Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 119:172 - ಕನ್ನಡ ಸತ್ಯವೇದವು C.L. Bible (BSI)

172 ವರ್ಣಿಸಲಿ ನನ್ನ ನಾಲಿಗೆ ನಿನ್ನ ನುಡಿಗಳನು I ನಿನ್ನ ಕೈ ನೀಡಲಿ ನನಗೆ ನೆರವನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

172 ನನ್ನ ನಾಲಿಗೆಯು ನಿನ್ನ ನುಡಿಗಳನ್ನು ವರ್ಣಿಸಲಿ, ನಿನ್ನ ಆಜ್ಞೆಗಳೆಲ್ಲಾ ನೀತಿಯುಳ್ಳದ್ದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

172 ನನ್ನ ನಾಲಿಗೆಯು ನಿನ್ನ ನುಡಿಗಳನ್ನು ವರ್ಣಿಸಲಿ; ನಿನ್ನ ಆಜ್ಞೆಗಳೆಲ್ಲಾ ನೀತಿಯೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

172 ನನ್ನ ನಾಲಿಗೆಯು ನಿನ್ನ ವಾಕ್ಯವನ್ನು ಗಾಯನ ಮಾಡಲಿ. ನಿನ್ನ ಆಜ್ಞೆಗಳೆಲ್ಲಾ ನೀತಿಯ ಆಜ್ಞೆಗಳಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

172 ನಿಮ್ಮ ಆಜ್ಞೆಗಳೆಲ್ಲಾ ನೀತಿಯುಳ್ಳವುಗಳಾಗಿವೆ, ಆದುದರಿಂದ ನನ್ನ ನಾಲಿಗೆಯು ನಿಮ್ಮ ವಾಕ್ಯವನ್ನು ಹಾಡಿ ಹರಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 119:172
15 ತಿಳಿವುಗಳ ಹೋಲಿಕೆ  

ನಿಮ್ಮ ಬಾಯಿಂದ ಕೆಟ್ಟಮಾತುಗಳು ಬಾರದಿರಲಿ. ಪ್ರತಿಯಾಗಿ ನಿಮ್ಮ ಮಾತುಗಳು ಆದರ್ಶಕರವಾಗಿರಲಿ; ಸಮಯೋಚಿತವಾಗಿರಲಿ, ಕೇಳುವವರ ಕಿವಿಗದು ಹಿತಕರವಾಗಿರಲಿ.


ಧರ್ಮಶಾಸ್ತ್ರ ಪಾರಮಾರ್ಥಿಕವಾದುದೆಂದು ನಾವು ಬಲ್ಲೆವು. ನಾನಾದರೋ ನರಮಾನವನು; ಪಾಪಕ್ಕೆ ನನ್ನನ್ನೇ ಗುಲಾಮನನ್ನಾಗಿ ಮಾರಿಕೊಂಡವನು.


ಧರ್ಮಶಾಸ್ತ್ರ ಪವಿತ್ರವಾದುದು. ಅಂತೆಯೇ, ಆಜ್ಞೆಯೂ ಪವಿತ್ರವಾದುದು. ನ್ಯಾಯವಾದುದು ಮತ್ತು ಹಿತಕರವಾದುದು.


ಸಜ್ಜನರ ಬಾಯಿ ಆಡುವುದು ಸುಜ್ಞಾನವನು I ಅವನ ನಾಲಿಗೆ ನುಡಿಯುವುದು ನ್ಯಾಯನೀತಿಯನು II


ನಿನ್ನ ನೀತಿ ನಿತ್ಯ I ನಿನ್ನ ಶಾಸ್ತ್ರ ಸತ್ಯ II


ಸತ್ಯವಾದುವು ನೀನಿತ್ತ ಕಟ್ಟಳೆಗಳು I ಪೂರ್ಣವಿಶ್ವಾಸನೀಯವಾದುವು ಅವುಗಳು II


ನಿಮ್ಮ ಸಂಭಾಷಣೆ ಯಾವಾಗಲೂ ಹಿತಕರವಾಗಿದ್ದು ಇತರರನ್ನು ಆಕರ್ಷಿಸುವಂತಿರಲಿ. ನೀವು ಯಾರು ಯಾರಿಗೆ, ಹೇಗೆ ಉತ್ತರಿಸಬೇಕು ಎಂಬುದನ್ನು ಕಲಿತುಕೊಳ್ಳಿರಿ.


ನಿನ್ನ ಆಜ್ಞೆಗಳೆಲ್ಲ ನಂಬಲರ್ಹವಾದುವಯ್ಯಾ I ನಿಷ್ಕಾರಣವಾಗಿ ಹಿಂಸಿಸುತಿಹರು, ನೆರವಾಗಯ್ಯಾ II


ಬಂದುವು ಆ ವಿಧಿಗಳು ನಿನ್ನ ಬಾಯಿಂದ I ವರ್ಣಿಸುವೆನು ಅವನ್ನು ನನ್ನ ಬಾಯಿಂದ II


ಮಾತಾಡುವೆನು ನಿನ್ನ ಆಜ್ಞೆಗಳ ವಿಷಯವಾಗಿ I ಅರಸುಗಳ ಮುಂದೆಯು ನಿಸ್ಸಂಕೋಚವಾಗಿ II


ಮರೆಮಾಡೆವು ಅವರ ಸಂತತಿಯಾದ ನಿಮಗೆ I ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II


ಇವುಗಳನ್ನು ನಿನ್ನ ಮಕ್ಕಳಿಗೆ ಮನದಟ್ಟಾಗಿಸು; ಮನೆಯಲ್ಲಿರುವಾಗಲು, ಪ್ರಯಾಣದಲ್ಲಿರುವಾಗಲು, ಮಲಗುವಾಗಲು, ಏಳುವಾಗಲು ಇವುಗಳನ್ನು ಕುರಿತು ಪಾಠಹೇಳು.


ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ I ನನಗೆ ಹಗೆ ಮಿಥ್ಯಮಾರ್ಗಗಳೆಲ್ಲ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು