Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 119:48 - ಕನ್ನಡ ಸತ್ಯವೇದವು C.L. Bible (BSI)

48 ನಾ ಕೈಯೊಡ್ಡಿ ಕೇಳುವುದು ನಿನ್ನ ಆಜ್ಞೆಗಳನೆ I ನನಗೆ ಪ್ರಿಯ, ಧ್ಯಾನಾರ್ಹ, ನಿನ್ನ ನಿಬಂಧನೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

48 ನಿನ್ನ ಆಜ್ಞೆಗಳನ್ನು ಗೌರವಿಸುತ್ತೇನೆ, ಅವುಗಳನ್ನು ನಾನು ಪ್ರೀತಿಸುತ್ತೇನೆ, ನಿನ್ನ ನಿಬಂಧನೆಗಳನ್ನು ಧ್ಯಾನಿಸುತ್ತೇನೆ. ಸಾಯಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

48 ನಿನ್ನ ಆಜ್ಞೆಗಳಿಗಾಗಿಯೇ ಕೈಯೊಡ್ಡುತ್ತೇನೆ, ಅವು ನನಗೆ ಇಷ್ಟವಾಗಿವೆ; ನಿನ್ನ ನಿಬಂಧನೆಗಳನ್ನು ಧ್ಯಾನಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು. ಅವು ನನಗೆ ಇಷ್ಟವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

48 ನಾನು ಪ್ರೀತಿಸುವ ನಿಮ್ಮ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, ನಿಮ್ಮ ತೀರ್ಪುಗಳನ್ನು ಧ್ಯಾನ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 119:48
11 ತಿಳಿವುಗಳ ಹೋಲಿಕೆ  

ನನಗಿದೆ ನಿನ್ನ ನಿಯಮಗಳ ಧ್ಯಾನ I ನಿನ್ನ ಮಾರ್ಗಗಳಲ್ಲಿ ಗಾಢ ಗಮನ II


ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು I ಹಗಲಿರುಳೆನ್ನದೆ ಅದನೆ ಧ್ಯಾನಿಸುತಿರುವವನಾರೋ ಅವನೇ ಧನ್ಯನು II


“ನನ್ನನ್ನು ‘ಸ್ವಾಮೀ, ಸ್ವಾಮೀ,’ ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು.


ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು.


ಇದನ್ನೆಲ್ಲಾ ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಧನ್ಯರು !


ಯಕೋಬ ವಂಶಜರೇ, ನಿಮ್ಮ ಎದುರಾಳಿಗಳ ಮೇಲೆ ನಿಮಗೆ ಜಯ ಲಭಿಸಲಿ. ನಿಮ್ಮ ಶತ್ರುಗಳೆಲ್ಲಾ ನಿರ್ಮೂಲವಾಗಲಿ.


ಅವರು ತಮ್ಮ ವಿಗ್ರಹಗಳ ಮುಂದೆ ಜನರಿಗಾಗಿ ಸೇವೆಮಾಡಿ, ಇಸ್ರಯೇಲ್ ವಂಶದವರಿಗೆ ಪಾಪಕಾರಿವಿಘ್ನವಾದುದರಿಂದ, ನಾನು ಅವರ ಮೇಲೆ ಕೈಯೆತ್ತಿದ್ದೇನೆ. ಅವರು ತಮ್ಮ ದೋಷಫಲವನ್ನು ಅನುಭವಿಸಿಯೇ ತೀರಬೇಕು; ಇದು ಸರ್ವೇಶ್ವರನಾದ ದೇವರ ನುಡಿ.


ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ I ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ II


ಸಂಜೆ ವೇಳೆಯಲ್ಲಿ ಅವನು ವಿಶ್ರಾಂತಿಗಾಗಿ ತಿರುಗಾಡಲು ಹೋಗಿದ್ದನು. ಕಣ್ಣೆತ್ತಿ ನೋಡಿದಾಗ ಒಂಟೆಗಳು ಬರುತ್ತಿರುವುದು ಅವನಿಗೆ ಕಾಣಿಸಿತು.


ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ I ನಾನದರಲೇ ದಿನವೆಲ್ಲಾ ಧ್ಯಾನಮಯ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು