Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 3:7 - ಕನ್ನಡ ಸತ್ಯವೇದವು C.L. Bible (BSI)

7 ಎದ್ದೇಳು ದೇವ, ಕಾಪಾಡ ಬಾ ಪ್ರಭುವೆ I ವೈರಿಗಳ ದವಡೆ ಬಡಿದವನು ನೀನಲ್ಲವೇ I ದುರುಳರ ಹಲ್ಲುದುರಿಸಿದವನು ನೀನಲ್ಲವೆ? II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆಹೋವನೇ, ನನ್ನ ದೇವರೇ, ನನ್ನ ಎಲ್ಲಾ ಶತ್ರುಗಳ ದವಡೆಯನ್ನು ಬಡಿದು ಅವರ ಹಲ್ಲುಗಳನ್ನು ಉದುರಿಸಿಬಿಟ್ಟವನೇ, ಎದ್ದು ಬಂದು ನನ್ನನ್ನು ರಕ್ಷಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಯೆಹೋವನೇ, ನನ್ನ ದೇವರೇ, ನನ್ನ ಎಲ್ಲಾ ಶತ್ರುಗಳ ದವಡೆಯ ಮೇಲೆ ಬಡಿದು ಅವರ ಹಲ್ಲುಗಳನ್ನು ಉದುರಿಸಿ ಬಿಟ್ಟವನೇ, ಎದ್ದು ಬಂದು ನನ್ನನ್ನು ರಕ್ಷಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೆಹೋವನೇ, ಎದ್ದೇಳು! ನನ್ನ ದೇವರೇ, ಬಂದು ನನ್ನನ್ನು ರಕ್ಷಿಸು! ನೀನು ನನ್ನ ಶತ್ರುಗಳ ದವಡೆಗೆ ಬಡಿದರೆ ಅವರ ಹಲ್ಲುಗಳು ಉದುರಿಹೋಗುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಯೆಹೋವ ದೇವರೇ, ಏಳಿರಿ! ನನ್ನ ದೇವರೇ, ನನ್ನನ್ನು ರಕ್ಷಿಸಿರಿ. ನನ್ನ ಶತ್ರುಗಳೆಲ್ಲರ ದವಡೆಗೆ ಹೊಡೆಯಿರಿ; ದುಷ್ಟರ ಹಲ್ಲುಗಳನ್ನು ಮುರಿದುಬಿಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 3:7
17 ತಿಳಿವುಗಳ ಹೋಲಿಕೆ  

ಮುರಿದುಬಿಡು ಹೇ ದೇವಾ, ಆ ದುರುಳರ ಹಲ್ಲುಗಳನು I ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ ಕೋರೆಗಳನು II


ದುರ್ಜನರ ದವಡೆಯನು ಮುರಿಯುತ್ತಿದ್ದೆ. ಅವರ ಹಲ್ಲುಗಳಿಂದಲೂ ಬೇಟೆಯನು ಬಿಡಿಸುತ್ತಿದ್ದೆ.


ಜನರು ಬಾಯಿಕಿಸಿದು ನನ್ನನು ಅಣಕಿಸುತ್ತಾರೆ ಛೀಮಾರಿ ಹಾಕಿ ನನ್ನ ದವಡೆಗೆ ಬಡಿದಿದ್ದಾರೆ ನನಗೆ ವಿರುದ್ಧವಾಗಿ ಗುಂಪುಕಟ್ಟಿದ್ದಾರೆ.


ಇಸ್ರಯೇಲರ ದೇವ, ಸೇನಾಧೀಶ್ವರ ಪ್ರಭು, ನೀನು I ದಂಡಿಸು ನೀನೆಚ್ಚರಗೊಂಡು ಅನ್ಯಜನರೆಲ್ಲರನು I ತೋರಬೇಡ ದುರುಳ ದ್ರೋಹಿಗಳಾರಿಗೂ ದಯೆಯನು II


ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ I ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ II


ಎಚ್ಚರಗೊಳ್ಳು ಸರ್ವೇಶ್ವರನ ಭುಜವೇ, ಎಚ್ಚರಗೊಂಡು ಬಲವನು ತಂದುಕೊ ಭುಜವೇ, ಪೂರ್ವಕಾಲದೊಳು ಪುರಾತನ ಪೀಳಿಗೆಯೊಳು ಎಚ್ಚರಗೊಂಡಂತೆ ಎಚ್ಚೆತ್ತುಕೊ ಈಗಲು. ರಹಬನ್ನು ಛೇದಿಸಿಬಿಟ್ಟ ಭುಜ ನೀನಲ್ಲವೆ? ಘಟಸರ್ಪವನು ಅಪ್ಪಳಿಸಿದ ಭುಜ ನೀನಲ್ಲವೆ?


ಹೇ ಪ್ರಭು, ಎಚ್ಚರಗೊಳ್ಳು : ನ್ಯಾಯವನು ದೇವಾ, ನಿರ್ಣಯಿಸು I ಕೋಪದಿಂದೆದ್ದು ವಿರೋಧಿಗಳ ಕ್ರೋಧವನು ಭಂಗಪಡಿಸು II


ನನ್ನ ಕಡೆ ತಿರುಗಿ ಪ್ರಭು, ನನ್ನನುದ್ಧರಿಸು I ನಿನ್ನಚಲ ಪ್ರೀತಿಯಿಂದ ನನ್ನ ರಕ್ಷಿಸು II


ಹೊಡೆಯುವವನಿಗೆ ಕೆನ್ನೆಕೊಡುವಾಗಲೂ ನಿಂದೆ ಅವಮಾನದಿಂದ ತೃಪ್ತಿಪಡುವಾಗಲೂ. ನಂಬಿಕೆಗೆ ಎಡೆಯಿರಲು ಸಾಧ್ಯ.


ನ್ಯಾಯಸ್ಥಾಪನೆಗೆ ದೇವನೆದ್ದು ನಿಂತಾಗ I ಧರೆಯ ದೀನರನುದ್ಧರಿಸಲು ಅನುವಾದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II


ಚಾಚಿದಾ ಬಲಗೈಯನೇಕೆ ಹಿಂದೆಗೆದುಕೊಂಡೆ I ಬಚ್ಚಿಟ್ಟಾ ಕೈಯಿಂದ ನೀನವರನು ಚಚ್ಚಿಬಿಡೈ II


ಪ್ರಭೂ, ಎದ್ದೇಳು, ನಿದ್ರಿಸಬೇಡ I ನಮ್ಮನು ಎಂದೆಂದಿಗೂ ತೊರೆಯಬೇಡ II


ನನ್ನ ನ್ಯಾಯವನು ನಿರ್ಣಯಿಸು ದೇವಾ ಎಚ್ಚೆತ್ತು I ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು ನಿಂತು II


ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II


ಮರದ ತುಂಡಿಗೆ, ‘ಎಚ್ಚೆತ್ತುಕೊ’; ಜಡಕಲ್ಲಿಗೆ, ‘ಎದ್ದೇಳು’ ಎಂದು ಆಜ್ಞಾಪಿಸುವವನು ನಿಜಕ್ಕೂ ಬುದ್ಧಿಹೀನನು. ಬೊಂಬೆಯು ಬೋಧಿಸಬಲ್ಲದೇ? ಬೆಳ್ಳಿಬಂಗಾರವನ್ನು ಅದಕ್ಕೆ ಹೊದಿಸಿರುವುದೇನೋ ನಿಜ. ಆದರೆ ಅದಕ್ಕೆ ಉಸಿರೋ ಇಲ್ಲವೇ ಇಲ್ಲ.


ಯುದ್ಧವು ಸುತ್ತಣ ಪ್ರದೇಶಗಳಿಗೆ ಹಬ್ಬಿಕೊಂಡಿತು. ಆ ದಿನ ಕತ್ತಿಯಿಂದ ಸತ್ತವರಿಗಿಂತ, ಮರುಳುಗಾಡಿನಲ್ಲಿ ಸತ್ತವರ ಸಂಖ್ಯೆಯೇ ಹೆಚ್ಚಾಗಿತ್ತು.


ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು