Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 119:163 - ಕನ್ನಡ ಸತ್ಯವೇದವು C.L. Bible (BSI)

163 ಹಿಡಿಸದು ಎನಗೆ ಮಿಥ್ಯವಾದುದು, ಅದು ಎನಗೆ ಅಸಹ್ಯ I ನಿನ್ನ ಧರ್ಮಶಾಸ್ತ್ರವಾದರೋ ನನಗೆ ಸುಪ್ರಿಯ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

163 ಮಿಥ್ಯವಾದದ್ದನ್ನು ದ್ವೇಷಿಸುತ್ತೇನೆ, ಅದು ನನಗೆ ಅಸಹ್ಯವಾಗಿದೆ, ನಿನ್ನ ಧರ್ಮಶಾಸ್ತ್ರವು ನನಗೆ ಪ್ರಿಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

163 ವಿುಥ್ಯವಾದದ್ದನ್ನು ಹಗೆಮಾಡುತ್ತೇನೆ, ಅದು ನನಗೆ ಅಸಹ್ಯವಾಗಿದೆ; ನಿನ್ನ ಧರ್ಮಶಾಸ್ತ್ರವು ನನಗೆ ಪ್ರಿಯವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

163 ನಾನು ಸುಳ್ಳುಗಳನ್ನು ದ್ವೇಷಿಸುವೆನು! ಅವು ನನಗೆ ಅಸಹ್ಯವಾಗಿವೆ. ನಿನ್ನ ಉಪದೇಶಗಳು ನನಗೆ ಪ್ರಿಯವಾಗಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

163 ಸುಳ್ಳುತನವನ್ನು ನಾನು ದ್ವೇಷಿಸಿ ಅಸಹ್ಯಪಡುತ್ತೇನೆ ಆದರೆ ನಾನು ನಿಮ್ಮ ನಿಯಮವನ್ನು ಪ್ರೀತಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 119:163
13 ತಿಳಿವುಗಳ ಹೋಲಿಕೆ  

ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ I ನನಗೆ ಹಗೆ ಮಿಥ್ಯಮಾರ್ಗಗಳೆಲ್ಲ II


ನಿಮ್ಮ ಪ್ರೀತಿ ನಿಷ್ಕಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ.


ಕೆಟ್ಟದ್ದನ್ನು ದ್ವೇಷಿಸಿರಿ, ಒಳ್ಳೆಯದನ್ನು ಪ್ರೀತಿಸಿರಿ. ನ್ಯಾಯಮಂಟಪದಲ್ಲಿ ಸತ್ಯಕ್ಕೆ ಜಯವಾಗುವಂತೆ ನೋಡಿಕೊಳ್ಳಿರಿ. ಆಗ ಬಹುಶಃ ಸೇನಾಧೀಶ್ವರ ದೇವರಾದ ಸರ್ವೇಶ್ವರ ಅಳಿದುಳಿದ ಜೋಸೆಫನ ವಂಶಕ್ಕೆ ಕರುಣೆ ತೋರಿಯಾರು.


ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ I ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ II


ಆದರೆ ಶುನಕ ಸಮಾನರೂ ಮಾಟಮಂತ್ರಗಾರರೂ ಕಾಮುಕರೂ ಕೊಲೆಗಾರರೂ ವಿಗ್ರಹಾರಾಧಕರೂ ಅಸತ್ಯವಾದಿಗಳೂ ನಗರದ ಹೊರಗೆ ಬಿದ್ದಿರುವರು.


ಆದುದರಿಂದ, ಸುಳ್ಳಾಡುವುದನ್ನು ಬಿಟ್ಟುಬಿಡಿ. ಒಬ್ಬರೊಡನೊಬ್ಬರು ಸತ್ಯವನ್ನೇ ನುಡಿಯಿರಿ. ಏಕೆಂದರೆ, ನಾವೆಲ್ಲರೂ ಒಂದೇ ಶರೀರದ ಅಂಗಗಳು.


ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು.


ದ್ವೇಷವಿದೆ ಎನಗೆ ದ್ವಿಮನಸ್ಕರಲಿ I ಪ್ರೀತಿ ಇದೆ ನಿನ್ನ ಧರ್ಮಶಾಸ್ತ್ರದಲಿ II


ಮೋಸಗಾರನು ವಾಸಮಾಡನು ನನ್ನ ನಿವಾಸದಲಿ I ಸುಳ್ಳುಗಾರನು ನಿಲ್ಲಲಾರನು ನನ್ನ ಸಮ್ಮುಖದಲಿ II


ನಿನ್ನ ಆಜ್ಞೆಗಳಲ್ಲಿದೆ ನನಗಾನಂದ I ಅವುಗಳ ಮೇಲೆಯೆ ನನಗಭಿಮೋದ II


ವಿವೇಕಿಯಾದೆನು ನಿನ್ನ ನಿಯಮಗಳ ಮೂಲಕ I ದ್ವೇಷಿಸುತಿಹೆನು ಪ್ರತಿಯೊಂದು ಮಿಥ್ಯಾ ಮಾರ್ಗ II


ಸಜ್ಜನನಿಗೆ ಮೋಸಮಾತು ಅಸಹ್ಯ; ದುರ್ಜನನ ನಡತೆ ನಿಂದಾಸ್ಪದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು