Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 44:15 - ಕನ್ನಡ ಸತ್ಯವೇದವು C.L. Bible (BSI)

15 ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ I ಲಜ್ಜೆಯಿಂದ ನಾ ಮುಖ ಮುಚ್ಚಿಕೊಳ್ಳುವಂತಾಗಿದೆಯಲ್ಲಾ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ದೂಷಕರ ನಿಂದಾವಚನಗಳಿಂದಲೂ, ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ದೂಷಕರ ನಿಂದಾವಚನಗಳಿಂದಲೂ ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನಾಚಿಕೆಯು ನನ್ನನ್ನು ಕವಿದುಕೊಂಡಿದೆ. ಅವಮಾನವು ದಿವವೆಲ್ಲಾ ನನ್ನೆದುರಿನಲ್ಲೇ ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಿಂದಕನ ಮತ್ತು ದೂಷಕನ ಮಾತುಗಳಿಗೂ ಮುಯ್ಯಿಗೆ ಮುಯ್ಯಿ ತೀರಿಸುವ ಶತ್ರುವಿನ ನಿಮಿತ್ತವೂ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 44:15
11 ತಿಳಿವುಗಳ ಹೋಲಿಕೆ  

ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ I ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ II


‘ನಿಂದೆಯನ್ನು ಕೇಳಿ ನಾವು ಲಜ್ಜೆಗೊಂಡೆವು, ಮ್ಲೇಚ್ಛರು ಸರ್ವೇಶ್ವರನ ಪವಿತ್ರಾಲಯವನ್ನು ಪ್ರವೇಶಿಸಿದ್ದರಿಂದ ಅವಮಾನವು ನಮ್ಮ ಮುಖವನ್ನು ಆವರಿಸಿದೆ,’ ಎನ್ನುತ್ತೀರೋ?


ನಾವೇ ತಂದುಕೊಂಡ ಅವಮಾನವೆಂಬ ಹಾಸಿಗೆಯಲ್ಲಿ ಬಿದ್ದಿರೋಣ. ನಾಚಿಕೆಯೆಂಬ ಹೊದಿಕೆ ನಮ್ಮನ್ನು ಮುಚ್ಚಿಬಿಡಲಿ. ಚಿಕ್ಕತನದಿಂದ ಈವರೆಗು ನಾವೂ ನಮ್ಮ ಪೂರ್ವಜರೂ ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ಇದಿರಾಗಿ ಪಾಪಮಾಡುತ್ತಾ ಬಂದಿರುವುದು ನಿಶ್ಚಯ. ಆ ಸ್ವಾಮಿಯ ಮಾತನ್ನು ಕೇಳದೆಹೋದೆವಲ್ಲಾ!” ಎಂದು ಮೊರೆಯಿಡುತ್ತಿದ್ದಾರೆ.


ಮುಪ್ಪಾಗಿಸಿರುವೆ ಅವನನು ಕಾಲಕ್ಕೆ ಮುಂಚೆ I ನಿನ್ನ ನಿಮಿತ್ತ ಅವನನು ಆವರಿಸಿದೆ ಲಜ್ಜೆ II


ಆಶಾಭಂಗವು ದಹಿಸಿಬಿಡಲಿ ನನ್ನ ಪ್ರಾಣ ಕಂಟಕರನು I ನಿಂದಾಪಮಾನ ಕವಿದುಬಿಡಲಿ ನನಗೆ ಕೇಡು ಬಗೆವವರನು II


“ನನ್ನ ದೇವರೇ, ನಾನು ಮನಗುಂದಿದವನು ಆಗಿದ್ದೇನೆ; ನಿಮ್ಮ ಕಡೆಗೆ ಮುಖವನ್ನು ಎತ್ತುವುದಕ್ಕೆ ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ; ನಮ್ಮ ಅಪರಾಧ ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ!


ಅಸ್ಸೀರಿಯದ ಅರಸನ ದಂಡಿನಲ್ಲಿದ್ದ ಎಲ್ಲ ಶೂರರನ್ನೂ ನಾಯಕರನ್ನೂ ಅಧಿಪತಿಗಳನ್ನೂ ಸಂಹರಿಸಿದರು; ಆ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದರು.


ನಾನು ಕೊಟ್ಟ ನಾಡಿನಿಂದ ಇಸ್ರಯೇಲರನ್ನು ತೆಗೆದುಹಾಕುವೆನು; ನನ್ನ ಹೆಸರಿಗಾಗಿ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ಇಸ್ರಯೇಲರು ಎಲ್ಲಾ ಜನಾಂಗಗಳವರ ಲಾವಣಿಗೂ ನಿಂದೆಪರಿಹಾಸ್ಯಕ್ಕೂ ಗುರಿಯಾಗುವರು.


ದೇವರು ನನ್ನನು ಈಡಾಗಿಸಿದ್ದಾನೆ ಅನ್ಯರ ಕಟ್ಟುಗಾದೆಗೆ ನನ್ನ ಮುಖ ಗುರಿಯಾಗಿದೆ ಜನರ ಉಗುಳಾಟಕ್ಕೆ.


ಹಾದುಹೋಗುವವರೆಲ್ಲ ಕೈ ತಟ್ಟುತ್ತಾರಲ್ಲಾ ನಿನ್ನನ್ನು ನೋಡಿ ಜೆರುಸಲೇಮ್ ನಗರಿಯಾದ ನಿನ್ನನ್ನು ಗುರುತಿಸಿ ! “ಆಹಾ, ನೀನೇನೋ ಸರ್ವಾಂಗ ಸುಂದರಿ, ವಿಶ್ವಾನಂದದಾಯಕಿ !” ಎಂದು ಮೂದಲಿಸುತ್ತಾರಲ್ಲಾ ತಲೆಯಾಡಿಸಿ, ಸಿಳ್ಳುಹಾಕಿ !


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು