Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 113:4 - ಕನ್ನಡ ಸತ್ಯವೇದವು C.L. Bible (BSI)

4 ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ I ಆತನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಕ್ಕಿಂತಲೂ ಉನ್ನತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನು; ಆತನ ಪ್ರಭಾವವು ಮೇಲಣ ಲೋಕಗಳಲ್ಲಿ ಮೆರೆಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ; ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯೆಹೋವ ದೇವರು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವರು; ಅವರ ಮಹಿಮೆಯು ಆಕಾಶಗಳ ಮೇಲೆ ಮೆರೆಯುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 113:4
10 ತಿಳಿವುಗಳ ಹೋಲಿಕೆ  

ಪ್ರಭು, ಓ ನಮ್ಮ ಪ್ರಭು, ಎನಿತು ಮಹಿಮಾನ್ವಿತ I ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ I ಬೆಳಗಿದೆ ನಿನ್ನ ವೈಭವ ಗಗನಾದ್ಯಂತ II


ಸಿಯೋನಿನಲಿ ಪ್ರಭು ಶ್ರೇಷ್ಠನು I ರಾಷ್ಟ್ರಗಳಲ್ಲೆಲ್ಲಾ ಉತ್ಕೃಷ್ಠನು II


ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ I ಮಹೋನ್ನತನು ನೀನು ದೇವರುಗಳಿಗೆಲ್ಲಾ II


ಸಕಲ ರಾಷ್ಟ್ರಗಳು ಆತನ ದೃಷ್ಟಿಗೆ ಏನೂ ಇಲ್ಲದಂತೆ ಅವುಗಳು ಆತನ ಎಣಿಕೆಗೆ ಶುದ್ಧ ಸೊನ್ನೆಯಂತೆ.


ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು I ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು I ಆತನ ಮಹತ್ತಾದ ಏಕೈಕ ನಾಮವನು II


ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ : “ಆಕಾಶವೇ ನನಗೆ ಸಿಂಹಾಸನವಾಗಿರಲು, ಭೂಮಿಯೇ ನನಗೆ ಪಾದಪೀಠವಾಗಿರಲು ನೀವು ನನಗೆ ಕಟ್ಟುವ ಮನೆ ಇನ್ನು ಎಂಥದ್ದು? ನನ್ನ ವಿಶ್ರಾಂತಿಗೆ ತಕ್ಕ ಸ್ಥಳ ಯಾವುದು?


ಆಸೀನನಾಗಿಹನು ಆತ ಭೂಮಂಡಲಕ್ಕಿಂತ ಮೇಲೆ ಭೂನಿವಾಸಿಗಳು ಕಾಣುತಿಹರು ಆತನಿಗೆ ಮಿಡತೆಗಳಂತೆ ಹರಡಿಹನು ಆಕಾಶಮಂಡಲವನು ನವಿರು ಬಟ್ಟೆಯಂತೆ ಮೇಲೆತ್ತಿಕಟ್ಟಿಹನು ಅದನ್ನು ನಿವಾಸದ ಗುಡಾರದಂತೆ.


ಆತನ ಗಣನೆಗೆ ರಾಷ್ಟ್ರಗಳು ಕಪಿಲೆಯಿಂದ ಉದುರುವ ತುಂತುರುಗಳು ತ್ರಾಸಿನ ತಟ್ಟೆಯ ಮೇಲಿರುವ ಧೂಳಿನ ಕಣಗಳು ದ್ವೀಪಗಳೋ ಆತನ ತೂಕಕ್ಕೆ ಅಣುರೇಣುಗಳು.


“ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವರೋ? ಆಕಾಶವೂ, ಉನ್ನತೋನ್ನತ ಆದ ಆಕಾಶವೂ, ನಿಮ್ಮ ವಾಸಕ್ಕೆ ಸಾಲದು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ತಾನೆ ಸಾಕಾದೀತು?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು