Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 107:40 - ಕನ್ನಡ ಸತ್ಯವೇದವು C.L. Bible (BSI)

40 ತೃಣೀಕರಿಸಿದನು ಪ್ರಭು ಅವರಧಿಪತಿಗಳನು I ದಾರಿಯಿಲ್ಲದರಣ್ಯದೊಳು ಅಲೆದಾಡಿಸಿದನು II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಪ್ರಭುಗಳಿಗೆ ಅಪಮಾನವನ್ನು ಉಂಟುಮಾಡಿ, ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಪ್ರಭುಗಳಿಗೆ ಅಪಮಾನವನ್ನುಂಟುಮಾಡಿ ಅವರನ್ನು ದಾರಿಯಿಲ್ಲದ ಅರಣ್ಯದಲ್ಲಿ ಅಲೆದಾಡಿಸುವಾತನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ಆತನು ಅವರ ನಾಯಕರುಗಳಿಗೆ ಅವಮಾನ ಮಾಡಿದನು; ದಾರಿಗಳಿಲ್ಲದ ಅರಣ್ಯದಲ್ಲಿ ಅಲೆದಾಡುವಂತೆ ಅವರನ್ನು ತೊರೆದುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ದೇವರು ಅಧಿಪತಿಗಳಿಗೆ ಶಿಸ್ತನ್ನು ನೀಡಿ, ಅವರನ್ನು ದಾರಿಯಿಲ್ಲದ ಕಾಡಿನಲ್ಲಿ ಅಲೆಯುವಂತೆ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 107:40
23 ತಿಳಿವುಗಳ ಹೋಲಿಕೆ  

ಭೂಪತಿಗಳನ್ನು ಬುದ್ಧಿಹೀನರನ್ನಾಗಿಸುತ್ತಾನೆ ದಾರಿಕಾಣದ ಅರಣ್ಯದಲಿ ಅಲೆದಾಡಿಸುತ್ತಾನೆ.


ಅಧಿಪತಿಗಳಿಗೆ ಉಂಟುಮಾಡುತ್ತಾನೆ ಅವಮಾನವನ್ನು ಬಿಚ್ಚಿಬಿಡುತ್ತಾನೆ ಬಲಾಢ್ಯರ ನಡುಕಟ್ಟನ್ನು.


ಆ ನುಡಿ ಕೂಡಲೆ ನೆರವೇರಿತು. ನೆಬೂಕದ್ನೆಚ್ಚರನು ಸಮಾಜದಿಂದ ಬಹಿಷ್ಕೃತನಾದ. ದನಗಳಂತೆ ಹುಲ್ಲು ಮೇಯುತ್ತಾ ಆಕಾಶದ ಇಬ್ಬನಿಯಿಂದ ನೆನೆಯುತ್ತಾ ಇದ್ದ. ಅವನ ಕೂದಲು ಹದ್ದುಗಳ ರೆಕ್ಕೆಗಳಂತೆಯೂ, ಅವನ ಉಗುರು ಹಕ್ಕಿಗಳ ಉಗುರಿನಂತೆಯೂ ಬೆಳೆದವು.


ರಾಜರುಗಳ ಮಾಂಸವನ್ನು, ಸೇನಾಧಿಪತಿಗಳ ಮಾಂಸವನ್ನು ಮತ್ತು ಪರಾಕ್ರಮಶಾಲಿಗಳ ಮಾಂಸವನ್ನು ತಿನ್ನ ಬನ್ನಿ; ಕುದುರೆಗಳ ಮಾಂಸವನ್ನೂ ರಾವುತರ ಮಾಂಸವನ್ನೂ ಉಣ ಬನ್ನಿ; ಯಜಮಾನರ, ಗುಲಾಮರ, ಚಿಕ್ಕವರ, ದೊಡ್ಡವರ ಈ ಎಲ್ಲಾ ನರಮಾನವರ ಮಾಂಸವನ್ನು ರುಚಿಸ ಬನ್ನಿ,” ಎಂದನು.


ಆದರೆ ಹೆರೋದನು ದೇವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಲಿಲ್ಲ. ಆದುದರಿಂದ ದೇವದೂತನು ಆ ಕ್ಷಣವೇ ಅವನನ್ನು ಸಂಹರಿಸಿದನು. ಅವನು ಹುಳಹುಪ್ಪಟೆಗಳಿಗೆ ಆಹಾರವಾದನು.


ಅಲೆದರು ಮರುಳುಗಾಡಿನಲಿ ದಾರಿಕಾಣದೆ I ಬಳಲಿದರು ಜನರಿರುವ ಊರು ಸಿಗದೆ II


ಸದೆಬಡಿದನಾತ ತನ್ನ ಶತ್ರುಗಳನು I ನಿತ್ಯನಿಂದೆಗೆ ಈಡುಮಾಡಿದನವರನು II


ಅವನಿಗೆ, “ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು.”


ಆ ಜನರು, “ನಾವು ಪ್ರಾಯಶ್ಚಿತಾರ್ಥವಾಗಿ ಏನನ್ನು ಕಳುಹಿಸಬೇಕು?” ಎಂದು ವಿಚಾರಿಸಿದರು. ಅದಕ್ಕೆ ಅವರು, “ನಿಮಗೂ ನಿಮ್ಮ ರಾಜರುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ನಿಮ್ಮ ರಾಜರುಗಳ ಸಂಖ್ಯೆಗೆ ಸರಿಯಾಗಿ ಐದು ಬಂಗಾರದ ಗಡ್ಡೆಗಳನ್ನು ಹಾಗು ಐದು ಬಂಗಾರದ ಇಲಿಗಳನ್ನು ಮಾಡಿಸಬೇಕು.


ಮಂಜೂಷವು ಅಲ್ಲಿ ಹೋದ ಮೇಲೆ ಸರ್ವೇಶ್ವರನ ಹಸ್ತ ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲ ಎದ್ದಿತು. ಸರ್ವೇಶ್ವರ ಆ ಊರಿನ ಚಿಕ್ಕವರಲ್ಲೂ ದೊಡ್ಡವರಲ್ಲೂ ಗಡ್ಡೆಗಳನ್ನು ಬರಮಾಡಿದರು.


ಆದರೆ ಹೆಬೆರನ ಹೆಂಡತಿ ಯಾಯೇಲಳು ಕೈಯಲ್ಲಿ ಗುಡಾರದ ಗೂಟವನ್ನೂ ಒಂದು ಕೊಡತಿಯನ್ನೂ ತೆಗೆದುಕೊಂಡು ಅವನು ಆಯಾಸದಿಂದ ಗಾಢನಿದ್ರೆಯಲ್ಲಿದ್ದಾಗ ಮೆಲ್ಲಗೆ ಹತ್ತಿರ ಹೋಗಿ ಅವನ ಕಣತಲೆಯಲ್ಲಿ ಆ ಗೂಟವನ್ನು ಹೊಡೆದು ನೆಲಕ್ಕೆ ನಾಟಿಸಿದಳು; ಅವನು ಸತ್ತನು.


ಬರಿದಾದ ಭೀಕರ ಮರುಭೂಮಿಯಲಿ ಅವರನು ಕಂಡು ಕಣ್ಣಗುಡ್ಡೆಯಂತೆ ಕಾಪಾಡಿದ ಪ್ರೀತಿಯಿಂದವರನು ಅಪ್ಪಿಕೊಂಡು.


ಸರ್ವೇಶ್ವರ ಹಾಗೆಯೇ ಮಾಡಿದರು. ನೊಣಗಳು ಫರೋಹನ ಅರಮನೆಯಲ್ಲೂ ಅವನ ಪರಿವಾರದವರ ಮನೆಗಳಲ್ಲೂ ಸಮಸ್ತ ಈಜಿಪ್ಟ್ ದೇಶದಲ್ಲೂ ಬಹಳವಾಗಿ ತುಂಬಿಕೊಂಡವು. ಅವುಗಳಿಂದ ದೇಶ ಹಾಳಾಯಿತು.


ಅವರು ಹಾಗೆಯೆ ಮಾಡಿದರು. ಆರೋನನು ಕೋಲನ್ನು ಹಿಡಿದು ಕೈಚಾಚಿ ಧೂಳನ್ನು ಹೊಡೆದನು. ಹೇನುಗಳು ನರಮಾನವರ ಮೇಲೂ ಪಶುಪ್ರಾಣಿಗಳ ಮೇಲೂ ಮುತ್ತಿಕೊಂಡವು. ಈಜಿಪ್ಟ್ ದೇಶದಲ್ಲೆಲ್ಲಾ ನೆಲದ ಧೂಳು ಹೇನುಗಳಾದವು.


ನೈಲ್ ನದಿಯಲ್ಲಿ ಕಪ್ಪೆಗಳು ತುಂಬಿಹೋಗುವುವು. ಅವು ಹೊರಟುಬಂದು ನಿನ್ನ ಅರಮನೆಯಲ್ಲೂ ಮಲಗುವ ಕೋಣೆಯಲ್ಲೂ ನಿನ್ನ ಹಾಸಿಗೆಯಲ್ಲೂ ನಿನ್ನ ಪರಿವಾರದವರ ಹಾಗು ಪ್ರಜೆಗಳ ಮನೆಗಳಲ್ಲೂ ಒಲೆಗಳಲ್ಲೂ ಹಿಟ್ಟುನಾದುವ ಹರಿವಾಣಗಳಲ್ಲೂ ಕಾಣಿಸಿಕೊಳ್ಳುವುವು.


ನಿನ್ನ ಮೇಲೆ, ನಿನ್ನ ಪ್ರಜೆಗಳ ಮೇಲೆ ಹಾಗೂ ಪರಿವಾರದವರ ಮೇಲೆ ಆ ಕಪ್ಪೆಗಳು ಏರಿ ಬರುವುವು'.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು