Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 28:1 - ಕನ್ನಡ ಸತ್ಯವೇದವು C.L. Bible (BSI)

1 ನನ್ನ ಮೊರೆ ಕೇಳು ಪ್ರಭು, ದುರ್ಗ ನೀನೆನಗೆ I ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆಹೋವನೇ, ನನ್ನ ಶರಣನೇ, ನಿನಗೆ ಮೊರೆಯಿಡುತ್ತೇನೆ; ಕೇಳದೆ ಇರಬೇಡ. ನೀನು ಕಿವಿಗೊಡದೆ ಹೋದರೆ ನಾನು ಸತ್ತವರಿಗೆ ಸಮಾನನಾಗುವೆನಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೆಹೋವನೇ, ನನ್ನ ಶರಣನೇ, ನಿನಗೆ ಮೊರೆಯಿಡುತ್ತೇನೆ; ಕೇಳದೆ ಇರಬೇಡ. ನೀನು ಕಿವಿಗೊಡದೆ ಹೋದರೆ ನಾನು ಸತ್ತವರಿಗೆ ಸಮಾನನಾಗುವೆನಲ್ಲವೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೆಹೋವನೇ, ನೀನೇ ನನ್ನ ಬಂಡೆ. ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ. ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ. ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ ಜನರು ನನ್ನನ್ನು ಪರಿಗಣಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೆಹೋವ ದೇವರೇ, ನೀವು ನನಗೆ ಸಂರಕ್ಷಿಸುವ ಬಂಡೆಯಾಗಿದ್ದೀರಿ. ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇನೆ, ಮೌನವಾಗಿರಬೇಡಿರಿ; ನೀವು ಸುಮ್ಮನಿದ್ದರೆ ನಾನು ಸಮಾಧಿಯಲ್ಲಿದ್ದವನಿಗೆ ಸಮಾನನಾಗುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 28:1
21 ತಿಳಿವುಗಳ ಹೋಲಿಕೆ  

ಸದುತ್ತರ ಪಾಲಿಸು ಪ್ರಭೂ, ಸೊರಗಿದೆ ಎನ್ನ ಚೇತನ I ನೀ ವಿಮುಖನಾದರೆ ನಾ ನರಕಹೊಕ್ಕವರಿಗೆ ಸಮಾನ II


ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ I ಆತನೇ ನನ್ನ ದೇವ, ನನ್ನಾಶ್ರಯ ದುರ್ಗ I ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ II


ಪಾತಾಳಕ್ಕಿಳಿಯುವವರನ್ನು ನರಕ ನುಂಗುವಂತೆ ಅವರನ್ನು ಜೀವಸಹಿತ ಪೂರ್ತಿಯಾಗಿ ಕಬಳಿಸಿಬಿಡೋಣ ಬಾ;


ಮಾತನಾಡದೆ ದೇವಾ, ಸುಮ್ಮನಿರಬೇಡ I ಮೌನದಿಂದ ಸ್ವಾಮೀ, ನಿಶ್ಚಿಂತನಿರಬೇಡ II


ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ದೊರೆಯುವುದು.


ಶಾಶ್ವತ ಆಶ್ರಯಗಿರಿ, ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ.


ವಿಮೋಚಿಸಿದ್ದಾನೆ ನನ್ನ ಆತ್ಮ ಅಧೋಲೋಕ ಸೇರದಂತೆ ನನ್ನ ಜೀವವು ಜ್ಯೋತಿಯನು ಕಾಣುವಂತೆ.’


ಸತ್ತವರು ನಿನ್ನನ್ನು ಕೀರ್ತಿಸರು ಪಾತಾಳದವರು ನಿನ್ನನ್ನು ಸ್ತುತಿಸರು ಅಧೋಲೋಕಕ್ಕೆ ಇಳಿದುಹೋದವರು ನಿನ್ನ ಸತ್ಯಸಂಧತೆಯನ್ನು ಆಶ್ರಯಿಸರು.


ನೀನೇ ನೋಡಿರುವೆ ಪ್ರಭು, ಇನ್ನು ಸುಮ್ಮನಿರಬೇಡ I ನನ್ನೊಡೆಯಾ, ನನಗಿನ್ನಾದರು ದೂರವಾಗಿರಬೇಡ II


“ನನ್ನ ಪ್ರಾಣ ನಷ್ಟದಿಂದ ನಿನಗೇನು ಫಲ? I ಸಮಾಧಿಗೆ ನಾನಿಳಿದರೆ ನಿನಗೇನು ಲಾಭ?” II “ಸತ್ತವರ ಬೂದಿ ನಿನ್ನ ಸ್ತುತಿಸಬಲ್ಲುದೆ? I ನಿನ್ನ ಸತ್ಯತೆಯನ್ನದು ಸಾರಲು ಬಲ್ಲುದೆ?” II


ಹಗಲೆಲ್ಲ ಕೂಗಿಕೊಂಡರೂ ನೀ ಬರಲಿಲ್ಲವಲ್ಲಾ I ಇರುಳೆಲ್ಲಾ ಮೊರೆಯಿಟ್ಟರೂ ನೆಮ್ಮದಿಯಿಲ್ಲವಲ್ಲಾ II


ಸ್ವರವೆತ್ತಿ ಎನ್ನ ಪ್ರಭುವಿಗೆ ನಾ ಮೊರೆಯಿಡುವೆನು I ಸಿರಿಶಿಖರದಿಂದಾತನು ಸದುತ್ತರ ನೀಡುವನು II


ಮೊರೆಯಿಡುವೆನು, ಕೂಗಿ ಮೊರೆಯಿಡುವೆನು I ಸ್ವಾಮಿ ದೇವನು ನನಗೆ ಕಿವಿಗೊಡುವನು II


ಹುಚ್ಚು ಹೊಳೆಯು ಎನ್ನ ಕೊಚ್ಚದಿರಲಯ್ಯಾ I ಮಡುವು ಎನ್ನ ಸೆಳೆದುಕೊಳ್ಳದಿರಲಯ್ಯಾ I ಪಾತಾಳವೆನ್ನನು ನುಂಗದಿರಲಯ್ಯಾ II


ಎನ್ನರಸನೇ, ದೇವನೇ I ಮಾಡುವೆ ನಿನಗೆ ಪ್ರಾರ್ಥನೆ I ನೀ ಆಲಿಸೆನ್ನ ಯಾಚನೆ II


ಮೊರೆಯಿಡುವೆನು ನಾನು ಪ್ರಭುವಿಗೆ I ಸ್ವರವೆತ್ತಿ ಬೇಡುವೆನು ಆತನಿಗೆ II


ನನ್ನ ಮೊರೆಯ ಕೇಳು, ಪ್ರಾರ್ಥನೆಯನಾಲಿಸು I ಸುಮ್ಮನಿರದೆ ನನ್ನ ಕಂಬನಿಯನೀಕ್ಷಿಸು II ಹೇ ಪ್ರಭು, ನಾನಿನ್ನ ಆಗಂತುಕನಯ್ಯಾ I ಪೂರ್ವಜರಂತೆ ನಾ ಪರದೇಶಿಯಯ್ಯಾ II


ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ? I ನಾನಲೆಯಬೇಕೆ ಶತ್ರುಬಾಧೆಪೀಡಿತನಾಗಿ ಭಿಕಾರಿಯಂತೆ?” II


ಭಕ್ತರೇ, ಸಂಕೀರ್ತಿಸಿರಿ ಪ್ರಭುವನು I ಮಾಡಿರಿ ಆತನ ನಾಮಸ್ಮರಣೆಯನು II


ಬಿಚ್ಚುವೆನು ಆತನ ಮುಂದೆ ಚಿಂತೆಯ ಕಟ್ಟನು I ಅರಿಕೆ ಮಾಡುವೆನು ನನ್ನ ಕಷ್ಟ ಸಂಕಟವನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು