Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 147:13 - ಕನ್ನಡ ಸತ್ಯವೇದವು C.L. Bible (BSI)

13 ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ ಅಗುಳಿಗಳನು I ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆತನು ನಿನ್ನ ಹೆಬ್ಬಾಗಿಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ, ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಆತನು ನಿನ್ನ ಹೆಬ್ಬಾಗಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ; ನಿನ್ನ ಮಕ್ಕಳನ್ನು ಆಶೀರ್ವದಿಸಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು; ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ನಿಮ್ಮ ಬಾಗಿಲುಗಳ ಅಗುಳಿಗಳನ್ನು ಬಲಗೊಳಿಸಿ, ದೇವರು ನಿಮ್ಮ ಜನರನ್ನು ಆಶೀರ್ವದಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 147:13
20 ತಿಳಿವುಗಳ ಹೋಲಿಕೆ  

ನಮ್ಮ ಗಂಡು ಮಕ್ಕಳಿರಲಿ I ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ ಗಿಡಗಳಂತೆ II ನಮ್ಮ ಹೆಣ್ಣುಮಕ್ಕಳಿರಲಿ I ಅರಮನೆಯಲ್ಲಿ ಕೆತ್ತಿದ ಸುಂದರ ಮೂಲೆಗಂಬಗಳಂತೆ II


ಪರ್ವತಗಳಿರುವಂತೆ ಜೆರುಸಲೇಮಿನ ಸುತ್ತಮುತ್ತಲು I ಇಹನು ಪ್ರಭು ಇಂದಿಗೂ ಎಂದಿಗೂ ತನ್ನ ಜನರ ಸುತ್ತಲು II


ಯಾಜಕರೂ ಲೇವಿಯರೂ ತಮ್ಮನ್ನು ಶುದ್ಧಿಪಡಿಸಿಕೊಂಡ ಮೇಲೆ ಜನರನ್ನೂ ಊರುಬಾಗಿಲುಗಳನ್ನೂ ಗೋಡೆಯನ್ನೂ ಶುದ್ಧಪಡಿಸಿದರು.


ಗೋಡೆಯನ್ನು ಕಟ್ಟಿ ಮುಗಿಸಿದನಂತರ ನಾನು ಕದಗಳನ್ನು ಹಚ್ಚಿಸಿದೆ; ದ್ವಾರಪಾಲಕರನ್ನೂ ಗಾಯಕರನ್ನೂ ಲೇವಿಯರನ್ನೂ ನೇಮಿಸಲಾಯಿತು.


ವೈರಿಗಳೂ ವಿರೋಧಿಗಳೂ ಜೆರುಸಲೇಮಿನ ಬಾಗಿಲೊಳಗೆ ಕಾಲಿಡುವರೆಂದು ವಿಶ್ವದ ರಾಜರಾಗಲಿ, ನಿವಾಸಿಗಳಾಗಲಿ ನಂಬಿರಲಿಲ್ಲ ಯಾರೂ.


ಸಿಯೋನಿಗೆ ದೇವಾ, ಶುಭವನು ಕರುಣಿಸು I ಜೆರುಸಲೇಮ್ ಕೋಟೆಯನು ಮರಳಿ ಎಬ್ಬಿಸು II


ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲೇ ಜೆರುಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಲ್ಲೇ ಕದಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ, ಜೆರುಸಲೇಮಿನ ನಿವಾಸಿಗಳಲ್ಲೇ ಕಾವಲುಗಾರರನ್ನು ಗೊತ್ತುಮಾಡಿರಿ. ಪ್ರತಿಯೊಬ್ಬನನ್ನು ಅವನವನ ಮನೆಯ ಎದುರಿನಲ್ಲೇ ಕಾವಲಿರುವಂತೆ ನೇಮಿಸಿರಿ,” ಎಂದು ಆಜ್ಞಾಪಿಸಿದೆ.


ನಾನು ಗೋಡೆಯನ್ನು ಕಟ್ಟಿ ಮುಗಿಸಿ ಬಾಗಿಲುಗಳಿಗೆ ಕದಗಳನ್ನು ಇನ್ನೂ ಹಚ್ಚಿಸಿರಲಿಲ್ಲ. ಗೋಡೆಯ ಸಂದುಗೊಂದುಗಳನ್ನು ಕೂಡಿಸಿದ ಸಂಗತಿ ಸನ್ಬಲ್ಲಟ್, ಟೋಬೀಯ ಹಾಗು ಅರೇಬಿಯನಾದ ಗೆಷಮ್ ಇವರಿಗೂ


ಇದನ್ನು ತಿಳಿದು ಮನದಟ್ಟು ಮಾಡಿಕೊ, ‘ಹಿಂದಿರುಗಿ ಜೆರುಸಲೇಮನ್ನು ಪುನರ್‍ ನಿರ್ಮಿಸಿ’ ಎಂಬ ದೈವೋಕ್ತಿ ಹೊರಡುವಂದಿನಿಂದ ಪ್ರಭುವಾಗಿ ಅಭಿಷಿಕ್ತನಾದವನು ಬರುವುದರೊಳಗೆ ಏಳು ಸಾರಿ ಏಳು ವರ್ಷಗಳು ಕಳೆಯಬೇಕು. ಅದು ಪುನಃ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಕಟ್ಟಲ್ಪಟ್ಟು ಏಳು ಸಾರಿ ಅರವತ್ತೆರಡು ವರ್ಷಗಳು ಇರುವುದು. ಆ ಕಾಲವು ಬಹು ಕಷ್ಟಕರವಾದ ಕಾಲವಾಗಿರುವುದು.


ಸರ್ವೇಶ್ವರ ಹೀಗೆನ್ನುತ್ತಾರೆ: “ಜನರಾಗಲಿ ಜಾನುವಾರುಗಳಾಗಲಿ ಇಲ್ಲದೆ ಪಾಳುಬಿದ್ದ ಸ್ಥಳವೆಂದು ನೀವು ಕರೆಯುವ ಈ ಸ್ಥಳದಲ್ಲೇ, ಅಂದರೆ ಜನಪಶುರಹಿತವಾಗಿ ನಿವಾಸಿಗಳಿಲ್ಲದೆ ಹಾಳುಬಿದ್ದಿರುವ ಜುದೇಯದ ಊರುಗಳಲ್ಲೇ, ಜೆರುಸಲೇಮಿನ ಬೀದಿಗಳಲ್ಲೇ


ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ, ಇವು ಮತ್ತೆ ಕೇಳಿಬರುವುವು. ‘ಸೇನಾಧೀಶ್ವರ ಸರ್ವೇಶ್ವರನಿಗೆ ಕೃತಜ್ಞತಾಸ್ತೋತ್ರ ಮಾಡಿ; ಆತ ಒಳ್ಳೆಯವನು, ಆತನ ಪ್ರೀತಿ ಶಾಶ್ವತ’ ಎಂದು ಹಾಡುತ್ತಾ ಕೃತಜ್ಞತಾಬಲಿಯನ್ನು ದೇವಾಲಯಕ್ಕೆ ತರುವರು. ಅವರ ಗಾನ ನಿಮ್ಮ ಕಿವಿಗೆ ಬೀಳುವುದು. ನಾಡನ್ನು ಬಿಡುಗಡೆಮಾಡಿ ಹಿಂದಿನ ಸುಸ್ಥಿತಿಗೆ ಏರಿಸುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು