Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 119:16 - ಕನ್ನಡ ಸತ್ಯವೇದವು C.L. Bible (BSI)

16 ನಿನ್ನ ನಿಯಮಗಳ ನೆನೆದು ನಲಿವೆನಯ್ಯಾ I ನಿನ್ನ ವಾಕ್ಯವನು ಮರೆಯಲಾರೆನಯ್ಯಾ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು, ನಿನ್ನ ವಾಕ್ಯವನ್ನು ಮರೆಯುವುದಿಲ್ಲ. ಗಿಮೆಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ನಿನ್ನ ನಿಬಂಧನೆಗಳಲ್ಲಿ ಉಲ್ಲಾಸಪಡುವೆನು; ನಿನ್ನ ವಾಕ್ಯವನ್ನು ಮರೆಯುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ನಾನು ನಿನ್ನ ಕಟ್ಟಳೆಗಳಲ್ಲಿ ಆನಂದಿಸುವೆನು, ನಿನ್ನ ಮಾತುಗಳನ್ನು ಮರೆಯುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ನಿಮ್ಮ ತೀರ್ಪುಗಳಲ್ಲಿ ಉಲ್ಲಾಸಗೊಂಡು, ನಿಮ್ಮ ವಾಕ್ಯವನ್ನು ತಿರಸ್ಕರಿಸದಿರುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 119:16
24 ತಿಳಿವುಗಳ ಹೋಲಿಕೆ  

ನಿನ್ನಾಜ್ಞೆಯು ಆನಂದದಾಯಕ I ಅವೇ ನನಗೆ ಮಂತ್ರಾಲೋಚಕ II


ನಿನ್ನ ಆಜ್ಞೆಗಳಲ್ಲಿದೆ ನನಗಾನಂದ I ಅವುಗಳ ಮೇಲೆಯೆ ನನಗಭಿಮೋದ II


ನನ್ನ ಅಂತರಂಗದಲ್ಲಿ ದೈವನಿಯಮವನ್ನು ಕುರಿತು ಆನಂದಿಸುತ್ತೇನೆ.


ಮಗನೇ, ನನ್ನ ಉಪದೇಶವನ್ನು ಮರೆಯಬೇಡ, ನನ್ನ ಆಜ್ಞೆಗಳನ್ನು ನಿನ್ನ ಹೃದಯದಲ್ಲಿಡು.


ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲಿ I ಪಡೆಯುವೆ ಹರ್ಷಾನಂದವನು ಅದರಲಿ II


ಪ್ರಭು, ದಾರಿತಪ್ಪಿದ ಕುರಿ ನಾನು I ಪರಾಂಬರಿಸು ನಿನ್ನ ದಾಸನನು I ಮರೆಯೆನು ನಿನ್ನಾಜ್ಞೆಗಳನು II


ನಾನಲ್ಪನು, ತಿರಸ್ಕಾರ ಹೊಂದಿದವನು I ಆದರೂ ಮರೆತಿಲ್ಲ ನಿನ್ನ ನೇಮಗಳನು II


ಕೈಯಲಿ ಜೀವ ಹಿಡಿದು ಕಳೆಯುತಿರುವೆ ಕಾಲವೆಲ್ಲ I ಆದರೂ ಪ್ರಭು, ನಾ ಧರ್ಮಶಾಸ್ತ್ರವನು ಮರೆತಿಲ್ಲ II


ಬೆಂಕಿಗೆ ಬಿಸಾಡಿದ ಒಣ ಬುದ್ಧಲಿಯಂತಾದೆ I ಆದರೂ ನಿನ್ನ ನಿಬಂಧನೆಗಳನ್ನು ಮರೆಯದಿದ್ದೆ II


ನಾ ಬದುಕುವಂತೆ ತೋರೆನಗೆ ನಿನ್ನ ದಯ I ನಿನ್ನ ಧರ್ಮಶಾಸ್ತ್ರ ನನಗೆ ಪರಮಪ್ರಿಯ II


ಕೊಬ್ಬಿನಂತೆ ಆ ಜನರ ಹೃದಯ ಮಂದ I ನಿನ್ನ ಧರ್ಮಶಾಸ್ತ್ರವೇ ನನಗಾನಂದ II


ಪ್ರಭುವಿನ ಧರ್ಮಶಾಸ್ತ್ರದಲಿ ಹರ್ಷಗೊಳ್ಳುವವನಾರೋ - ಅವನೇ ಧನ್ಯನು I ಹಗಲಿರುಳೆನ್ನದೆ ಅದನೆ ಧ್ಯಾನಿಸುತಿರುವವನಾರೋ ಅವನೇ ಧನ್ಯನು II


ಸಿರಿಸಂಪತ್ತಿಗಿಂತ ಮಿಗಿಲಾಗಿ I ಆನಂದಿಪೆ ನಿನ್ನ ಮಾರ್ಗಿಯಾಗಿ II


ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರಮಾವೇಶ I ನನ್ನಂತರಂಗದಲಿದೆ ದೇವಾ, ನಿನ್ನ ಧರ್ಮೋಪದೇಶ” II


ನಿನಗೆ ವಿರುದ್ಧ ನಾ ಪಾಪಮಾಡದಂತೆ I ನಿನ್ನಾ ನುಡಿಯನು ನನ್ನೆದೆಯಲ್ಲಿರಿಸಿದೆ II


ದುರ್ಜನರ ಪಾಶಗಳು ಸುತ್ತಿಕೊಂಡಿವೆ ನನ್ನನು I ಆದರು ನಾ ಮರೆಯಲಿಲ್ಲ ನಿನ್ನ ಧರ್ಮಶಾಸ್ತ್ರವನು II


ಎರಗಿವೆಯಾದರೂ ಕಷ್ಟ ಸಂಕಟಗಳು I ನನಗಾನಂದಾಯಕ ನಿನ್ನ ಆಜ್ಞೆಗಳು II


ನನ್ನ ಕಷ್ಟವ ನೋಡಿ ಮುಕ್ತಗೊಳಿಸೆನ್ನನು I ಮರೆತಿಲ್ಲ ನಾನು ನಿನ್ನ ಧರ್ಮಶಾಸ್ತ್ರವನು II


ನನಗೆ ಇಷ್ಟ ನೀನು ನೀಡುವ ಜೀವೋದ್ಧಾರ I ನಿನ್ನ ಧರ್ಮಶಾಸ್ತ್ರ ಎನಗೆ ಸಂತೋಷಕರ II


ನ್ಯಾಯವಾದ ತೀರ್ಪಿನಿಂದ ಸಜ್ಜನರಿಗೆ ಸಂತಸ; ದುರ್ಜನರಿಗಾದರೊ ಅದು ತರುತ್ತದೆ ಸಂಕಟ.


ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು