Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 119:129 - ಕನ್ನಡ ಸತ್ಯವೇದವು C.L. Bible (BSI)

129 ಅಪೂರ್ವವಾದ ನಿನ್ನ ಕಟ್ಟಳೆಗಳನು I ಹೃತ್ಪೂರ್ವಕವಾಗಿ ನಾ ಪಾಲಿಪೆನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

129 ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ, ಪೂರ್ಣಹೃದಯದಿಂದ ಅವುಗಳನ್ನು ಕೈಗೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

129 ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ; ಪೂರ್ಣಹೃದಯದಿಂದ ಅವುಗಳನ್ನು ಕೈಕೊಳ್ಳುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

129 ನಿನ್ನ ಕಟ್ಟಳೆಗಳು ಆಶ್ಚರ್ಯಕರವಾಗಿವೆ. ಪೂರ್ಣಹೃದಯದಿಂದ ಅವುಗಳನ್ನು ಅನುಸರಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

129 ನಿಮ್ಮ ಶಾಸನಗಳು ಅದ್ಭುತವಾದವುಗಳೇ; ಆದ್ದರಿಂದ ನಾನು ಅವುಗಳನ್ನು ಅನುಸರಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 119:129
9 ತಿಳಿವುಗಳ ಹೋಲಿಕೆ  

ನನ್ನ ಕುರಿತು ನಿನಗಿರುವ ಅರಿವು ಅಗಾಧ I ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ II


ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ I ಆತನ ವಿಧಿ ನಿಬಂಧನೆಗಳ ಪರಿಪಾಲಕರಿಗೆ ಅವುಗಳು ಸುಪ್ರೀತ II


ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ I ನನ್ನ ಕಣ್ಗಳಿಂದ ನೀ ತೆಗೆದುಬಿಡು ಅಂಧತೆ II


ಸರ್ವೇಶ್ವರಾ, ನೀನೆನ್ನ ದೇವನು, ಏಕೆನೆ ನೀನು ಸತ್ಯಸ್ವರೂಪನು, ನಿಷ್ಟಾವಂತನು, ಆದಿ ಯೋಜನೆಗಳನು ಪೂರೈಸುವವನು, ಅದ್ಭುತಕಾರ್ಯಗಳನು ಎಸಗಿದಂತವನು. ಘನಪಡಿಸುವೆ ನಾ ನಿನ್ನನು, ಸ್ತುತಿಸುವೆನು ನಿನ್ನ ನಾಮ ಮಹಿಮೆಯನು.


ಉದ್ಧರಿಸೆನ್ನನು, ನಿನಗೆ ಮೊರೆಯಿಡುವೆ I ನಿನ್ನ ಕಟ್ಟಳೆಗಳನು ಕೈಗೊಳ್ಳುವೆ II


ಅಂಟಿಕೊಂಡಿರುವೆನು ನಿನ್ನ ಕಟ್ಟಳೆಗಳಿಗೆ I ಆಶಾಭಂಗಪಡಿಸಬೇಡ ಪ್ರಭು ನನಗೆ II


ಆತನ ಕಟ್ಟಳೆಗಳನ್ನು ಕೈಗೊಳ್ಳುವವರು ಧನ್ಯರು I ಮನಃಪೂರ್ವಕವಾಗಿ ಆತನನು ಅರಸುವವರು ಧನ್ಯರು II


ಕೂಡಲೇ ಆರಾಧಿಸಲೆಂದು ಆತನ ಪಾದಗಳಿಗೆ ಅಡ್ಡಬಿದ್ದೆ. ಆಗ ಆತನು, “ನೀನು ನನಗೆ ಅಡ್ಡಬೀಳಬಾರದು, ನಾನು ನಿನ್ನ ಹಾಗೂ ಕ್ರಿಸ್ತೇಸು ಶ್ರುತಪಡಿಸಿದ ಸತ್ಯವನ್ನು ಅಂಗೀಕರಿಸಿದ ನಿನ್ನ ಸಹೋದರರ ಸಹ ಸೇವಕನಷ್ಟೆ. ನೀನು ದೇವರನ್ನು ಆರಾಧಿಸು,” ಎಂದನು. ಯೇಸು ಶ್ರುತಪಡಿಸಿದ ಸತ್ಯವೇ ಪ್ರವಾದಿಗಳ ಜೀವಾಳ.


ಮಗುವೊಂದು ಹುಟ್ಟಿತೆಮಗೆ ವರಪುತ್ರನನು ಕೊಟ್ಟರೆಮಗೆ. ಆತನ ಕೈಯಲ್ಲಿಹುದು ರಾಜ್ಯಾಡಳಿತ ‘ಅದ್ಭುತಶಾಲಿ’, ಮಂತ್ರಿಶ್ರೇಷ್ಠ’ ‘ಪರಾಕ್ರಮದೇವ’, ‘ಅನಂತ ಪಿತ’, ‘ಶಾಂತಿ ನೃಪ’ - ಇವು ಆತನ ನಾಮಾಂಕಿತ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು