Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 40:16 - ಕನ್ನಡ ಸತ್ಯವೇದವು C.L. Bible (BSI)

16 ನಿನ್ನನು ಅರಸುವವರೆಲ್ಲರು ಹರ್ಷಾನಂದಗೊಳ್ಳಲಿ I ನಿನ್ನ ರಕ್ಷಣಾಪ್ರಿಯರು ಸತತ “ಪ್ರಭು ಪರಾಕ್ರಮಿ” ಎನ್ನಲಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ; ನಿನ್ನ ಜಯದಲ್ಲಿ ಆನಂದಿಸುವವರು, “ಯೆಹೋವನು ಮಹೋನ್ನತನು” ಎಂದು ಯಾವಾಗಲೂ ಹೇಳುವವರಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ; ನಿನ್ನ ಜಯದಲ್ಲಿ ಆನಂದಿಸುವವರು ಯೆಹೋವನಿಗೆ ಸ್ತೋತ್ರವೆಂದು ಯಾವಾಗಲೂ ಹೇಳುವವರಾಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಆದರೆ ನಿನ್ನ ದರ್ಶನವನ್ನು ಬೇಡುವವರು ಉಲ್ಲಾಸದಿಂದ ಸಂತೋಷಪಡಲಿ. ನಿನ್ನ ರಕ್ಷಣೆಯಲ್ಲಿ ಆನಂದಿಸುವವರು, “ಯೆಹೋವನಿಗೆ ಸ್ತೋತ್ರವಾಗಲಿ” ಎಂದು ಯಾವಾಗಲೂ ಹೇಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಆದರೆ, ನಿಮ್ಮನ್ನು ಹುಡುಕುವವರೆಲ್ಲರೂ ನಿಮ್ಮಲ್ಲಿ ಹರ್ಷಾನಂದಗೊಳ್ಳಲಿ; ನಿಮ್ಮ ರಕ್ಷಣೆಯನ್ನು ಪ್ರೀತಿಸುವವರು, “ಯೆಹೋವ ದೇವರು ಮಹೋನ್ನತರು,” ಎಂದು ಯಾವಾಗಲೂ ಹೇಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 40:16
15 ತಿಳಿವುಗಳ ಹೋಲಿಕೆ  

ನನಗೆ ನ್ಯಾಯ ಬಯಸುವವರು ನಲಿದು ಮಾಡಲಿ ಜಯಕಾರ I “ದಾಸನ ಹಿತೈಷಿ ಪ್ರಭುಗೆ, ಜೈ” ಎಂಬ ನಿರಂತರ ಪ್ರಚಾರ II


ಸಜ್ಜನರಾದರೊ ಸಂತೋಷಿಸಲಿ I ದೇವರ ಮುಂದೆ ಆನಂದಿಸಲಿ I ಅತುಳ ಹರ್ಷಾನಂದಗೊಳ್ಳಲಿ II


ಎಫೆಸದಲ್ಲಿ ವಾಸಿಸುತ್ತಿದ್ದ ಯೆಹೂದ್ಯರೂ ಅನ್ಯಧರ್ಮೀಯರೂ ಈ ವಿಷಯವನ್ನು ಕೇಳಿ ಭಯಭೀತರಾದರು. ಪ್ರಭು ಯೇಸುವಿನ ನಾಮವನ್ನು ಸಂಕೀರ್ತಿಸಿದರು.


ಮಂದವಾಯಿತೆನ್ನ ನೇತ್ರ ನಿನ್ನ ರಕ್ಷಣೆಗಾಗಿ ಕಾಯುತ I ನೀತಿಯುತ ನಿನ್ನ ನುಡಿ ಈಡೇರುವುದನು ನಿರೀಕ್ಷಿಸುತ II


ಹೆಮ್ಮೆಪಡಿ, ನೆನೆದಾತನ ಶ್ರೀನಾಮ I ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II


ಹರಿವುದು ಸ್ತುತಿ ಭಕ್ತರ ಬಾಯಿಂದ; ತುಂಬುವುದು ದಲಿತರುದರ I ಇರಲಿ ಚೈತನ್ಯಭರಿತ ನಿಮ್ಮಂತರಂಗವು ನಿರಂತರ II


ಹೃದಯಾನಂದಕರ ನಿನ್ನ ಕಟ್ಟಳೆಗಳು I ನನಗಮರ ಸ್ವಾಸ್ತ್ಯವಾದುವುವು ಅವುಗಳು II


ಮನಗುಂದಿರುವೆ ನಾ ಮುಕ್ತಿಯ ಬಯಕೆಯಲೆ I ನಂಬಿಕೆಯನು ಇಟ್ಟಿರುವೆ ನಿನ್ನ ವಾಕ್ಯದಲೆ II


ಎನ್ನೀ ಪರಿಸ್ಥಿತಿಯನು ಕಂಡು ಅವರು ಬಾಯಿ ಕಿಸಿದು I ನುಡಿದರು, “ಆಹಾ! ಕಣ್ಣಾರೆ ಕಂಡೆವಲ್ಲಾ” ಎಂದು II


“ನರಪುತ್ರನೇ, ಜೆರುಸಲೇಮಿನ ವಿಷಯವಾಗಿ ಟೈರ್ ನಗರವು ‘ಅಹಹ, ಜನಾಂಗಗಳಿಗೆ ಅಡ್ಡಿಯಾಗಿದ್ದ ಬಾಗಿಲು ಮುರಿದುಹೋಗಿದೆ, ನನ್ನ ಕಡೆಗೆ ತೆರೆದುಬಿದ್ದಿದೆ; ಜೆರುಸಲೇಮ್ ಹಾಳಾದ ಕಾರಣ ನಾನು ವೃದ್ಧಿಗೊಳ್ಳುವೆನು’ ಎಂದುಕೊಂಡಿತು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು