Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 31:17 - ಕನ್ನಡ ಸತ್ಯವೇದವು C.L. Bible (BSI)

17 ನಿನಗೆ ಮೊರೆಯಿಡುವೆ, ನನಗಾಗದಿರಲಿ ಹೇ ಪ್ರಭು, ಮಾನಭಂಗ I ದುರುಳರಿಗಾಗಲೀ ಆಶಾಭಂಗ, ಮೂಕರಾಗವರು ಸೇರಲಿ ನರಕ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಯೆಹೋವನೇ, ಮೊರೆಯಿಟ್ಟಿದ್ದೇನೆ; ನನ್ನನ್ನು ನಿರಾಶೆಪಡಿಸಬೇಡ. ದುಷ್ಟರಿಗೇ ಆಶಾಭಂಗವಾಗಲಿ; ಅವರು ಸ್ತಬ್ಧರಾಗಿ ಪಾತಾಳಕ್ಕೆ ಬೀಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಯೆಹೋವನೇ, ಮೊರೆಯಿಟ್ಟಿದ್ದೇನೆ; ನನಗೆ ಆಶಾಭಂಗಪಡಿಸಬೇಡ. ದುಷ್ಟರಿಗೇ ಆಶಾಭಂಗವಾಗಲಿ; ಅವರು ಸ್ತಬ್ಧರಾಗಿ ಪಾತಾಳಕ್ಕೆ ಬೀಳಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಯೆಹೋವನೇ, ನಾನು ನಿನ್ನಲ್ಲಿ ಪ್ರಾರ್ಥಿಸಿದೆನು. ಆದ್ದರಿಂದ ನಾನು ನಿರಾಶನಾಗುವುದಿಲ್ಲ. ಕೆಡುಕರಾದರೋ ನಿರಾಶರಾಗುವರು. ಅವರು ಮೌನವಾಗಿ ಸಮಾಧಿಗೆ ಹೋಗುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಯೆಹೋವ ದೇವರೇ, ನಾನು ನಾಚಿಕೆಪಡದಂತೆ ಮಾಡಿರಿ; ನಾನು ನಿಮಗೆ ಮೊರೆಯಿಟ್ಟಿದ್ದೇನೆ; ದುಷ್ಟರು ನಾಚಿಕೆಪಡಲಿ; ಅವರು ಸಮಾಧಿ ಸೇರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 31:17
25 ತಿಳಿವುಗಳ ಹೋಲಿಕೆ  

ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ.


ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು I ಕೀರ್ತಿಸರು ಪಾತಾಳಕ್ಕಿಳಿವವರು ಆತನನು II


ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ ಸಿಗ್ಗು I ನನ್ನನು ಕುಗ್ಗಿಸಿ ಮೆರೆವವರನು ಮುಚ್ಚಲಿ ಲಜ್ಜೆಯ ಮುಸುಕು II


ಆತನತ್ತ ತಿರುಗಿದ ಮುಖ ಅರಳುವುದು I ಲಜ್ಜೆಯಿಂದೆಂದಿಗು ಕುಂದಿಹೋಗದು II


ನನಗಿಲ್ಲದಿದ್ದರೆ ಪ್ರಭುವಿನ ಮರುಕ I ಮನೆಯಾಗುತ್ತಿತ್ತೆನಗೆ ಅಧೋಲೋಕ II


ನನಗೆ ಕೇಡು ಬಗೆದವರಿದೋ ಪಡೆದರು ನಿಂದೆ ಅಪಮಾನವನು I ದಿನವೆಲ್ಲ ವರ್ಣಿಪುದೆನ್ನ ನಾಲಿಗೆ ನಿನ್ನೀ ನೀತಿಸಾಧನೆಯನು II


ನನ್ನ ಕೊಲೆಗೆ ಯತ್ನಿಸುವವನು ತಲೆ ತಗ್ಗಿಸಲಿ ನಿರಾಶೆಗೊಂಡು I ನನಗೆ ಕೇಡನು ಮಾಡುವವರು ಓಡಿಹೋಗಲಿ ಗಲಿಬಿಲಿಗೊಂಡು II


ಕಾಯುವನಾತ ತನ್ನ ಭಕ್ತರನು ಹೆಜ್ಜೆ ಹೆಜ್ಜೆಗು ದುರುಳರಾದರೋ ಮುಳುಗಿ ಮೌನ ತಾಳುವರು ಅಂಧಕಾರದೊಳು. ಕೇವಲ ಭುಜಬಲದಿಂದ ಜಯಹೊಂದಲಾರನು ನರಮಾನವನು!


ಸತ್ತು ಧೂಳಿ ಮಣ್ಣಿನಲ್ಲಿ ‘ದೀರ್ಘನಿದ್ರೆ’ಮಾಡುತ್ತಿರುವ ಅನೇಕರು ಏಳುವರು. ಎಚ್ಚೆತ್ತವರಲ್ಲಿ ಕೆಲವರು ನಿತ್ಯಜೀವವನ್ನು ಅನುಭವಿಸುವರು; ಕೆಲವರು ತಿರಸ್ಕೃತರಾಗಿ ನಿತ್ಯ ನಿಂದನೆಗೆ ಗುರಿಯಾಗುವರು.


ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ I ನಿನ್ನ ಶರಣನಾದೆ, ನನಗಾಗದಿರಲಿ ತಾತ್ಸಾರ II


ತತ್ತರಿಸುವರು ಶತ್ರುಗಳೆಲ್ಲ ನಿರಾಶೆಯಿಂದ I ತಟ್ಟನೆ ಹಿಂಜರಿಯುವರವರೆಲ್ಲ ಅತಿ ಲಜ್ಜೆಯಿಂದ II


ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು I ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು II


ಸ್ವಾಮಿ ದೇವನೇ, ಸರ್ವಶಕ್ತನೆ I ಅದೆನಿತು ಕಾಲ ನೀ ಮುನಿದಿರುವೆ I ನಿನ್ನವರ ಮೊರೆಯನಾಲಿಸದಿರುವೆ? II


ಈಜಿಪ್ಟಿನಿಂದ ದ್ರಾಕ್ಷಾಲತೆಯೊಂದನು ನೀ ತಂದೆ I ಅನ್ಯಜನತೆಯನು ಹೊರದೂಡಿ ಅದನು ನಾಟಿಮಾಡಿದೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು