Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 137:4 - ಕನ್ನಡ ಸತ್ಯವೇದವು C.L. Bible (BSI)

4 ಪ್ರಭುಗೀತೆಗಳ ನಾವು ಗಾನ ಮಾಡುವುದೆಂತು I ಅನ್ಯನಾಡಿನೊಳು ಅವುಗಳನು ಹಾಡುವುದೆಂತು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ನಾವು ಪರದೇಶದಲ್ಲಿ ಯೆಹೋವನ ಗೀತೆಗಳನ್ನು ಹಾಡುವುದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ನಾವು ಪರದೇಶದಲ್ಲಿ ಯೆಹೋವಗೀತಗಳನ್ನು ಹಾಡುವದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದರೆ ಪರದೇಶದಲ್ಲಿ ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಅನ್ಯದೇಶದಲ್ಲಿ ನಾವು ಯೆಹೋವ ದೇವರ ಹಾಡುಗಳನ್ನು ಹಾಡುವುದು ಹೇಗೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 137:4
6 ತಿಳಿವುಗಳ ಹೋಲಿಕೆ  

ಆ ದಿನದಲ್ಲಿ ಆಸ್ಥಾನದ ಗೀತೆಗಳು ಶೋಕಗೀತೆಗಳಾಗಿ ಮಾರ್ಪಡುವುವು. ಹೆಣಗಳು ಎಲ್ಲೆಲ್ಲೂ ಬಿದ್ದಿರುವುವು. ಅವುಗಳನ್ನು ಸದ್ದುಗದ್ದಲವಿಲ್ಲದೆ ಬಿಸಾಡಲಾಗುವುದು.” ಇದು ಸರ್ವೇಶ್ವರಸ್ವಾಮಿಯ ನುಡಿ.


ಇನ್ನವರು ಸರ್ವೇಶ್ವರಸ್ವಾಮಿಗೆ ನೈವೇದ್ಯವಾಗಿ ದ್ರಾಕ್ಷಾರಸವನ್ನು ಸುರಿಯರು. ಅವರ ಯಜ್ಞಗಳು ಆ ಸ್ವಾಮಿಗೆ ಮೆಚ್ಚುಗೆಯಾಗುವುದಿಲ್ಲ. ಅವರ ಆಹಾರ ಹೆಣದ ಮನೆಯ ಆಹಾರದಂತಿರುವುದು. ಅದನ್ನು ತಿನ್ನುವವರೆಲ್ಲರು ಅಶುದ್ಧರಾಗುವರು. ಅದು ಹೊಟ್ಟೆತುಂಬಲು ಮಾತ್ರ ಸರಿಯೇ ಹೊರತು ದೇವಾಲಯದಲ್ಲಿ ಮಾಡುವ ಅರ್ಪಣೆಗೆ ಸಲ್ಲದು.


ಎಂದೇ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಆ ದಿನದಂದು ನಿಮಗೆ ಆಜ್ಞಾಪಿಸಿ : “ನೀವು ಅತ್ತು ಪ್ರಲಾಪಿಸಬೇಕು, ತಲೆಬೋಳಿಸಿಕೊಂಡು ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು,” ಎಂದು ಹೇಳಿದರು.


ಆಗ ನೀನು ಹೀಗೆಂದುಕೊಳ್ಳುವೆ ಮನದೊಳು : “ನಾನೋ ಮಕ್ಕಳನು ಕಳೆದುಕೊಂಡವಳು, ಪುತ್ರಹೀನಳು, ದೇಶಭ್ರಷ್ಟಳು, ತಿರುಕಳು. ಇಷ್ಟೊಂದು ಮಕ್ಕಳನು ಕೊಟ್ಟವರಾರು ನನಗೆ? ಇವರನ್ನು ಪೋಷಿಸಿದವರಾರು ಹೀಗೆ? ಇವರೆಲ್ಲಿದ್ದರು? ನಾನೋ ಒಬ್ಬಂಟಿಗಳಾಗಿದ್ದೆ!”


ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು