Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 35:22 - ಕನ್ನಡ ಸತ್ಯವೇದವು C.L. Bible (BSI)

22 ನೀನೇ ನೋಡಿರುವೆ ಪ್ರಭು, ಇನ್ನು ಸುಮ್ಮನಿರಬೇಡ I ನನ್ನೊಡೆಯಾ, ನನಗಿನ್ನಾದರು ದೂರವಾಗಿರಬೇಡ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಯೆಹೋವನೇ, ನೀನೇ ನೋಡಿದಿಯಲ್ಲವೇ; ಸುಮ್ಮನಿರಬೇಡ; ನನ್ನ ಒಡೆಯನೇ, ನನ್ನಿಂದ ದೂರವಾಗಿರುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಯೆಹೋವನೇ, ನೀನೇ ನೋಡಿದಿಯಲ್ಲವೇ? ಸುಮ್ಮನಿರಬೇಡ; ನನ್ನ ಒಡೆಯನೇ, ನನಗೆ ದೂರವಾಗಿರುವದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಯೆಹೋವನೇ, ಇದೆಲ್ಲವನ್ನೂ ನೀನು ನೋಡಿರುವೆ, ಆದ್ದರಿಂದ ಸುಮ್ಮನಿರಬೇಡ; ನನ್ನ ಕೈಬಿಡಬೇಡ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಯೆಹೋವ ದೇವರೇ, ನೀವು ಇದನ್ನು ನೋಡಿದ್ದೀರಿ; ಯೆಹೋವ ದೇವರೇ, ಮೌನವಾಗಿರಬೇಡಿರಿ; ನನಗೆ ದೂರವಾಗಿರಲೂ ಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 35:22
14 ತಿಳಿವುಗಳ ಹೋಲಿಕೆ  

ನನ್ನಿಂದೇಕೆ ಪ್ರಭು, ಅಷ್ಟು ದೂರವಿರುವೆ? I ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? II


ಆಗ ಸರ್ವೇಶ್ವರ, “ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಬಿಟ್ಟೀ ಕೆಲಸ ಮಾಡಿಸಿಕೊಳ್ಳುವವರ ಬಗ್ಗೆ ಅವರು ಇಟ್ಟ ಮೊರೆ ನನಗೆ ಕೇಳಿಸಿದೆ. ಅವರ ಕಷ್ಟದುಃಖವನ್ನೆಲ್ಲಾ ನಾನು ಬಲ್ಲೆ.


ನನ್ನ ಮೊರೆ ಕೇಳು ಪ್ರಭು, ದುರ್ಗ ನೀನೆನಗೆ I ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ II


ಓ ದೇವಾ, ದೂರವಾಗಿರಬೇಡಯ್ಯಾ I ನೆರವಾಗಲು ಬೇಗ ತ್ವರೆಮಾಡಯ್ಯಾ II


ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ I ದೇವಾ, ನನಗೆ ದೂರವಾಗಬೇಡಯ್ಯಾ II


ದುರುಳರು ಅರುಗಲೇ ಇರೆ, ನೆರವಿಗಾರೂ ಇಲ್ಲ I ನನ್ನಿಂದ ನೀ ದೂರಸರಿವುದು ಸರಿಯಲ್ಲ II


“ಇಗೋ, ಇವೆಲ್ಲ ನನ್ನ ಕಣ್ಣೆದುರಿಗೆ ಲಿಖಿತವಾಗಿವೆ; ನಾನು ಮುಯ್ಯಿ ತೀರಿಸಿಯೇ ತೀರಿಸುವೆನು, ಸುಮ್ಮನಿರಲಾರೆ.


ಮಾತನಾಡದೆ ದೇವಾ, ಸುಮ್ಮನಿರಬೇಡ I ಮೌನದಿಂದ ಸ್ವಾಮೀ, ನಿಶ್ಚಿಂತನಿರಬೇಡ II


ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ? I ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ? II ನಿಮ್ಮ ದುಷ್ಟತನವನು ಕಣ್ಮುಂದೆಯಿಡುವೆನು I ನೀವು ಅಪರಾಧಿಗಳೆಂದು ಸ್ಥಾಪಿಸದೆಬಿಡೆನು II


ನನ್ನ ಮೊರೆಯ ಕೇಳು, ಪ್ರಾರ್ಥನೆಯನಾಲಿಸು I ಸುಮ್ಮನಿರದೆ ನನ್ನ ಕಂಬನಿಯನೀಕ್ಷಿಸು II ಹೇ ಪ್ರಭು, ನಾನಿನ್ನ ಆಗಂತುಕನಯ್ಯಾ I ಪೂರ್ವಜರಂತೆ ನಾ ಪರದೇಶಿಯಯ್ಯಾ II


ನನ್ನಿಂದ ದೂರ ಸರಿಯಲುಬೇಡ, ಪ್ರಭು I ನೀನೆನ್ನ ಶಕ್ತಿ, ನೆರವಾಗಲು ತ್ವರೆಮಾಡು II


ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು.


ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು I ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು II


ಸುತ್ತಿಕೊಂಡಿವೆಯೆನ್ನನು ಬಲವಂತ ಹೋರಿಗಳು I ಮುತ್ತಿಕೊಂಡಿವೆ ಬಾಷಾನಿನ ಹಲವು ಗೂಳಿಗಳು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು