Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 119:45 - ಕನ್ನಡ ಸತ್ಯವೇದವು C.L. Bible (BSI)

45 ನಿನ್ನ ನಿಯಮದಂತೆ ಬಾಳಲು ಯತ್ನಿಸಿದೆ I ಎಂತಲೇ, ಆತಂಕವಿಲ್ಲದೆ ನಡೆದೆ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

45 ನಾನು ನಿನ್ನ ನಿಯಮಗಳನ್ನು ಅಭ್ಯಾಸಿಸುವವನಾದುದರಿಂದ, ಸರಾಗವಾಗಿ ನಡೆಯುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

45 ನಾನು ನಿನ್ನ ನಿಯಮಗಳನ್ನು ಅಭ್ಯಾಸಿಸುವವನಾದ್ದರಿಂದ ಆಟಂಕವಿಲ್ಲದೆ ನಡೆಯುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

45 ನಿಮ್ಮ ಸೂತ್ರಗಳನ್ನು ನಾನು ಹುಡುಕುವುದರಿಂದ, ನಾನು ಸ್ವತಂತ್ರವಾಗಿಯೇ ಜೀವಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 119:45
18 ತಿಳಿವುಗಳ ಹೋಲಿಕೆ  

ನಿನ್ನ ನುಡಿಗನುಸಾರ ದೃಢಪಡಿಸು ನನ್ನ ನಡತೆಯನು I ಕೆಡುಕೊಂದೂ ಅಧೀನಪಡಿಸದಿರಲಿ ನನ್ನನು II


ಆದರೆ ನಮಗೆ ವಿಮೋಚನೆಯನ್ನು ತರುವ ಸರ್ವೋತ್ತಮ ಧರ್ಮಶಾಸ್ತ್ರವನ್ನು ಲಕ್ಷ್ಯವಿಟ್ಟು ನೋಡಿ ಅದರಲ್ಲೇ ಧ್ಯಾನಾಸಕ್ತನಾಗಿರುವವನು ಅದನ್ನು ಮರೆಯುವುದಿಲ್ಲ. ಅವನು ಕೇಳುವವನು ಮಾತ್ರ ಆಗಿರದೆ, ವಾಕ್ಯದ ಪ್ರಕಾರ ನಡೆಯುವವನೂ ಆಗಿರುತ್ತಾನೆ. ಇಂಥವನು ಭಾಗ್ಯವಂತನು!


ನಡೆಯುವಾಗ ನಿನ್ನ ಹೆಜ್ಜೆಗೆ ತಡೆಯಾಗದು, ನೀ ಓಡುವಾಗ ಮುಗ್ಗರಿಸಿ ಬೀಳಲಾಗದು.


ಉದ್ಧರಿಸೆನ್ನನು, ನಾನು ನಿನ್ನವನು I ನಿನ್ನ ನಿಯಮಗಳಲೇ ಆಸಕ್ತನು II


ಪವಿತ್ರಗ್ರಂಥದಿಂದಲೇ ನಿತ್ಯಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿಹೇಳುತ್ತದೆ.


ತಾವೇ ದುರಭ್ಯಾಸಗಳಿಗೆ ಗುಲಾಮರಾಗಿದ್ದರೂ ತಾವು ವಶಪಡಿಸಿಕೊಂಡವರಿಗೆ ಸ್ವಾತಂತ್ರ್ಯವನ್ನು ತರುವ ಮಾತುಕೊಡುತ್ತಾರೆ. ಒಬ್ಬನು ಯಾವುದಕ್ಕೆ ಸೋಲುತ್ತಾನೋ ಅದಕ್ಕೆ ಅವನು ಗುಲಾಮನಾಗುತ್ತಾನೆ.


ವಿಮೋಚನೆಯನ್ನೀಯುವ ಧರ್ಮಶಾಸ್ತ್ರದ ನ್ಯಾಯತೀರ್ಪಿಗೆ ಗುರಿಯಾಗುವಿರಿ ಎಂದು ತಿಳಿದು ನೀವು ನಡೆಯಲ್ಲೂ ನುಡಿಯಲ್ಲೂ ಯೋಗ್ಯರಾಗಿ ಬಾಳಿ.


ಬುದ್ಧಿಹೀನರಾಗಿರದೆ ಪ್ರಭುವಿನ ಚಿತ್ತವೇನೆಂದು ಗ್ರಹಿಸಿಕೊಳ್ಳಿರಿ.


“ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ


ಆಕಾಶದ ಕೆಳಗೆ ನಡೆಯುವ ಎಲ್ಲಾ ಕಾರ್ಯಗಳನ್ನು ಜ್ಞಾನದಿಂದ ವಿಚಾರಿಸಿದೆ; ವಿಮರ್ಶಿಸಲು ಮನಸ್ಸು ಮಾಡಿದೆ. ನರಮಾನವರ ಕರ್ತವ್ಯ ಎಂದು ದೇವರು ವಿಧಿಸಿರುವ ಕೆಲಸಕಾರ್ಯಗಳೆಲ್ಲ ಕಷ್ಟಕರವಾದುವೇ.


ಬೇರೆಯವರೊಡನೆ ಸೇರದವನು ಸ್ವೇಚ್ಛಾನುಸಾರ ನಡೆಯುವನು; ಇತರರು ಸುಜ್ಞಾನವೆನ್ನುವುದನ್ನೇ ವಿರೋಧಿಸುವನು.


ಜನರಿಗಾನಂದ ಅನಿರೀಕ್ಷಿತ ಆಸ್ತಿಯಲಿ I ನನಗಾದರೋ ಪರಮಾನಂದ ನಿನ್ನ ನುಡಿಯಲಿ II


ನಿನ್ನ ನುಡಿಯನು ಧ್ಯಾನಿಸಬೇಕೆಂದೇ I ಎಚ್ಚರಗೊಳ್ಳುವೆ ಇರುಳಿನ ಜಾವಕೆ ಮುಂದೆ II


ಧರೆಯೊಳು ಪ್ರವಾಸಿಯಾಗಿ ನಾನಿರುವೆನಯ್ಯಾ I ನಿನ್ನಾಜ್ಞೆಗಳನು ನನಗೆ ಮರೆಮಾಡಬೇಡಯ್ಯಾ II


ಕಷ್ಟಾನುಭವವೂ ಆಯಿತೆನಗೆ ಹಿತಕರ I ಅದು ತಂದಿತು ನಿನ್ನ ನಿಬಂಧನೆಗಳೆಚ್ಚರ II


ಹಿಡಿದಿರುವೆನು ನಿನ್ನ ಆಜ್ಞಾಮಾರ್ಗವನು I ಏಕೆನೆ ಹಿರಿದಾಗಿಸಿರುವೆ ನೀ ನನ್ನ ಅರಿವನು II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು