Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 127:2 - ಕನ್ನಡ ಸತ್ಯವೇದವು C.L. Bible (BSI)

2 ಹೊಟ್ಟೆಪಾಡಿಗಾಗಿ ಕಷ್ಟಪಡಲೋಸುಗ I ಹೊತ್ತಿಗೆ ಮುಂಚೆ ಎದ್ದೇಳುವುದು ವ್ಯರ್ಥ II ಹೊತ್ತು ಮೀರಿ ಮಲಗಲು ಹೋಗುವುದೂ ವ್ಯರ್ಥ I ನಿದ್ರೆಯಲು ಪ್ರಭುವೇ ಭಕ್ತರ ಪೋಷಕ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಬೆಳಗಾಗುವುದಕ್ಕಿಂತ ಮುಂಚೆ ಏಳುವವರೇ, ಹೊತ್ತು ಮೀರಿ ಮಲಗುವವರೇ, ನೀವು ಆಹಾರಕ್ಕಾಗಿ ಇಷ್ಟು ಕಷ್ಟಪಡುವುದು ವ್ಯರ್ಥ; ಆತನು ಅದನ್ನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಕೊಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಬೆಳಗಾಗುವದಕ್ಕಿಂತ ಮುಂಚೆ ಏಳುವವರೇ, ಹೊತ್ತು ಮೀರಿ ಮಲಗುವವರೇ, ನೀವು ಆಹಾರಕ್ಕಾಗಿ ಇಷ್ಟು ಕಷ್ಟಪಡುವದು ವ್ಯರ್ಥ; ಆತನು ಅದನ್ನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಕೊಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಕೇವಲ ಹೊಟ್ಟೆಪಾಡಿಗಾಗಿ ಮುಂಜಾನೆಯಲ್ಲೇ ಎದ್ದು ರಾತ್ರಿಯವರೆಗೂ ದುಡಿಯುವುದು ಕೇವಲ ವ್ಯರ್ಥ. ಯಾಕೆಂದರೆ ದೇವರು ತನ್ನ ಪ್ರಿಯರಿಗೆ ಆಹಾರವನ್ನು ನಿದ್ರೆಯಲ್ಲೂ ದಯಪಾಲಿಸುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ನೀವು ಆಹಾರಕ್ಕಾಗಿ ಶ್ರಮೆಪಟ್ಟು, ಬೆಳಿಗ್ಗೆ ಬೇಗ ಏಳುವುದೂ, ರಾತ್ರಿ ತಡವಾಗಿ ಮಲಗುವುದೂ ವ್ಯರ್ಥವೇ, ದೇವರು ತಮ್ಮನ್ನು ಪ್ರೀತಿಸುವವರಿಗೆ ನಿದ್ರೆಯಿಂದಿರುವಾಗಲೂ ಅವಶ್ಯಕತೆಗಳನ್ನು ಒದಗಿಸಿಕೊಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 127:2
17 ತಿಳಿವುಗಳ ಹೋಲಿಕೆ  

ದುಡಿಯುವವನು ಸ್ವಲ್ಪ ತಿಂದರೂ ಸರಿ, ಹೆಚ್ಚು ತಿಂದರೂ ಸರಿ, ಹಾಯಾಗಿ ನಿದ್ರಿಸುತ್ತಾನೆ. ಐಶ್ವರ್ಯವಂತನ ಸಂಪತ್ತಾದರೋ ಅವನಿಗೆ ನಿದ್ರೆ ಬರಲು ಬಿಡುವುದಿಲ್ಲ.


ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ I ಪ್ರಭು ನೀ ಕಾಯುವೆ ಎನ್ನ ಸುರಕ್ಷಿತನಾಗಿ II


ನಂಬಿಕೆಯಿಂದಿರುವುದರಿಂದ ಧೈರ್ಯದಿಂದಿರುವೆ ಸುತ್ತಲು ಸುರಕ್ಷಿತನಾಗಿ ನೆಮ್ಮದಿಯಿಂದ ಮಲಗುವೆ.


ಹಾಯಾಗಿ ಮಲಗಿ ನಿದ್ರಿಸುವೆನು I ಸುಖಿಯಾಗಿ ಮರಳಿ ಎದ್ದೇಳುವೆನು I ಕಾಯ್ದು ಕಾಪಾಡುವನು ಪ್ರಭು ನನ್ನನು II


‘ಆಗ ನಾನು ನೋಡಿದೆ ಎಚ್ಚೆತ್ತು ನನ್ನ ಕನಸು ನನಗೆ ಮನೋಹರವಾಗಿತ್ತು.’


ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ದುಷ್ಟಮೃಗಗಳು ನಾಡಿನಲ್ಲಿ ಇನ್ನಿರದಂತೆ ಮಾಡುವೆನು; ನನ್ನ ಜನರು ಕಾಡಿನಲ್ಲಿ ನಿರ್ಭಯವಾಗಿ ವಾಸಿಸುವರು, ಅರಣ್ಯದಲ್ಲಿ ಹಾಯಾಗಿ ನಿದ್ರಿಸುವರು.


ಲೋಕದಲ್ಲಿ ನಡೆಯುವ ಎಲ್ಲ ಕಾರ್ಯಕಲಾಪಗಳನ್ನು ಗಮನಿಸಿದ್ದೇನೆ. ಗಾಳಿಯನ್ನು ಹಿಡಿಯಲು ಬೆನ್ನಟ್ಟಿದಂತೆ ಎಲ್ಲವೂ ವ್ಯರ್ಥ.


ಮಾನವನು ಪಡುವ ಪ್ರಯಾಸವೆಲ್ಲ ಅವನ ಹೊಟ್ಟೆಪಾಡಿಗಾಗಿಯೇ. ಆದರೂ ಅವನಿಗೆ ತೃಪ್ತಿಯಿಲ್ಲ.


“ನಾನು ಸುಖಾನುಭವವನ್ನು ತೊರೆದು ಯಾರಿಗೋಸ್ಕರ ಒಂದೇ ಸಮನೆ ದುಡಿಯುತ್ತಾ ಇದ್ದೇನೆ?” ಎಂದುಕೊಂಡ. ಇದೂ ಕೂಡ ವ್ಯರ್ಥ, ಕೇವಲ ಪ್ರಯಾಸವೇ ಸರಿ.


ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು I ನಿನ್ನ ಭುಜಬಲದಿಂದ ನಮ್ಮನು ಜಯಗೊಳಿಸು II


ಸರ್ವೇಶ್ವರನ ಆಶೀರ್ವಾದ ಭಾಗ್ಯದಾಯಕ; ಅದಕ್ಕೆ ಬಾಹಿರವಾದುದು ಕಷ್ಟದುಃಖ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು