ಕೀರ್ತನೆಗಳು 146:9 - ಕನ್ನಡ ಸತ್ಯವೇದವು C.L. Bible (BSI)9 ರಕ್ಷಿಸುವನು ಪ್ರಭು ಪರದೇಶಿಗಳನು I ಆದರಿಸುವನು ಅನಾಥರನು, ವಿಧವೆಯರನು I ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು II ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ. ಆತನು ಅನಾಥರಿಗೂ, ವಿಧವೆಯರಿಗೂ ಆಧಾರವಾಗಿದ್ದಾನೆ. ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)9 ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ. ಆತನು ಅನಾಥರಿಗೂ ವಿಧವೆಯರಿಗೂ ಆಧಾರವಾಗಿದ್ದಾನೆ. ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡಿಬಿಡುತ್ತಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ. ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ. ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 ಯೆಹೋವ ದೇವರು ಪರದೇಶಸ್ಥರನ್ನು ಕಾಪಾಡುತ್ತಾರೆ. ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಉದ್ಧರಿಸುತ್ತಾರೆ. ಆದರೆ ದುಷ್ಟರ ಮಾರ್ಗವನ್ನು ಬೇಸರಪಡಿಸುತ್ತಾರೆ. ಅಧ್ಯಾಯವನ್ನು ನೋಡಿ |
ಅದಕ್ಕೆ ಅವನ ಪತ್ನಿ ಜೆರೆಷಳೂ ಹಾಗೂ ಅವನ ಆಪ್ತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಗಲ್ಲಿಗೇರಿಸುವ ಸಲುವಾಗಿ ಇಪ್ಪತ್ತೆರಡು ಮೀಟರ್ ಉದ್ದದ ಗಲ್ಲುಮರವೊಂದನ್ನು ಸಿದ್ಧಮಾಡಿಸಿರಿ. ಅನಂತರ ನೀವು ನೆಮ್ಮದಿಯಿಂದ ಅರಸನ ಜೊತೆ ಔತಣಕ್ಕೆ ಹೋಗಬಹುದು,” ಎಂದು ಸಲಹೆ ನೀಡಿದರು. ಅದು ಅವನಿಗೆ ಸಮರ್ಪಕವಾಗಿ ಕಂಡುಬರಲು ಹಾಮಾನನು ಅದರಂತೆಯೇ ಗಲ್ಲುಮರವನ್ನು ಸಿದ್ಧಮಾಡಿಸಿದನು.