Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 104:17 - ಕನ್ನಡ ಸತ್ಯವೇದವು C.L. Bible (BSI)

17 ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ I ವಾಸಮಾಡುವುವು ಕೊಕ್ಕರೆಗಳು ತುರಾಯಿಮರಗಳಲಿ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ; ತುರಾಯಿ ಮರಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ; ತುರಾಯಿಮರಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಪಕ್ಷಿಗಳು ಗೂಡುಗಳನ್ನು ಆ ಮರಗಳಲ್ಲಿ ಕಟ್ಟಿಕೊಳ್ಳುತ್ತವೆ. ದೊಡ್ಡ ಕೊಕ್ಕರೆಗಳು ತುರಾಯಿ ಮರಗಳಲ್ಲಿ ಜೀವಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ; ತುರಾಯಿ ಗಿಡಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 104:17
8 ತಿಳಿವುಗಳ ಹೋಲಿಕೆ  

ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು I ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು II


ಎಲ್ಲ ವಿಧವಾದ ಬಕ, ಹೆಡೆ ಹಕ್ಕಿ, ಕಣ್ಣಕಪಡಿ, ಇವುಗಳ ಮಾಂಸವನ್ನು ತಿನ್ನಬಾರದು; ಇವು ಹೇಯವಾಗಿರಬೇಕು.


ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡು ಕಟ್ಟಿ ವಾಸಿಸುತ್ತವೆ.”


ಅದಕ್ಕೆ ಸರ್ವೇಶ್ವರ: “ನೀನು ಹದ್ದಿನ ಮಟ್ಟದಲ್ಲಿ ಹಾರಾಡುತ್ತಿದ್ದರೂ ನಕ್ಷತ್ರಮಂಡಲದಲ್ಲಿ ನೆಲೆಗೊಂಡಿದ್ದರೂ ಅಲ್ಲಿಂದಲೂ ನಿನ್ನನ್ನು ಇಳಿಸಿಬಿಡುತ್ತೇನೆ,” ಎನ್ನುತ್ತಾರೆ.


ಲೋಕದ ಜನರೆಲ್ಲರಿಗೆ ಕಾಣಿಸುತ್ತಿತ್ತು. ಅಂದವಾದ ಎಲೆಗಳನ್ನೂ ಹುಲುಸಾದ ಹಣ್ಣುಗಳನ್ನೂ ಬಿಡುತ್ತಿತ್ತು. ಎಲ್ಲಕ್ಕೂ ಆಹಾರ ಒದಗಿಸುತ್ತಿತ್ತು. ತನ್ನ ನೆರಳನ್ನು ವನ್ಯಮೃಗಗಳಿಗೆ ಆಶ್ರಯವಾಗಿಯೂ ತನ್ನ ಕೊಂಬೆಗಳನ್ನು ಆಕಾಶ ಪಕ್ಷಿಗಳಿಗೆ ನೆಲೆಯಾಗಿಯೂ ಮಾಡಿತ್ತು. ಕನಸಿನಲ್ಲಿ ನಿಮಗೆ ತೋರಿದ ಆ ಮರವು ನೀವೇ.


ಆ ರೆಂಬೆಗಳಲ್ಲಿ ಗೂಡುಮಾಡಿದ್ದವು ಆಕಾಶದ ಪಕ್ಷಿಗಳೆಲ್ಲವು ಅದರಡಿಯಲಿ ಮರಿಗಳನೀಯುತ್ತಿದ್ದವು ಭೂಜಂತುಗಳೆಲ್ಲವು ಅದರ ನೆರಳನಾಶ್ರಯಿಸುತ್ತಿದ್ದವು ಮಹಾಜನಾಂಗಗಳೆಲ್ಲವು.


‘ಲೆಬನೋನ್’ ಅರಮನೆಯಲ್ಲಿ ವಾಸಿಸುವವಳೇ, ದೇವದಾರುಗಳ ನಡುವೆ ಗೂಡುಮಾಡಿಕೊಂಡಿರುವವಳೇ, ಪ್ರಸವವೇದನೆಯಂಥ ಸಂಕಟಗಳು ಸಂಭವಿಸಿದಾಗ ನಿನಗೊದಗುವ ಪರಿಸ್ಥಿತಿ ಎಷ್ಟೋ ದುಃಖಕರ !


ಆಕಾಶದಲ್ಲಿ ಹಾರುವ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿದುಕೊಂಡಿದೆ. ಬೆಳವಕ್ಕಿ, ಬಾನಕ್ಕಿ, ಕೊಕ್ಕರೆ ಇವು ತಮ್ಮ ಗಮನಾಗಮನದ ಸಮಯಗಳನ್ನು ತಿಳಿದಿರುತ್ತವೆ. ಆದರೆ ನನ್ನ ಜನರು ಸರ್ವೇಶ್ವರನಾದ ನನ್ನ ನಿಯಮಗಳನ್ನೆ ತಿಳಿಯರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು