Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 41:10 - ಕನ್ನಡ ಸತ್ಯವೇದವು C.L. Bible (BSI)

10 ನೀನಾದರೋ ಪ್ರಭು ಕರುಣಿಸು, ಏಳ ಮಾಡೆನ್ನನು I ನಾನವರಿಗಾಗಿ ಮುಯ್ಯಿಗೆ ಮುಯ್ಯಿ ತೀರಿಸುವೆನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಯೆಹೋವನೇ, ನೀನಾದರೋ ಕರುಣಿಸಿ ನನ್ನನ್ನು ಏಳುವಂತೆ ಮಾಡು; ಆಗ ನಾನು ಅವರಿಗೆ ಮುಯ್ಯಿತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಯೆಹೋವನೇ, ನೀನಾದರೋ ಕರುಣಿಸಿ ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯೆಹೋವನೇ, ದಯವಿಟ್ಟು ನನಗೆ ದಯೆತೋರು; ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆದರೆ ಯೆಹೋವ ದೇವರೇ, ನೀವು ನನ್ನನ್ನು ಕರುಣಿಸಿ ನಾನು ಏಳುವಂತೆ ಮಾಡಿರಿ. ನಾನು ಅವರಿಗೆ ಮುಯ್ಯಿಗೆ ಮುಯ್ಯಿತೀರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 41:10
13 ತಿಳಿವುಗಳ ಹೋಲಿಕೆ  

“ಅಲ್ಲದೆ, ‘ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ,” ಎಂದ.”


“ಕರುಣಿಸೆನ್ನನು, ಕರುಣಿಸು, ದೇವನೇ I ನನ್ನಾತ್ಮದ ಆಸರೆಯು ನೀನೇ II ನನ್ನ ಗಂಡಾಂತರವು ನೀಗುವ ಪರಿಯಂತ I ನಿನ್ನ ರೆಕ್ಕೆಗಳಡಿ ನಾನಿರುವೆ ಸುರಕ್ಷಿತ II


ನೀನಾದರೋ ಪ್ರಭು, ನನಗೆ ರಕ್ಷೆ, ವಿಜಯದಾತ I ನಾನು ತಲೆಯೆತ್ತಿ ನಡೆಯುವಂತೆ ಮಾಡುವಾತ II


ಇದಲ್ಲದೆ ಅವನು ಶಾಂತಿಸಮಾಧಾನದ ಬಲಿದಾನ ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬವನನ್ನು ಅವನ ಊರಾದ ಗೀಲೋವಿನಿಂದ ಬರಮಾಡಿಸಿದ್ದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದುದರಿಂದ ಒಳಸಂಚು ಪ್ರಬಲವಾಗುತ್ತಾ ಹೋಯಿತು.


ನನ್ನ ನೋಡಿ ಆಪ್ತಮಿತ್ರರೆಲ್ಲರು ಹೇಸಿಕೊಳ್ಳುತ್ತಾರೆ ನನ್ನ ಮೇಲೆ ನನ್ನ ಪ್ರೀತಿಪಾತ್ರರೂ ತಿರುಗಿಬಿದ್ದಿದ್ದಾರೆ.


ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು I ನನಗೆ ಸರಿಯಾದವನು, ಗೆಳೆಯನು, ನನ್ನಾಪ್ತಮಿತ್ರನು II


ತೆರಳಲಿಲ್ಲವೆ ನಾವೀರ್ವರು ದೇವಾಲಯಕೆ I ಭಕ್ತರೊಂದಿಗೆ ಮಧುರ ಸಂಭಾಷಣೆಯೊಂದಿಗೆ? II


ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವನ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’ ಎಂದು ಗುಸುಗುಟ್ಟುತ್ತಿರುವರು ಬಹುಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ.


ನನ್ನ ಮಿತ್ರಮಂಡಲಿಯವರೇ ನಿನ್ನನ್ನು ಬೆನ್ನಟ್ಟಿಬಂದಿದ್ದಾರೆ. ನಿನ್ನನ್ನು ಗಡಿಯಾಚೆ ತಳ್ಳಿಬಿಟ್ಟಿದ್ದಾರೆ. ನಿನ್ನ ಆಪ್ತರೇ ನಿನ್ನನ್ನು ವಂಚಿಸಿ ಸೋಲಿಸಿದ್ದಾರೆ. ನಿನ್ನ ಅನ್ನ ತಿಂದವರೇ ತಿಳಿಗೇಡಿಯಾದ ನಿನಗೆ ಉರುಲೊಡ್ಡಿದ್ದಾರೆ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು