Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಕೀರ್ತನೆಗಳು 10:6 - ಕನ್ನಡ ಸತ್ಯವೇದವು C.L. Bible (BSI)

6 ನೆನೆವನು ಮನದೊಳು ದುರುಳನಿಂತು: I “ಯಾರಿಗೂ ನನ್ನ ಕದಲಿಸಲಾಗದು I ಬಾರದು ನನಗೆಂದಿಗು ಆಪತ್ತು” II

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವನು, “ನಾನು ಕದಲುವುದೇ ಇಲ್ಲ; ನನಗೆ ವಿಪತ್ತು ಎಂದೆಂದಿಗೂ ಸಂಭವಿಸುವುದಿಲ್ಲ” ಅಂದುಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ತಾನು ಕದಲುವದೇ ಇಲ್ಲ; ತನಗೆ ವಿಪತ್ತು ಎಂದೆಂದಿಗೂ ಸಂಭವಿಸುವದಿಲ್ಲ ಅಂದುಕೊಂಡಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅವರು, “ನಮ್ಮನ್ನು ಯಾವುದೂ ಕದಲಿಸದು; ನಮಗೆ ಕೇಡಾಗದಿರುವುದರಿಂದ ಸಂತೋಷವಾಗಿರೋಣ” ಎಂದುಕೊಂಡಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವನು ತನ್ನ ಹೃದಯದಲ್ಲಿ ಹೀಗೆ ಹೇಳುವನು, “ಯಾವುದೂ ಎಂದೂ ನನ್ನನ್ನು ಕದಲಿಸುವುದಿಲ್ಲ.” ಅವನು ಹೀಗೆ ಶಪಥ ಮಾಡುವನು, “ಯಾರೂ ಎಂದಿಗೂ ನನಗೆ ಕೇಡುಮಾಡಲಾರರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ




ಕೀರ್ತನೆಗಳು 10:6
11 ತಿಳಿವುಗಳ ಹೋಲಿಕೆ  

ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,


ಅಲ್ಲದೆ, ‘ಬನ್ನಿ, ಮಧುಪಾನವನ್ನು ತರಿಸುತ್ತೇನೆ. ಅಮಲೇರಿಸುವ ಮದ್ಯವನ್ನು ಬೇಕಾದಷ್ಟು ಕುಡಿಯೋಣ; ಆಗ ಇನ್ನೂ ಸಂಭ್ರಮವಾಗಿರುವುದು!’ ಎಂದು ಹರಟಿಕೊಳ್ಳುವರು.”


ಕೆಟ್ಟದ್ದನ್ನು ಮಾಡಲು ನರಮಾನವರು ತುಂಬ ಆಸಕ್ತಿ ಉಳ್ಳವರಾಗಿದ್ದಾರೆ. ಕೇಡಿಗೆ ತಕ್ಕ ದಂಡನೆಯನ್ನು ಕೂಡಲೆ ವಿಧಿಸದಿರುವುದೇ ಇದಕ್ಕೆ ಕಾರಣ.


ಅಹಂಭಾವದಿಂದಾಕೆ ಮೆರೆದುದಕೆ ಪೀಡಿಸಿ ಕಾಡಿಸಿರಿ ಸರಿಯಾದ ಅಳತೆಯಲ್ಲೇ. ಹೃದಯದಲಿ ಹೇಳುತಿಹಳು ಅವಳಿಂತು : ರಾಣಿಯಂತೆ ನಾ ಕುಳಿತಿಹೆನು ವಿಧವೆಯಲ್ಲ ನಾನೇನು ಕಾಣೆನೆಂದಿಗೂ ದುಃಖವನು.


ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.


ಆತನ ವೈರಿಗಳು ಹೆಣೆದುಕೊಂಡಿದ್ದರೂ ಮುಳ್ಳುಗಳಂತೆ ಕುಡಿದು ಮತ್ತರಾಗಿ ಮುಳುಗಿದ್ದರೂ ಮದ್ಯದಲ್ಲೆ ತುತ್ತಾಗುವರು ಬೆಂಕಿಗೆ ತೀರ ಒಣಗಿದ ಕೂಳೆಯಂತೆ.


ನಾನಾದರೋ ಉಲ್ಲಾಸದಿಂದಿರುವಾಗಲೂ I ನನ್ನನು ಅಲ್ಲಾಡಿಸಲಾಗದೆಂದೆ ಯಾರಿಂದಲೂ II


ಕೊಡುವನು ಕಡವನು, ಬಯಸನು ಬಡ್ಡಿಯನು I ಎಡವರ ಕೇಡಿಗೆ ಪಡೆಯನು ಲಂಚವನು I ಕದಲನೆಂದಿಗೂ ಈಪರಿ ನಡೆವವನು II


“ದೇವನಿಲ್ಲ” ಎನ್ನುವವರು ಮನದಲಿ ದುರ್ಮತಿಗಳು I ಹೇಯ ಕೃತ್ಯವೆಸಗುವರು ಆ ಭ್ರಷ್ಟಚಾರಿಗಳು I ಒಳಿತನ್ನು ಮಾಡುವರಾರೂ ಇಲ್ಲ ಅವರೊಳು II


ನಾನು ಆಶ್ರಯಿಸಿಕೊಂಡಿರಲು ಪ್ರಭುವನು I ನೀವು ಹೇಳುವುದೆಂತು ನನಗೀ ಮಾತನು: II


ನನ್ನ ಜನರ ಹಿಂಸೆಬಾಧೆಗಳನ್ನು ಗಮನಿಸದೆ ಬರಲಿರುವ ಪರಿಣಾಮವನ್ನು ನೆನೆಸಿಕೊಳ್ಳದೆ ನೀನೇ ಶಾಶ್ವತ ರಾಣಿಯೆಂದು ಮೆರೆದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು