗುವುದು ದ್ರಾಕ್ಷೆ ತುಳಿಯುವವನ ಮುಂದೆಯೆ. ಸುರಿಸುವುವು ದ್ರಾಕ್ಷಾರಸವನು ಬೆಟ್ಟಗಳು ಕರಗುವಂತಿರುವುವು ಅದರಿಂದ ಎಲ್ಲ ಗುಡ್ಡಗಳು.


ಆಮೋಸನ ಪ್ರಕಟನೆ: ಗರ್ಜಿಸುತಿಹನು ಸರ್ವೇಶ್ವರ ಸಿಯೋನಿನಿಂದ ಧ್ವನಿಗೈಯುತಿಹನು ಜೆರುಸಲೇಮಿನಿಂದ; ಬಾಡಿಹೋಗುತ್ತಿವೆ ಕುರುಬರಾ ಹುಲ್ಲುಗಾವಲುಗಳು ಒಣಗಿಹೋಗುತ್ತಿವೆ ಕಾರ್ಮೆಲ್ ಗುಡ್ಡದ ನೆತ್ತಿಯ ಗಿಡಗಳು.


“(ಯೆರೆಮೀಯನೇ), ನೀನು ಪ್ರವಾದಿಸುತ್ತಾ ಅವರಿಗೆ ಈ ಮಾತುಗಳನ್ನು ಹೇಳು: ‘ಸರ್ವೇಶ್ವರ ಗರ್ಜಿಸುವನು ಮೇಲಣಲೋಕದಿಂದ ದನಿಗೈವನು ತನ್ನ ಘನ ನಿವಾಸದಿಂದ ಗಟ್ಟಿಯಾಗಿ ಕೂಗುವನು ತನ್ನ ಹುಲ್ಲುಗಾವಲಿನ ಮಂದೆಯ ವಿರುದ್ಧ ಕೂಗಾಡುವನು ದ್ರಾಕ್ಷೆಯ ಹಣ್ಣನ್ನು ತುಳಿಯುವವರಂತೆ ಭೂನಿವಾಸಿಗಳೆಲ್ಲರು ಭಯಭ್ರಾಂತರಾಗುವಂತೆ.


ಸಾರ್ವಭೌಮನಾದ ಪ್ರಭುವಿನ ಮುಂದೆ I ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ II


ಆದಿಮೊದಲು ಮೇಘಾರೂಢನಾಗಿರುವನು I ಕೊಂಡಾಡಿರಿ, ಗುಡುಗಿನಂತೆ ಗರ್ಜಿಸುವಾತನನು II


ನಡುಗಿತು ಪೊಡವಿ, ಕಂಪಿಸಿತು ಸೀನಾಯಿ, ದೇವ ಪ್ರತ್ಯಕ್ಷನಾದನೆಂದು I ಮಳೆಗರೆಯಿತು ಮೋಡಗಿರಿ, ಇಸ್ರಯೇಲ್ ದೇವ ಪ್ರತ್ಯಕ್ಷನಾದನೆಂದು II


ಸ್ವಲ್ಪಕಾಲವಾದ ಮೇಲೆ ಮೋವಾಬ್ಯರು, ಅಮ್ಮೋನಿಯರು ಹಾಗು ಮೆಗೂನ್ಯರಲ್ಲಿ ಕೆಲವರು ಯೆಹೋಷಾಫಾಟನಿಗೆ ವಿರುದ್ಧ ಯುದ್ಧಕ್ಕೆ ಬಂದರು.


ಇದಲ್ಲದೆ, ಅವರು ಯೆಹೋಶುವನಿಗೆ, “ಸರ್ವೇಶ್ವರಸ್ವಾಮಿ ನಿಜವಾಗಿ ಈ ನಾಡನ್ನೆಲ್ಲಾ ನಮಗೆ ಕೊಟ್ಟಿದ್ದಾರೆ. ಅದರ ನಿವಾಸಿಗಳೆಲ್ಲ ನಮ್ಮನ್ನು ಕಂಡು ನಡುಗುತ್ತ ಇದ್ದಾರೆ,” ಎಂದು ತಿಳಿಸಿದರು.


ಇದನ್ನೆಲ್ಲಾ ಕೇಳಿ ನಮ್ಮ ಎದೆ ಒಡೆದುಹೋಗಿದೆ. ನಿಮ್ಮನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲ. ನಿಮ್ಮ ದೇವರಾದ ಸರ್ವೇಶ್ವರರೊಬ್ಬರೇ ಪರಲೋಕದಲ್ಲೂ ಭೂಲೋಕದಲ್ಲೂ ದೇವರು.


“ಸರ್ವೇಶ್ವರ ಈ ನಾಡನ್ನು ನಿಮಗೆ ಕೊಟ್ಟಿದ್ದಾರೆಂದು ನಾನು ಬಲ್ಲೆ; ನಿಮ್ಮ ವಿಷಯದಲ್ಲಿ ನಮಗೆ ಮಹಾಭೀತಿ ಉಂಟಾಗಿದೆ. ನಾಡಿನ ನಿವಾಸಿಗಳೆಲ್ಲರೂ ಕಂಗೆಟ್ಟು ಹೋಗಿದ್ದಾರೆ.


ಅನಂತರ ಶ್ವೇತವರ್ಣದ ಒಂದು ಮಹಾಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು.


ನೀವು ಆ ಜನರಿಗೆ ಹೆದರಿಕೊಳ್ಳಬೇಡಿ.


ನನಗಾಗಿಯೂ ನನ್ನ ದಾಸ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು,’ ಎಂದಿದ್ದಾರೆ".


ಪ್ರಭುವಿನಲಿ ನಂಬಿಕೆ ನಿರೀಕ್ಷೆಯಿಂದಿರುವವರು I ನಿಶ್ಚಲ, ಸುಸ್ಥಿರ, ಗಿರಿ ಸಿಯೋನಿನಂತೆ ಇರುವರು II


ಹಕ್ಕಿಗಳು ಹಾರಾಡುತ್ತಾ ತನ್ನ ಮರಿಗಳನ್ನು ಕಾಪಾಡುವಂತೆ, ಸೇನಾಧೀಶ್ವರ ಸರ್ವೇಶ್ವರನಾದ ನಾನು ಜೆರುಸಲೇಮನ್ನು ಕಾಪಾಡುವೆನು. ಅದನ್ನು ಸಂರಕ್ಷಿಸಿ ಕಾಯುವೆನು, ಅಪಾಯದಿಂದ ತಪ್ಪಿಸುವೆನು.”


ನಮ್ಮ ಹಬ್ಬ ಆಚರಣೆಗಳ ನಗರವಾದ ಸಿಯೋನನ್ನು ದೃಷ್ಟಿಸಿನೋಡಿ. ಆ ಜೆರುಸಲೇಮನ್ನು ಕಣ್ಣಿಟ್ಟು ನೋಡಿ. ಅದು ನೆಮ್ಮದಿಯ ನಿವಾಸವಾಗಿ, ಕೀಳಲಾಗದ, ಕೆಡವಲಾಗದ ದೃಢವಾದ ಗುಡಾರದಂತೆ ನಿಂತಿರುವುದನ್ನು ನೀವು ಕಣ್ಣಾರೆ ಕಾಣುವಿರಿ.


ಪಟ್ಟಣದ ಸುತ್ತಳತೆ ಒಂಬತ್ತು ಸಾವಿರ ಮೀಟರ್‍ಗಳು. ಅದನ್ನು ನಿರ್ಮಿಸಿದಂದಿನಿಂದ ಆ ಪಟ್ಟಣಕ್ಕೆ ‘ಸರ್ವೇಶ್ವರನ ನೆಲೆ’ ಎಂದು ಹೆಸರಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು