Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 102:10 - ಕನ್ನಡ ಸತ್ಯವೇದವು C.L. Bible (BSI)

10 ನಿನ್ನ ಕೋಪತಾಪಗಳೆ ಕಾರಣ ಇದಕ್ಕೆಲ್ಲಾ I ನನ್ನನು ಮೇಲಕ್ಕೆತ್ತಿ ಬಿಸಾಡಿಬಿಟ್ಟಿರುವೆಯಲ್ಲಾ II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇದಕ್ಕೆಲ್ಲಾ ನಿನ್ನ ಕೋಪ, ರೌದ್ರಗಳೇ ಕಾರಣ, ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದಿಯಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇದಕ್ಕೆಲ್ಲಾ ನಿನ್ನ ಕೋಪರೌದ್ರಗಳೇ ಕಾರಣ. ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದೀಯಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ನೀನು ನನ್ನ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ. ನೀನು ನನ್ನನ್ನು ಮೇಲೆತ್ತಿ ಎಸೆದುಬಿಟ್ಟೆಯಲ್ಲಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಇದಕ್ಕೆ ಕಾರಣ ನೀವು ಗಮನ ಕೊಡದಿರುವುದೇ. ನೀವು ನನಗೆ ಲಕ್ಷ್ಯಕೊಡುತ್ತಾಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 102:10
16 ತಿಳಿವುಗಳ ಹೋಲಿಕೆ  

ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ ಕೋಪದ ನಿಮಿತ್ತ I ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ ಪಾಪದ ಪ್ರಯುಕ್ತ II


ಶತ್ರುಗಳು ಅನೇಕರಿದ್ದರೂ ಮಿತ್ರನೊಬ್ಬನು ಇಲ್ಲದಿರಲಿಲ್ಲ. ಪ್ರಾಣ ಹಿಂಸೆಗಳಿಗೀಡಾಗಿದ್ದರೂ ಪ್ರಾಣನಷ್ಟವನ್ನು ಅನುಭವಿಸಲಿಲ್ಲ.


ಆಧಾರವಾಗಿಹನು ಪ್ರಭು ದೀನರಿಗೆ I ತುಳಿದುಬಿಡುವನು ದುರ್ಜನರನು ನೆಲಕೆ II


ಧರ್ಮಶಾಸ್ತ್ರದ ನೇಮನಿಯಮಗಳು ಆ ಶಾಸ್ತ್ರಕ್ಕೆ ಅಧೀನರಾದವರಿಗೆ ಮಾತ್ರ ಅನ್ವಯಿಸುತ್ತವೆಂದು ನಾವು ಬಲ್ಲೆವು. ಆದ್ದರಿಂದ ಯಾರೂ ಯಾವ ನೆಪವನ್ನು ಹೇಳಲೂ ಬಾಯಿ ತೆರೆಯುವಂತಿಲ್ಲ. ಜಗತ್ತೆಲ್ಲವೂ ದೇವರ ನ್ಯಾಯತೀರ್ಪಿಗೆ ಗುರಿಯಾಗಿದೆ.


ನಮ್ಮ ಕಿರೀಟ ಬಿದ್ದುಹೋಗಿದೆ ತಲೆಮೇಲಿಂದ ಈ ಕೇಡೆಲ್ಲಾ ಬಂದೊದಗಿದೆ ನಮ್ಮ ಪಾಪದ ನಿಮಿತ್ತ.


“ಸರ್ವೇಶ್ವರನು ನ್ಯಾಯಸ್ವರೂಪಿ, ನಾನಾದರೊ ಆತನ ಆಜ್ಞೆ ಮೀರಿದ ದ್ರೋಹಿ. ಜನಾಂಗಗಳೇ, ನೀವೆಲ್ಲರು ಕಿವಿಗೊಡಿ, ನನ್ನ ಸಂಕಟ ನೋಡಿ ! ನನ್ನ ಯುವಕ ಯುವತಿಯರು, ಇಗೋ, ಸೆರೆಹೋಗಿರುವರು ನೋಡಿ.


ಪಾಪದ ಪ್ರಯುಕ್ತ ಮಾನವನು ಶಿಕ್ಷಿಸುವಾಗ I ನುಸಿಹತ್ತಿದಂತೆ ನಾಶಪಡಿಸುವೆ ಅವನಾಸ್ಥೆಯನಾಗ I ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ II


ನಾನಪರಾಧಿಯೆಂದು ನಿವೇದಿಸುವೆ I ಪಾಪಕ್ಕಾಗಿ ಪಶ್ಚಾತ್ತಾಪ ಪಡುವೆ II


ನೀವೇ ಹೋಗಿ ಕಾರ್ಯವನ್ನು ನಿರ್ವಹಿಸಿರಿ. ಧೈರ್ಯದಿಂದ ಯುದ್ಧಮಾಡಿ. ಹಾಗೆ ಮಾಡದಿದ್ದರೆ ದೇವರು ಶತ್ರುಗಳಿಂದ ನಿಮ್ಮನ್ನು ಅಪಜಯಗೊಳಿಸುವರು. ಜಯಾಪಜಯಗಳನ್ನು ನೀಡಲು ಅವರು ಶಕ್ತರು ಆಗಿರುತ್ತಾರಲ್ಲವೆ?” ಎಂದನು.


ಜನಸಮೂಹದೊಡನೆ ನಾ ಜಯಜಯಕಾರ ಮಾಡುತ I ಸ್ತುತಿಗೀತೆಗಳ ಹಾಡುತ, ತೀರ್ಥಯಾತ್ರೆ ಗೈಯುತ I ದೇಗುಲಕೆ ತೆರಳಿದಾ ಸವಿನೆನಪು ಮನಕರಗಿಪುದು ನಿರುತ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು