Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 20:1 - ಕನ್ನಡ ಸತ್ಯವೇದವು C.L. Bible (BSI)

1 ಸಂಕಟ ಬಂದಾಗ, ಪ್ರಭು ನಿನಗೆ ಕಿವಿಗೊಡಲಿ I ಯಕೋಬ ದೇವರ ನಾಮ, ನಿನ್ನ ಕಾಪಾಡಲಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಮೊರೆಯನ್ನು ಕೇಳಲಿ. ಯಾಕೋಬನ ದೇವರು ನಿನ್ನ ಹೆಸರನ್ನು ಪ್ರಖ್ಯಾತಿಪಡಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೆಹೋವ ದೇವರು ಇಕ್ಕಟ್ಟಿನಲ್ಲಿ ನಿಮಗೆ ಉತ್ತರವನ್ನು ನೀಡಲಿ; ಯಾಕೋಬನ ದೇವರ ಹೆಸರು ನಿಮ್ಮನ್ನು ಕಾಪಾಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 20:1
21 ತಿಳಿವುಗಳ ಹೋಲಿಕೆ  

ಸರ್ವೇಶ್ವರನ ನಾಮ ಬಲವಾದ ಗೋಪುರ; ಅದರೊಳಗೆ ಓಡಿ ಆಶ್ರಯ ಪಡೆದರೆ ಸುಭದ್ರ.


ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭು, ಪ್ರಾಣವನು I ಶತ್ರುಕೋಪಕೆ ವಿರುದ್ಧವಾಗಿ ತೋರುವೆ ನೀ ಮುಷ್ಟಿಯನು II


ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು‍ ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು.


ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದೇವರು II


ಸರ್ವೇಶ್ವರನ ದಾಸನಾದ ನನ್ನ ಮಾತುಗಳನು ಕೇಳಿ : ಭಯಭಕ್ತಿಯುಳ್ಳವನಾರು ನಿಮ್ಮೊಳು ಆ ಸರ್ವೇಶ್ವರನಲಿ? ಬೆಳಕಿಲ್ಲದೆ ಕತ್ತಲಲಿ ನಡೆಯುವವನು ಭರವಸೆಯಿಡಲಿ ಆ ಸರ್ವೇಶ್ವರನ ನಾಮದಲಿ; ಆಶ್ರಯ ಪಡೆಯಲಿ ತನ್ನಾ ದೇವನಲಿ.


ಇವರು ಅರಿಯಲಿ ಪ್ರಭುವೆಂಬ ನಾಮ ನಿನ್ನದೆಂದು I ಧರೆಯಲ್ಲೆಲ್ಲಾ ಸರ್ವೋನ್ನತ ನೀನೇ ಎಂದು II


ದೇವರೆಮಗೆ ಆಶ್ರಯ ದುರ್ಗ I ಸಂಕಟದಲಿ ಸಿದ್ಧ ಸಹಾಯಕ II


ಹೌದು, ಭಯಂಕರವಾದ ದಿನ ಬರಲಿದೆ, ಅದಕ್ಕಿರದು ಎಣೆ! ಅದು ಇಕ್ಕಟ್ಟಿನ ದಿನ, ಆದರೂ ಅದರಿಂದ ಯಕೋಬ್ಯರಿಗಿದೆ ಬಿಡುಗಡೆ.”


ಶತ್ರು ವಿರುದ್ಧ ಸಹಾಯಮಾಡಯ್ಯಾ I ಮಾನವ ನೆರವು ನಮಗೆ ವ್ಯರ್ಥವಯ್ಯಾ II


ಜುದೇಯ ಆಯಿತಾತನಿಗೆ ದೇವಾಲಯ I ಇಸ್ರಯೇಲ್ ಆಯಿತಾತನಿಗೆ ಸ್ವರಾಜ್ಯ II


“ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು I ಸಭೆ ಸೇರಿಸಿ ಇಲ್ಲೆನ್ನ ಮುಂದೆ,” ಎನ್ನುತಿಹನು II


ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು I ಯಕೋಬ ಕುಲದೇವರು ನಮಗಾಶ್ರಯ ದುರ್ಗವು II


ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ I ಆತನೇ ನನ್ನ ದೇವ, ನನ್ನಾಶ್ರಯ ದುರ್ಗ I ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ II


ನಿನ್ನನು ಅರಸುವವರನು ಹೇ ಪ್ರಭು, ನೀ ಕೈ ಬಿಡುವವನಲ್ಲ I ನಿನ್ನಲ್ಲಿ ಭರವಸೆ ಇಡುವರು ನಿನ್ನ ನಾಮವನರಿತವರೆಲ್ಲ II


ದಿಕ್ಕಿಲ್ಲದವನನು ಲಕ್ಷಿಸುವವನು ಧನ್ಯನು I ಆಪತ್ಕಾಲದಲಿ ಆದವನನು ಪ್ರಭು ರಕ್ಷಿಸುವನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು