Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 25:18 - ಕನ್ನಡ ಸತ್ಯವೇದವು C.L. Bible (BSI)

18 ನೋಡೆನ್ನ ಬಾಧೆ ಬವಣೆಗಳನು I ತೊಡೆದು ಹಾಕೆನ್ನ ಪಾಪಗಳನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ನಾನು ಕುಗ್ಗಿರುವುದನ್ನೂ, ಕಷ್ಟಪಡುವುದನ್ನೂ ನೋಡಿ, ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಾನು ಕುಗ್ಗಿರುವದನ್ನೂ ಕಷ್ಟಪಡುವದನ್ನೂ ನೋಡಿ ನನ್ನ ಎಲ್ಲಾ ಪಾಪಗಳನ್ನು ಪರಿಹರಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಯೆಹೋವನೇ, ನನ್ನ ಸಂಕಟವನ್ನೂ ತೊಂದರೆಗಳನ್ನೂ ನೋಡು. ನನ್ನ ಪಾಪಗಳನ್ನೆಲ್ಲ ಕ್ಷಮಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ನನ್ನ ಬಾಧೆಯನ್ನೂ ವ್ಯಥೆಯನ್ನೂ ನೋಡಿರಿ; ನನ್ನ ಪಾಪಗಳನ್ನೆಲ್ಲಾ ತೆಗೆದುಹಾಕಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 25:18
11 ತಿಳಿವುಗಳ ಹೋಲಿಕೆ  

ಬಹುಶಃ ಸರ್ವೇಶ್ವರ ನನ್ನ ಕಷ್ಟವನ್ನು ನೋಡಿ ಈ ದಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಿಯಾರು,” ಎಂದು ಹೇಳಿದನು.


ನಿನ್ನ ನಾಮಪ್ರಿಯರಿಗೆ ಮಾಡುವಂತೆ I ನನಗಭಿಮುಖನಾಗಿ ತೋರು ನೀ ಮಮತೆ II


ಆಗ ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅವರ ಬಳಿಗೆ ತಂದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ, ಆ ಪಾರ್ಶ್ವವಾಯು ರೋಗಿಗೆ, “ಮಗು, ಧೈರ್ಯದಿಂದಿರು. ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.


ಹೇ, ಸರ್ವೇಶ್ವರಾ, ನಮಗೊದಗಿರುವ ದುರ್ಗತಿಯನ್ನು ನೆನೆಸಿಕೊ ನಾವು ಸಹಿಸುತ್ತಿರುವ ನಿಂದೆ ಅವಮಾನಗಳನ್ನು ಗಮನಕ್ಕೆ ತಂದುಕೋ.


“ಸರ್ವಶಕ್ತರಾದ ಸರ್ವೇಶ್ವರಾ, ನಿಮ್ಮ ದಾಸಿ ಆದ ನನ್ನ ದುಃಖವನ್ನು ನೀಗಿಸಿರಿ; ನನ್ನನ್ನು ಪರಾಂಬರಿಸಿರಿ; ನನ್ನನ್ನು ತಿರಸ್ಕರಿಸದೆ ಕನಿಕರಪಟ್ಟು ನನಗೊಬ್ಬ ಮಗನನ್ನು ಅನುಗ್ರಹಿಸಿ. ಅವನನ್ನು ಅಮರಣಾಂತರ ನಿಮಗೇ ಸಮರ್ಪಿಸುವೆನು; ಅವನ ತಲೆಯ ಮೇಲೆ ಕ್ಷೌರಕತ್ತಿಯನ್ನು ಬರಗೊಡಿಸುವುದಿಲ್ಲ ಎಂದು ಹರಕೆ ಮಾಡುತ್ತೇನೆ.”


ನನ್ನ ಕಷ್ಟವ ನೋಡಿ ಮುಕ್ತಗೊಳಿಸೆನ್ನನು I ಮರೆತಿಲ್ಲ ನಾನು ನಿನ್ನ ಧರ್ಮಶಾಸ್ತ್ರವನು II


ನೆನಸಿಕೋ ಹೇ ಪ್ರಭೂ, ದಾವೀದನನು I ಆತ ಸಹಿಸಿದ ಕಷ್ಟದುಃಖಗಳನು II


ಆಕೆಯ ನೆರಿಗೆಯೂ ಹೊಲಸಾಗಿ ಮುಂದಿನ ಗತಿ ತೋಚದಂತಾಗಿ ಸಂತೈಸುವವರೇ ಇಲ್ಲದವಳಾಗಿ ಬಿದ್ದಿರುವಳಲ್ಲಾ ಈ ಭೀಕರ ಸ್ಥಿತಿಯಲ್ಲಿ ! “ಹೇ ಸರ್ವೇಶ್ವರಾ, ನೋಡು ನನ್ನ ಸಂಕಟವನು ಹೆಚ್ಚಳಪಡುತ್ತಿರುವನಲ್ಲಾ ಶತ್ರುವಾದವನು” ಎಂದು ಮೊರೆಯಿಡುತ್ತಾಳೆ ಕೂಗಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು