Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 35:15 - ಕನ್ನಡ ಸತ್ಯವೇದವು C.L. Bible (BSI)

15 ನನಗೆ ಆಪತ್ತೊದಗಲದೊ ಸಂತೋಷಿಸಿದರು ಸಭೆಗೂಡಿ I ಸೂರೆಮಾಡಿದರು ತಿರುತಿರುಗಿ ಆ ಭ್ರಷ್ಟರೊಟ್ಟುಗೂಡಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆದರೂ ನನಗೆ ಆಪತ್ತು ಬಂದಾಗ, ಅವರು ಸಂತೋಷಿಸುತ್ತಾ ಕೂಡಿಕೊಂಡರು; ನಿರಾಕಾರಣವಾಗಿ ಈ ಭ್ರಷ್ಟರು ನನಗೆ ವಿರುದ್ಧವಾಗಿ ಕೂಡಿ ಕೊಂಡಾಡಿದರು, ಸೂರೆ ಮಾಡುವುದನ್ನು ಬಿಡಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆದರೂ ನನಗೆ ಆಪತ್ತು ಬಂದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಅಕಾರಣವಾಗಿ ಈ ಭ್ರಷ್ಟರು ನನಗೆ ವಿರೋಧವಾಗಿ ಕೂಡಿಕೊಂಡು ಸೂರೆಮಾಡುವದನ್ನು ಬಿಡಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಆದರೆ ನಾನು ಆಪತ್ತಿನಲ್ಲಿದ್ದಾಗ ಅವರು ನನ್ನನ್ನು ಗೇಲಿಮಾಡಿದರು, ಅವರು ನನ್ನ ನಿಜವಾದ ಸ್ನೇಹಿತರಲ್ಲ; ಅವರ ಪರಿಚಯವೂ ನನಗಿರಲಿಲ್ಲ. ಅವರು ನನ್ನ ಸುತ್ತಲೂ ಸೇರಿಬಂದು ನನ್ನ ಮೇಲೆ ಆಕ್ರಮಣ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆದರೆ ನಾನು ಎಡವಿದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು; ಹೌದು, ದೂಷಕರು ನನಗೆ ತಿಳಿಯದೆ ನನ್ನ ವಿರೋಧವಾಗಿ ಕೂಡಿಕೊಂಡರು. ಅವರು ನನ್ನನ್ನು ದೂಷಿಸುವುದನ್ನು ನಿಲ್ಲಿಸಲೇ ಇಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 35:15
20 ತಿಳಿವುಗಳ ಹೋಲಿಕೆ  

ಅನಂತರ, ಅವರಲ್ಲಿ ಕೆಲವರು ಯೇಸುವಿನ ಮೇಲೆ ಉಗುಳಿದರು. ಅವರ ಮುಖಕ್ಕೆ ಮುಸುಕುಹಾಕಿ, ಅವರನ್ನು ಗುದ್ದಿ, “ಗುದ್ದಿದವರು ಯಾರು? ಪ್ರವಾದಿಸು ನೋಡೋಣ,” ಎನ್ನುತ್ತಿದ್ದರು. ಇದಲ್ಲದೆ ಅಲ್ಲಿದ್ದ ಪಹರೆಯವರು ಅವರಿಗೆ ಏಟಿನ ಮೇಲೆ ಏಟು ಕೊಟ್ಟು ತಮ್ಮ ವಶಕ್ಕೆ ತೆಗೆದುಕೊಂಡರು.


ಇಲ್ಲದಿರೆ ಶತ್ರು ತಿಳಿದಾನು ನನಗೆ ರಕ್ಷಕನಿಲ್ಲವೆಂದು I ಝಲ್ಲನೆ ಸೀಳಿಬಿಟ್ಟಾನು ಸಿಂಹದಂತೆ ಮೇಲೆಬಿದ್ದು II


ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಪುಂಡಪೋಕರಿಗಳನ್ನು ಎತ್ತಿಕಟ್ಟಿ, ಒಂದು ಗುಂಪನ್ನು ಕೂಡಿಸಿದರು. ಪಟ್ಟಣದಲ್ಲೆಲ್ಲಾ ದೊಂಬಿ ಎಬ್ಬಿಸಿದರು. ಪೌಲ ಮತ್ತು ಸೀಲರನ್ನು ಜನರ ಮುಂದೆ ಎಳೆದುತರುವ ಉದ್ದೇಶದಿಂದ ಅವರನ್ನು ಹುಡುಕುತ್ತಾ ಯಾಸೋನ ಎಂಬವನ ಮನೆಯನ್ನು ಮುತ್ತಿದರು.


ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವನ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’ ಎಂದು ಗುಸುಗುಟ್ಟುತ್ತಿರುವರು ಬಹುಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ.


ಬಡವರನ್ನು ಗೇಲಿಮಾಡುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ಪರರ ಕಷ್ಟದುಃಖಗಳನ್ನು ನೋಡಿ ಹಿಗ್ಗುವವನು ದಂಡನೆಗೆ ಗುರಿಯಾಗುತ್ತಾನೆ.


ಊರ ಬಾಗಿಲಲಿ ಕೂರುವವರ ಹರಟೆಗೆ ಕಾರಣನಾದೆನಯ್ಯಾ I ಸಾರಾಯಿ ಮದ್ಯಸಾರ ಕುಡಿವವರ ಪದ್ಯವಸ್ತುವಾದೆನಯ್ಯಾ II


ಸಿಕ್ಕಿಕೊಂಡಿರುವೆ ನರಭಕ್ಷಕ ಸಿಂಹಗಳ ನಡುವೆ I ಅವುಗಳ ಹಲ್ಲುಗಳೊ ಭರ್ಜಿಬಾಣಗಳಂತಿವೆ I ನಾಲಿಗೆಗಳು ಹದವಾದ ಕತ್ತಿ ಕಠಾರಿಗಳಂತಿವೆ II


“ಹಾಸಿಗೆಯಿಂದವನು ಮರಳಿ ಏಳುವಂತಿಲ್ಲ I ಘಾಸಿ ರೋಗದಿಂದ ವಾಸಿಯಾಗುವಂತಿಲ್ಲ” II


ಇಗೋ, ನಾನೆಡವಿ ಬೀಳಲಿರುವೆ I ಆಪತ್ತಿಗಾಗಿ ಸಂಕಟಪಡುತ್ತಿರುವೆ II


ಒಡ್ಡಿದ ಬಲೆಯಲಿ ಒಡ್ಡಿದವನೇ ಪಟಕ್ಕನೆ ಸಿಕ್ಕಿಬೀಳಲಿ I ತೋಡಿದ ಗುಣಿಯಲಿ ತೋಡಿದವನೇ ತಟಕ್ಕನೆ ಬಿದ್ದುಹೋಗಲಿ II


ಮುತ್ತಿದೆ ದುರುಳರ ಹಿಂಡು; ಸುತ್ತಿವೆ ಕುನ್ನಿಗಳು I ಕುತ್ತಿವೆ ನನ್ನ ಕೈಗಳು ಮೇಣ್ ಕಾಲುಗಳು II


ನನ್ನ ವೈರಿಗೆ ಕೇಡುಬಂದಾಗ ನಾನು ಹಿಗ್ಗಿದೆನೋ? ಅವನ ವಿನಾಶಕ್ಕಾಗಿ ನಾನು ಸಂತೋಷಪಟ್ಟೆನೋ?


ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ ನನ್ನ ವೈರಿ ನನ್ನನ್ನು ದುರುಗುಟ್ಟಿ ನೋಡುತ್ತಿದ್ದಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು