Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 20:9 - ಕನ್ನಡ ಸತ್ಯವೇದವು C.L. Bible (BSI)

9 ಜಯವ ನೀಡು ಪ್ರಭು, ಅರಸನಿಗೆ I ಕಿವಿಗೊಡು ನೀ, ನಮ್ಮ ಪ್ರಾರ್ಥನೆಗೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಯೆಹೋವನೇ, ನಮ್ಮ ಅರಸನಿಗೆ ಜಯವನ್ನುಂಟುಮಾಡು; ನಾವು ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಯೆಹೋವನೇ, ನಮ್ಮ ಅರಸನಿಗೆ ಜಯವನ್ನುಂಟುಮಾಡು; ನಾವು ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯಾಕೆಂದರೆ ಯೆಹೋವನು ತಾನು ಅಭಿಷೇಕಿಸಿದ ರಾಜನನ್ನು ರಕ್ಷಿಸಿದನು! ನಾವು ಸಹಾಯಕ್ಕಾಗಿ ಮೊರೆಯಿಟ್ಟಾಗ ಆತನು ಸದುತ್ತರವನ್ನು ದಯಪಾಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಯೆಹೋವ ದೇವರೇ, ಅರಸನಿಗೆ ಜಯಕೊಡಿರಿ! ನಾವು ಕರೆಯುವಾಗ ನಮಗೆ ಉತ್ತರಕೊಡಿರಿ!

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 20:9
11 ತಿಳಿವುಗಳ ಹೋಲಿಕೆ  

ಎನ್ನರಸನೇ, ದೇವನೇ I ಮಾಡುವೆ ನಿನಗೆ ಪ್ರಾರ್ಥನೆ I ನೀ ಆಲಿಸೆನ್ನ ಯಾಚನೆ II


ಯಕೋಬಿಗೆ ವಿಜಯ ಗಿಟ್ಟಿಸಿದಾತ I ನೀನಲ್ಲವೆ ದೇವಾ, ನನ್ನ ಅರಸ? II


ಅವರು ಮಾಡಿದ ಅತಿಶಯ ಕಾರ್ಯಗಳನ್ನು ಮುಖ್ಯಯಾಜಕರು ಹಾಗೂ ಧರ್ಮಶಾಸ್ತ್ರಿಗಳು ನೋಡಿದರು. ದೇವಾಲಯದಲ್ಲಿ ಮಕ್ಕಳು, ‘ದಾವೀದಕುಲಪುತ್ರನಿಗೆ ಜಯವಾಗಲಿ’ ಎಂದು ಘೋಷಿಸುವುದನ್ನು ಕೇಳಿದರು.


ಆದಿಯಿಂದ ದೇವಾ, ನೀನೇ ನನಗೆ ಅರಸನು I ಸಾಧಿಸುತ್ತಿರುವೆ ಜಗದೊಳುದ್ಧಾರವನು II


ಯೇಸುವಿನ ಹಿಂದೆಯೂ ಮುಂದೆಯೂ ಗುಂಪುಗುಂಪಾಗಿ ಹೋಗುತ್ತಿದ್ದ ಜನರು : “ದಾವೀದ ಕುಲಪುತ್ರನಿಗೆ ಜಯವಾಗಲಿ! ಸರ್ವೇಶ್ವರನ ನಾಮದಲಿ ಬರುವವನಿಗೆ ಮಂಗಳವಾಗಲಿ! ಮಹೋನ್ನತದಲ್ಲಿ ದೇವರಿಗೆ ಜಯವಾಗಲಿ!” ಎಂದು ಹರ್ಷೋದ್ಗಾರ ಮಾಡುತ್ತಿದ್ದರು.


ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II


ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ I ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ II


ಎದ್ದೇಳು ದೇವ, ಕಾಪಾಡ ಬಾ ಪ್ರಭುವೆ I ವೈರಿಗಳ ದವಡೆ ಬಡಿದವನು ನೀನಲ್ಲವೇ I ದುರುಳರ ಹಲ್ಲುದುರಿಸಿದವನು ನೀನಲ್ಲವೆ? II


ಸರ್ವೇಶ್ವರನನ್ನು ಎದುರುನೋಡುವವರು ಹೊಸ ಚೇತನವನ್ನು ಹೊಂದುವರು. ರೆಕ್ಕೆ ಚಾಚಿದ ಹದ್ದುಗಳಂತೆ ಹಾರುವರು ಓಡಿದರೂ ದಣಿಯರು, ನಡೆದರೂ ಬಳಲರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು