Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 32:3 - ಕನ್ನಡ ಸತ್ಯವೇದವು C.L. Bible (BSI)

3 ಪಾಪ ನಿವೇದನೆ ಮಾಡದೆ ನಾ ಮೌನದಿಂದಿರಲು I ದಿನವೆಲ್ಲ ನರಳಿ ಸವೆದುಹೋದವು ನನ್ನೆಲುಬುಗಳು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ನಾನು [ನನ್ನ ಪಾಪವನ್ನು] ಅರಿಕೆಮಾಡದೆ ಇದ್ದಾಗ ದಿನವೆಲ್ಲಾ ನರಳುವದರಿಂದ ನನ್ನ ಎಲುಬುಗಳು ಸವೆದುಹೋಗುತ್ತಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ನಾನು ನನ್ನ ಪಾಪವನ್ನು ಅರಿಕೆಮಾಡದೆ ಇದ್ದಾಗ ದಿನವೆಲ್ಲ್ಲಾ ಪಾಪದಿಂದ ನರಳಬೇಕಾಯಿತು; ವೇದನೆಯಿಂದ ನನ್ನ ಎಲುಬುಗಳೇ ಸವೆದು ಹೋಗುವಂತಾಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ನಾನು ನನ್ನ ಪಾಪವನ್ನು ಅರಿಕೆ ಮಾಡದೆ ಇದ್ದಾಗ, ದಿನವೆಲ್ಲಾ ನರಳುವುದರಿಂದ ನನ್ನ ಎಲುಬುಗಳು ಸವೆದು ಹೋದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 32:3
26 ತಿಳಿವುಗಳ ಹೋಲಿಕೆ  

ಜೋಮು ಹಿಡಿದಂತಿದೆ, ಜೀವ ಹಿಂಡಿದಂತಿದೆ I ಹೃದಯವೇದನೆಯಿಂದ ನರಳಾಡುತ್ತಿರುವೆ II


ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ I ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ II


ಎಷ್ಟೋ ಮೊರೆಯಿಟ್ಟು ಕೂಗಿಕೊಂಡೆ. ಕಿವಿಗೊಡಲಿಲ್ಲ ಆತ ನನ್ನ ಮೊರೆಗೆ.


ದೇವಾ, ಓ ಎನ್ನ ದೇವಾ, ಏಕೆನ್ನ ಕೈಬಿಟ್ಟೆ? I ಕಿವಿಗೊಡದೆ ಏಕೆ ದೂರವಾಗಿಬಿಟ್ಟೆ? II


ಅವರು ಹೃದಯಪೂರ್ವಕವಾಗಿ ನನಗೆ ಪ್ರಾರ್ಥನೆಮಾಡುವುದಿಲ್ಲ. ಬದಲಿಗೆ ಅವರ ಹಾಸಿಗೆಗಳ ಮೇಲೆ ಬಿದ್ದು ಅರಚುತ್ತಾರೆ. ಧಾನ್ಯದ್ರಾಕ್ಷಾರಸಗಳಿಗಾಗಿ ಕಿರಿಚಿಕೊಳ್ಳುತ್ತಾರೆ. ನನಗೆ ವಿರುದ್ಧವಾಗಿ ಪ್ರತಿಭಟಿಸುತ್ತಾ ತಮ್ಮ ದೇಹಗಳನ್ನು ಪರಚಿಕೊಳ್ಳುತ್ತಾರೆ.


ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡು ಬಿಟ್ಟರೆ ಕರುಣೆ ದೊರಕುವುದು.


ನನ್ನ ಚರ್ಮ ಉದುರುತ್ತಿದೆ ಕರ್ರಗಾಗಿ ನನ್ನೆಲುಬು ಉರಿಯುತ್ತಿದೆ ತಾಪಕ್ಕೊಳಗಾಗಿ.


ಹರ್ಷಾನಂದವನು ಮೊಳಗಿಸೆನ್ನೊಳು I ಪುಳಕಗೊಳ್ಳುವುವು ನೀ ಮುರಿದೆಲುಬುಗಳು II


ಸವೆಸಿರುವನು ನನ್ನ ಮಾಂಸಚರ್ಮಗಳನ್ನು ಮುರಿದಿರುವನು ನನ್ನ ಎಲುಬುಗಳನ್ನು.


ಘೋರಸೇವೆ ಶ್ರಮೆಗಳಿಂದ ತಪ್ಪಿಸಿಕೊಳ್ಳಲಿಕೆ ವಲಸೆಹೋಗಿರುವಳಲ್ಲಾ ‘ಯೆಹೂದಿ’ ಎಂಬಾಕೆ ! ಮ್ಲೇಚ್ಛರ ಮಧ್ಯೆ ವಾಸಮಾಡುತ್ತಿರುವಳಲ್ಲಾ ನೆಮ್ಮದಿಯಿಲ್ಲದೆ ಹಿಮ್ಮೆಟ್ಟಿ ಹಿಡಿದರು ಹಿಂಸಕರೆಲ್ಲಾ ಆಕೆ ಇಕ್ಕಟ್ಟಿಗೆ ಸಿಕ್ಕಿರುವಾಗಲೆ !


ಗುರುಗುಟ್ಟುತ್ತೇವೆ ಕರಡಿಗಳಂತೆ, ಮುಲುಗುತ್ತೇವೆ ಪಾರಿವಾಳಗಳಂತೆ. ನ್ಯಾಯನಿರ್ಣಯವನ್ನು ಎದುರುನೋಡಿದರೂ ಅದು ನಮಗೆ ಸಿಗದಿದೆ; ಜೀವೋದ್ಧಾರವನ್ನು, ನಿರೀಕ್ಷಿಸಿದರೂ ಅದು ನಮ್ಮಿಂದ ದೂರವಿದೆ.


ನಿನ್ನ ಮಕ್ಕಳು ಬಿದ್ದರು ಬೀದಿ ಚೌಕಗಳಲಿ ಬಲೆಗೆ ಬಿದ್ದ ಜಿಂಕೆಮರಿಯಂತಿಹರು ಪ್ರಜ್ಞೆತಪ್ಪಿ. ನಿನ್ನ ದೇವರನು ಮೂದಲಿಸಿಹರು ಸರ್ವೇಶ್ವರನ ರೋಷವನ್ನನುಭವಿಸಿಹರು.


ಕನಿಕರಿಸು ಹೇ ಪ್ರಭು, ನಾನು ಬಲಹೀನನು I ಗುಣಪಡಿಸು ಸಡಿಲವಾದ ಎನ್ನೆಲುಬುಗಳನು II


ಇರುಳು ನನ್ನೆಲುಬುಗಳನು ಕೊರೆದು ಕೀಳುತ್ತಿದೆ ಸಂಕಟಗಳು ನನ್ನನು ಎಡೆಬಿಡದೆ ತಿನ್ನುತ್ತಿವೆ.


ನಿಟ್ಟುಸಿರೇ ನನ್ನ ಮುಂದಿರುವ ಊಟ ಜಲಧಾರೆಯಂತಿದೆ ನನ್ನ ನರಳಾಟ.


ದುಃಖಕಾಲ ತೀರಿದನಂತರ ದಾವೀದನು ಆಕೆಯನ್ನು ತನ್ನ ಮನೆಗೆ ಕರೆಯಿಸಿ ತನ್ನ ಹೆಂಡತಿಯನ್ನಾಗಿ ಮಾಡಿಕೊಂಡನು. ಆಕೆ ಅವನಿಂದ ಒಬ್ಬ ಮಗನನ್ನು ಹೆತ್ತಳು. ದಾವೀದನ ಈ ಕೃತ್ಯ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿತ್ತು.


ನನ್ನ ಜನರ ದುರಾಶೆಯ ದೋಷದ ನಿಮಿತ್ತ ನಾನು ಕೋಪಗೊಂಡೆ, ದಂಡಿಸಿದೆ, ಮುಖ ಮರೆಸಿಕೊಂಡೆ, ರೋಷಭರಿತನಾದೆ. ಅವರಾದರೋ ಮೊಂಡುತನದಿಂದ ಮನಸ್ಸಿಗೆ ತೋಚಿದ ಹಾಗೆ ನಡೆಯುತ್ತಾ ಬಂದಿದ್ದಾರೆ.


ಅವರ ಎಲುಬುಗಳನ್ನು ಯಾಬೇಷಿನಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸವನ್ನು ಆಚರಿಸಿದರು.


ಹರ್ಷ ಹೃದಯ ಒಳ್ಳೆಯ ಔಷಧ; ಕುಗ್ಗಿದ ಮನದಿಂದ ಅಸ್ಥಿಪಂಜರ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು