Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 20:7 - ಕನ್ನಡ ಸತ್ಯವೇದವು C.L. Bible (BSI)

7 ಹೆಚ್ಚಳಪಡುತಿಹರು ಕೆಲವರು ರಥಗಳಲಿ, ಹಲವರು ಅಶ್ವಗಳಲಿ I ಹೆಮ್ಮೆಪಡುತಿಹೆವು ನಾವಾದರೋ, ನಮ್ಮ ದೇವರ ನಾಮದಲಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಕೆಲವರು ರಥಬಲದಲ್ಲಿ, ಕೆಲವರು ಅಶ್ವಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ ಹೆಚ್ಚಳಪಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕೆಲವರು ರಥಬಲದಲ್ಲಿ, ಕೆಲವರು ಅಶ್ವ ಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಕೆಲವರು ತಮ್ಮ ರಥಗಳಲ್ಲಿ ಭರವಸವಿಡುವರು. ಕೆಲವರು ತಮ್ಮ ಸೈನಿಕರುಗಳಲ್ಲಿ ಭರವಸವಿಡುವರು. ನಾವಾದರೋ ನಮ್ಮ ದೇವರಾದ ಯೆಹೋವನನ್ನೇ ಜ್ಞಾಪಿಸಿಕೊಳ್ಳುವೆವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳಲ್ಲಿಯೂ ಭರವಸೆಯಿಡುತ್ತಾರೆ; ನಾವಾದರೋ ನಮ್ಮ ಯೆಹೋವ ದೇವರ ಹೆಸರಿನಲ್ಲಿ ಭರವಸೆಯನ್ನಿಡುತ್ತೇವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 20:7
17 ತಿಳಿವುಗಳ ಹೋಲಿಕೆ  

ಇವು ಸರ್ವೇಶ್ವರನ ಮಾತುಗಳು : “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜಬಲವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು !


ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಆಶ್ರಯಿಸದೆ, ಸಹಾಯಕ್ಕಾಗಿ ಈಜಿಪ್ಟಿಗೆ ತೆರಳುವವರಿಗೆ ಧಿಕ್ಕಾರ ! ಅವರಿಗೆ ಬೇಕು ಆ ನಾಡಿನ ಅಶ್ವಬಲ, ರಥಗಳ ಸಂಖ್ಯಾಬಲ, ಸವಾರರ ಶೌರ್ಯ.


ಯುದ್ಧಕ್ಕಾಗಿ ಸನ್ನದ್ಧವಾಗಿರಬಹುದು ಅಶ್ವಬಲ; ಜಯಸಿಗುವುದಾದರೋ ಸರ್ವೇಶ್ವರನಿಂದ.


ಅವನಿಗಿರುವ ಸಹಾಯ ಮೂಳೆ ಮಾಂಸದ ತಡಿಕೆಯ ಬಲ; ನಮಗಿದ್ದಾರೆ ನಮ್ಮ ದೇವರಾದ ಸರ್ವೇಶ್ವರ. ಅವರೇ ನಮಗೆ ನೆರವಾಗಿ, ಯುದ್ಧಗಳಲ್ಲಿ ನಮ್ಮ ಪರವಾಗಿ ಕಾದಾಡುವರು,” ಎಂದು ಹೇಳಿ ಹುರಿದುಂಬಿಸಿದನು. ಜನರು ಜುದೇಯದ ಅರಸ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.


ಆಸನು ತನ್ನ ದೇವರಾದ ಸರ್ವೇಶ್ವರನಿಗೆ, “ಸರ್ವೇಶ್ವರಾ, ಬಲಿಷ್ಠನು ಬಲಹೀನನ ಮೇಲೆ ಬೀಳುವಾಗ, ನಿಮ್ಮ ಹೊರತು ರಕ್ಷಕನಿಲ್ಲ. ನಿಮ್ಮಲ್ಲಿ ಭರವಸೆ ಇಟ್ಟು ನಿಮ್ಮ ಹೆಸರಿನಲ್ಲಿ ಈ ಮಹಾ ಸೇನೆಗೆ ವಿರುದ್ಧ ಯುದ್ಧಕ್ಕೆ ಬಂದಿದ್ದೇವೆ. ಸರ್ವೇಶ್ವರಾ, ನಮ್ಮ ದೇವರು ನೀವು; ನರರು ನಿಮ್ಮನ್ನು ಎದುರಿಸಿ ಗೆಲ್ಲಬಾರದು,” ಎಂದು ಮೊರೆ ಇಟ್ಟನು.


ನಿನ್ನ ನಾಮಸ್ಮರಣೆಯನುಳಿಸುವೆನು ಚಿರಕಾಲ I ಹೊಗಳುವರು ಸಕಲ ಜನರು ನಿನ್ನನು ಅನುಗಾಲ II


ಬದಲಿಗೆ, “ಬೇಡ ಬೇಡ, ನಾವು ಕುದುರೆಗಳ ಮೇಲೆ ಓಡಿಹೋಗುತ್ತೇವೆ,” ಎಂದುಕೊಂಡಿರಿ. ಅಂತೆಯೇ ಓಡಿಹೋಗುವಿರಿ.” ನಾವು ದೌಡೋಡುವ ಕುದುರೆಗಳ ಮೇಲೆ ಸವಾರಿಮಾಡುತ್ತೇವೆ,” ಎಂದುಕೊಂಡಿರಿ. ಅಂತೆಯೇ ದೌಡೋಡುವವರೇ ನಿಮ್ಮನ್ನು ಅಟ್ಟಿಕೊಂಡುಬರುವರು.


ಹೀಗಾಗಿ ಇಸ್ರಯೇಲರು ಯೆಹೂದ್ಯರ ಎದುರಿನಿಂದ ಓಡಿಹೋದರು. ದೇವರು ಅವರನ್ನು ಯೆಹೂದ್ಯರ ಕೈಗೆ ಒಪ್ಪಿಸಿದರು.


ಆಗ ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಮೂವತ್ತು ಸಾವಿರ ರಥಬಲವನ್ನು, ಆರು ಸಾವಿರ ಅಶ್ವಬಲವನ್ನು ಹಾಗು ಸಮುದ್ರದ ಮರಳಿನಂತೆ ಅಸಂಖ್ಯವಾದ ಕಾಲಾಳುಗಳನ್ನು ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯ ಮಾಡಿಕೊಂಡರು.


ಆದರೆ ಇಸ್ರಯೇಲರ ಮುಂದೆ ಸೋತು ಓಡಿಹೋದರು; ದಾವೀದನು ಸಿರಿಯಾದವರ ಏಳುನೂರು ರಥಗಳನ್ನು ಹಾಳುಮಾಡಿದನು. ನಾಲ್ವತ್ತು ಸಾವಿರ ಮಂದಿ ರಾಹುತರನ್ನು ಕೊಂದನು. ಸೇನಾಪತಿಯಾದ ಶೋಬಕನು ಗಾಯಗೊಂಡು ಅಲ್ಲೇ ಸತ್ತನು.


ಸಾವಿರದ ಏಳುನೂರು ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು, ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದುಬಿಟ್ಟನು.


ಚದರಿಹೋಗುವರು ಸರ್ವೇಶ್ವರನ ವಿರೋಧಿಗಳು ಆಗಸದಿಂದಾತ ಅವರ ವಿರುದ್ಧ ಗರ್ಜಿಸಲು! ನ್ಯಾಯ ತೀರಿಸುವನಾತ ಜಗದ ಕಟ್ಟಕಡೆಯವರೆಗೆ ಶಕ್ತಿಸಾಮರ್ಥ್ಯವನೀವನು ತಾ ನೇಮಿಸಿದರಸನಿಗೆ ಏರಿಸುವನು ತನ್ನಭಿಷಿಕ್ತನ ಒಲುಮೆಯನು ಉನ್ನತಿಗೆ.


ಬಲವಿದೆಯೆಂದು ಅದರಲಿ ನಂಬಿಕೆಯಿಡುವೆಯಾ? ಬಲಿಷ್ಠಕಾರ್ಯಗಳನು ಅದಕ್ಕೆ ಒಪ್ಪಿಸಿಬಿಡುವೆಯಾ?


ಪ್ರಭುವೆ ತನ್ನ ಪ್ರಜೆಯ ಪ್ರಾಬಲ್ಯವು I ತನ್ನಭಿಷಿಕ್ತನಿಗೆ ಆಶ್ರಯ ದುರ್ಗವು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು