Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 18:2 - ಕನ್ನಡ ಸತ್ಯವೇದವು C.L. Bible (BSI)

2 ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ I ಆತನೇ ನನ್ನ ದೇವ, ನನ್ನಾಶ್ರಯ ದುರ್ಗ I ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು, ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು, ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕನೂ ನನ್ನ ದೇವರೂ ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಯೆಹೋವನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಯೆಹೋವ ದೇವರು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕರೂ ಆಗಿದ್ದಾರೆ; ನನ್ನ ಬಂಡೆಯಾದ ದೇವರಲ್ಲಿ, ನಾನು ಭರವಸವಿಡುವೆನು ಅವರು ನನ್ನ ಗುರಾಣಿ ಮತ್ತು ನನ್ನ ರಕ್ಷಣೆಯ ಕೊಂಬು, ನನ್ನ ಉನ್ನತವಾದ ದುರ್ಗ ಆಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 18:2
18 ತಿಳಿವುಗಳ ಹೋಲಿಕೆ  

ಆತನೇ ನನಗೆ ಬಂಡೆ, ಕೋಟೆ, ದುರ್ಗ, ಉದ್ಧಾರಕ I ನನಗೆ ರಕ್ಷಾಕವಚ, ಆಶ್ರಯ, ಶತ್ರು ವಿಧ್ವಂಸಕ II


ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ I ಭದ್ರವಾದ ಬಂಡೆ, ನನಗಾಶ್ರಯ ಆತನೆ II


ನಾನಾತನಿಗೆ, ‘ನೀನೇ ನನ್ನ ರಕ್ಷಕನೂ I ದುರ್ಗವೂ ನಾ ನಂಬಿದ ದೇವನು’ ಎನ್ನುವೆನು II


ನಿನಗೊಪ್ಪಿಗೆಯಾಗಲಿ ನನ್ನ ಬಾಯಮಾತು, ಹೃದಯಧ್ಯಾನ I ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯಧಾಮ II


ಸರ್ವೇಶ್ವರನ ನಾಮ ಬಲವಾದ ಗೋಪುರ; ಅದರೊಳಗೆ ಓಡಿ ಆಶ್ರಯ ಪಡೆದರೆ ಸುಭದ್ರ.


ಆತನೆನಗೆ ದುರ್ಗ, ರಕ್ಷಕ, ಶರಣು I ನಾನೆಂದಿಗೂ ಕದಲಿ ಬೀಳೆನು II


ಆತನೇ ನನಗೆ ದೇವರು, ನನ್ನಾಶ್ರಯಗಿರಿ, ನನ್ನ ರಕ್ಷಣಾಶೃಂಗ, ನನ್ನ ದುರ್ಗ, ನನ್ನ ಗುರಾಣಿ.


“ಹೇ ಸರ್ವೇಶ್ವರಾ, ನನ್ನ ಶಕ್ತಿಯೇ, ನನ್ನ ಕೋಟೆಯೇ, ಆಪತ್ತು ಕಾಲದಲ್ಲಿ ನನ್ನ ಆಶ್ರಯವೇ, ಜಗದ ಕಟ್ಟಕಡೆಯಿಂದ ಜನಾಂಗಗಳು ನಿಮ್ಮ ಸಮ್ಮುಖಕ್ಕೆ ಬರುವುವು. ‘ನಮ್ಮ ಪೂರ್ವಜರು ಪಾರಂಪರ್ಯವಾಗಿ ಪಡೆದವುಗಳು ನಿಶ್ಚಯವಾಗಿ ಅಬದ್ಧವಾದವುಗಳು, ಮಾಯರೂಪವಾದವುಗಳು ಹಾಗು ನಿಷ್ಪ್ರಯೋಜನವಾದವುಗಳು.


ಪ್ರತಿಯೊಬ್ಬನೂ ಬಿರುಗಾಳಿಗೆ ತಡೆಯಂತೆ, ಬಿರುಮಳೆಗೆ ಬಿಡಾರದಂತೆ, ಮರುಭೂಮಿಯಲ್ಲಿ ಜಲಧಾರೆಯಂತೆ, ಬೆಂಗಾಡಿನಲ್ಲಿ ಭಾರಿಬಂಡೆಯ ನೆರಳಿನಂತೆ ಇರುವನು.


ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ I ಆಶ್ರಯಪಡುವೆ ನೀ ಆತನ ರೆಕ್ಕೆಗಳಡಿಯಲಿ I ರಕ್ಷಣೆಯ ಕವಚವಿದೆ ಆತನು ಕೊಟ್ಟ ಮಾತಿನಲಿ II


“ದೇವರಲ್ಲಿ ಭರವಸೆಯಿಡುವೆನು ನಾನು,” ಎಂದೂ “ಇಗೋ, ಇರುವೆವು ನಾನು ಮತ್ತು ದೇವರೆನಗಿತ್ತ ಕುವರರು,” ಎಂದು ಹೇಳಿದ್ದಾರೆ.


ಜ್ಞಾನವನ್ನು ಸಜ್ಜನರಿಗೆ ಸೇರಿಸಿಡುವನಾತ, ಸನ್ಮಾರ್ಗಿಗಳಿಗೆ ಕವಚವಾಗಿರುವನಾತ.


ನನ್ನ ಮೊರೆ ಕೇಳು ಪ್ರಭು, ದುರ್ಗ ನೀನೆನಗೆ I ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ II


ಕೊಲಬೇಡಾ ದ್ರೋಹಿಗಳನು ಫಕ್ಕನೆ I ಮರೆತಾರೆನ್ನ ಜನತೆ ಪಾಠ ಕಲಿಯದೆ II ಚದರಿಸು ಶಕ್ತಿಯಿಂದ, ಅಲೆಯಲಿ ದಿಕ್ಕುತೋಚದೆ I ಆ ಪರಿ ತಗ್ಗಿಸು ಅವರನು; ಪ್ರಭು, ನೀಡೆನಗೆ ರಕ್ಷೆ II


ಕತ್ತರಿಸುವನು ಕೆಡುಕರ ಕೋರೆಕೋಡುಗಳನು I ಎತ್ತರಿಸುವನು ಸಜ್ಜನರ ಕೋರೆಕೊಂಬುಗಳನು II


ಕೋಡೊಂದು ಮೂಡುವಂತೆ ಮಾಡುವೆ ದಾವೀದನಿಗಿಲ್ಲೆ I ನಂದಾದೀಪ ಬೆಳಗುವಂತೆ ಮಾಡುವೆ ನನ್ನ ಅಭಿಷಿಕ್ತನಿಗಿಲ್ಲೆ II


ಸರ್ವೇಶ್ವರನೇ ನನ್ನ ಶಕ್ತಿ, ನನ್ನ ಗೀತೆ! ಆತನಿಂದಲೇ ನನಗೆ ದೊರಕಿತು ರಕ್ಷಣೆ. ಆತನನ್ನು ವರ್ಣಿಸುವೆನು, ಆತನೆನ್ನ ದೇವನು ಆತನನ್ನು ಸ್ತುತಿಸುವೆನು, ಆತನೆನ್ನ ಪಿತೃಗಳ ದೇವನು.


ನನಗಿದೆ ಪ್ರಭುವಿನಲ್ಲಿ ಪ್ರೀತಿ I ಆಲಿಸಿಹನಾತ ನನ್ನ ವಿನಂತಿ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು