Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 37:23 - ಕನ್ನಡ ಸತ್ಯವೇದವು C.L. Bible (BSI)

23 ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ I ಅವನ ನಡತೆಗೆ ಆತನೆ ಮಾರ್ಗದರ್ಶನ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಸತ್ಪುರುಷನ ಗತಿಸ್ಥಾಪನೆಯು ಯೆಹೋವನಿಂದಲೇ ಆಗಿದೆ, ಆತನು ಅವನ ಪ್ರವರ್ತನೆಯನ್ನು ಮೆಚ್ಚುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 ಯೆಹೋವನು ನೀತಿವಂತನನ್ನು ತನ್ನ ಮಾರ್ಗದಲ್ಲಿ ನಡೆಸುವನು ಮತ್ತು ಅವನನ್ನು ಮೆಚ್ಚಿಕೊಳ್ಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಯೆಹೋವ ದೇವರಲ್ಲಿ ಯಾರು ಹರ್ಷಿಸುತ್ತಾರೋ ಅವರ ಹೆಜ್ಜೆಗಳನ್ನು ಸ್ಥಿರಪಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 37:23
19 ತಿಳಿವುಗಳ ಹೋಲಿಕೆ  

ಮನುಷ್ಯ ಮನಬಂದಂತೆ ಮಾರ್ಗವನ್ನಾರಿಸಿಕೊಂಡರೂ ಸರ್ವೇಶ್ವರನೇ ಅವನ ನಡತೆಯನ್ನು ಪರಾಂಬರಿಸುವವನು.


ನಿನ್ನ ನುಡಿಗನುಸಾರ ದೃಢಪಡಿಸು ನನ್ನ ನಡತೆಯನು I ಕೆಡುಕೊಂದೂ ಅಧೀನಪಡಿಸದಿರಲಿ ನನ್ನನು II


ನೀ ನಡೆವ ದಾರಿ ಸಮನಾಗಿರಲಿ, ನೀ ಕೈಗೊಳ್ಳುವ ಹಾದಿ ದೃಢವಾಗಿರಲಿ.


ಮೇಲೆತ್ತಿದನು ವಿನಾಶದ ಕೆಸರಿಂದ, ಕರಾಳ ಕೂಪದಿಂದ I ಗೋರ್ಕಲ್ಲ ಮೇಲಿರಿಸಿ ಹೆಜ್ಜೆಯಿಡಿಸಿದನು ಅತಿ ಧೈರ್ಯದಿಂದ II


ಪ್ರಭು ಕಾಯುವನು ನಿನ್ನ ಆಗುಹೋಗುಗಳನು I ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು II


ಕಾಯುವನಾತ ತನ್ನ ಭಕ್ತರನು ಹೆಜ್ಜೆ ಹೆಜ್ಜೆಗು ದುರುಳರಾದರೋ ಮುಳುಗಿ ಮೌನ ತಾಳುವರು ಅಂಧಕಾರದೊಳು. ಕೇವಲ ಭುಜಬಲದಿಂದ ಜಯಹೊಂದಲಾರನು ನರಮಾನವನು!


ನಡೆವುದು ಪ್ರಭುವಿನ ಮುಂದೆ ನೀತಿ I ಮಾಡುವುದು ಆತನ ಹೆಜ್ಜೆಗೆ ಹಾದಿ II


ಸರ್ವೇಶ್ವರಾ, ಮಾನವನ ಗುರಿಸಾಧನೆ ಅವನ ಸ್ವಾಧೀನದಲ್ಲಿಲ್ಲ. ಸರಿದಿಸೆಯಲ್ಲಿ ಅವನು ಹೆಜ್ಜೆಯಿಡಲಾರನೆಂದು ನಿಮಗೆ ಗೊತ್ತಿದೆಯಲ್ಲಾ.


ನಿನ್ನ ಕಾಲೆಡವದಂತೆ ನೋಡುವನಾತ I ತೂಕಡಿಸಲಾರನು ನಿನ್ನ ಕಾಯುವಾತ II


ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ I ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ II


ಹೆಚ್ಚಳಪಡುವವನು ನನ್ನನ್ನು ತಾನು ತಿಳಿದುಕೊಂಡದ್ದಕ್ಕಾಗಿ ಹೆಚ್ಚಳಪಡಲಿ; ಜಗದಲ್ಲಿ ಅಚಲ ಪ್ರೀತಿಯನ್ನೂ ನ್ಯಾಯನೀತಿಯನ್ನೂ ತೋರ್ಪಡಿಸುವ ಸರ್ವೇಶ್ವರ ನಾನೇ; ನನಗೆ ಪ್ರಿಯವಾದುವು ಪ್ರೀತಿ, ನೀತಿ, ನ್ಯಾಯಗಳೇ. ಇದನ್ನು ಗ್ರಹಿಸಿಕೊಂಡದ್ದಕ್ಕಾಗಿ ಹೆಚ್ಚಳಪಡಲಿ. ಇದು ಸರ್ವೇಶ್ವರನಾದ ನನ್ನ ನುಡಿ.”


ನಿನ್ನ ನಿಬಂಧನೆಗಳ ಪಾಲನೆಯಲಿ I ಸ್ಥಿರತೆ ಇದ್ದರೆ ಒಳಿತು ನನ್ನ ಮನದಲಿ II


ಕಳ್ಳತಕ್ಕಡಿ ಸರ್ವೇಶ್ವರನಿಗೆ ಅಸಹ್ಯ; ನ್ಯಾಯವಾದ ತೂಕ ಆತನಿಗೆ ಪ್ರಿಯ.


ಇದಲ್ಲದೆ, ಪರೋಪಕಾರ ಮಾಡುವುದನ್ನೂ ನಿಮಗಿರುವುದನ್ನು ಪರರೊಡನೆ ಹಂಚಿಕೊಳ್ಳುವುದನ್ನೂ ನಿಲ್ಲಿಸಬೇಡಿ. ಇವು ಕೂಡ ದೇವರಿಗೆ ಮೆಚ್ಚುಗೆಯಾದ ಬಲಿಯರ್ಪಣೆಗಳೇ.


ವಕ್ರಹೃದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು.


ಆದ್ದರಿಂದ ನೀನೂ ನಿನ್ನ ಸಂಗಡ ಬಂದ ನಿನ್ನ ಒಡೆಯನ ಸೇವಕರೂ ನಾಳೆ ಬೆಳಿಗ್ಗೆ ಎದ್ದು ಹೊತ್ತುಮೂಡಿದ ಕೂಡಲೆ ಹಿಂದಿರುಗಿಹೋಗಿ,” ಎಂದು ಹೇಳಿದನು.


ಬರಿಸಿದನು ನವಗೀತೆಯನು, ದೇವಸ್ತುತಿಯನು ನನ್ನ ಬಾಯಲಿ I ಇದ ಕಂಡವರು ಭಯಪಡುವರು, ಇಡುವರು ಭರವಸೆ ಪ್ರಭುವಿನಲಿ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು