Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 9:21 - ಕನ್ನಡ ಸತ್ಯವೇದವು C.L. Bible (BSI)

21 ‘ಪ್ರತಿವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆ ಮತ್ತು ಹದಿನೈದನೆಯ ದಿನಗಳನ್ನು ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮ ಎಂದು ಭಾವಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ಪ್ರತಿವರ್ಷವೂ ಫಾಲ್ಗುಣಮಾಸದ ಹದಿನಾಲ್ಕನೆಯ ಮತ್ತು ಹದಿನೈದನೆಯ ದಿನಗಳನ್ನು ಉತ್ಸವದಿನಗಳನ್ನಾಗಿ ಆಚರಿಸುವುದು ಶಾಶ್ವತನಿಯಮ ಎಂದೆಣಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ಪ್ರತಿವರುಷವೂ ಫಾಲ್ಗುನಮಾಸದ ಹದಿನಾಲ್ಕನೆಯ ಮತ್ತು ಹದಿನೈದನೆಯ ದಿನಗಳನ್ನು ಉತ್ಸವದಿನಗಳನ್ನಾಗಿ ಆಚರಿಸುವದು ಶಾಶ್ವತನಿಯಮ ಎಂದೆಣಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಅದರಲ್ಲಿ ಅವನು ಯೆಹೂದ್ಯರೆಲ್ಲರೂ ಪ್ರತೀ ವರ್ಷ ಅದಾರ್ ತಿಂಗಳಿನ ಹದಿನಾಲ್ಕನೇ ಮತ್ತು ಹದಿನೈದನೇ ದಿವಸಗಳನ್ನು ಪೂರಿಮ್ ದಿವಸಗಳನ್ನಾಗಿ ಆಚರಿಸಬೇಕು ಎಂಬದಾಗಿ ಆದೇಶ ನೀಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಯೆಹೂದ್ಯರು ಆದಾರ್ ಮಾಸದ ಹದಿನಾಲ್ಕನೆ ಮತ್ತು ಹದಿನೈದನೆ ದಿನಗಳನ್ನೂ ಪ್ರತಿವರ್ಷ ಹಬ್ಬದ ದಿನಗಳಾಗಿ ಆಚರಿಸುವುದು ಶಾಶ್ವತ ನಿಯಮವೆಂದು ಭಾವಿಸುವಂತೆ ಆ ಪತ್ರದಲ್ಲಿ ಬರೆಯಲಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 9:21
8 ತಿಳಿವುಗಳ ಹೋಲಿಕೆ  

ಇದು ನಡೆದದ್ದು ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ. ಅವರು ಹದಿನಾಲ್ಕನೆಯ ದಿನದಂದು ವಿಶ್ರಮಿಸಿದರು. ಅಂದು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.


ಶೂಷನಿನ ಯೆಹೂದ್ಯರು ಹದಿಮೂರನೇ ಹಾಗೂ ಹದಿನಾಲ್ಕನೇ ದಿನ ಒಟ್ಟಾಗಿ ಸೇರಿಬಂದುದರಿಂದ, ಅವರು ಹದಿನೈದನೆಯ ದಿನದಲ್ಲಿ ವಿಶ್ರಮಿಸಿಕೊಂಡರು. ಅಂದು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.


ಮೊರ್ದೆಕೈಯು ಅಹಷ್ವೇರೋಷನ ಸಂಸ್ಥಾನಗಳಲ್ಲಿ ವಾಸಿಸುತ್ತಿದ್ದ ಎಲ್ಲಾ ಯೆಹೂದ್ಯರಿಗೆ, ಸಮೀಪದಲ್ಲೂ ದೂರದಲ್ಲೂ ಇದ್ದವರು ಎಲ್ಲರಿಗೂ ಪತ್ರಗಳ ಮುಖಾಂತರ ಈ ಕೆಳಕಂಡ ಸಂಗತಿಗಳನ್ನು ತಿಳಿಯಪಡಿಸಿದನು:


ಆ ದಿಗಳಲ್ಲಿ ಯೆಹೂದ್ಯರಿಗೆ ಶತ್ರುಗಳ ಕಾಟ ತಪ್ಪಿ ವಿಶ್ರಾಂತಿ ದೊರೆಯಿತು. ಆ ತಿಂಗಳಿನಲ್ಲಿ ಸಂಕಟವು ಪರಿಹಾರವಾಗಿ ಸಂತೋಷ ಪ್ರಾಪ್ತಿಯಾಯಿತು; ದುಃಖವು ಕಳೆದು ಸುಖಕಾಲ ಬಂದಿತು. ಆದ್ದರಿಂದ ಆ ದಿನಗಳಲ್ಲಿ ಹಬ್ಬದ ಭೋಜನಮಾಡಿ ಪರಸ್ಪರ ತಿಂಡಿತೀರ್ಥಗಳನ್ನು ವಿನಿಮಯಮಾಡಿಕೊಳ್ಳಬೇಕು. ಹಾಗೂ ಬಡಬಗ್ಗರಿಗೆ ದಾನಧರ್ಮ ಮಾಡಬೇಕು.


ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ, ನಿಯಮಿತ ಕಾಲದಲ್ಲಿ ಆಚರಿಸುವುದು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಮೀರಕೂಡದ ಪದ್ಧತಿನಿಯಮಗಳಾಬೇಕು;


ಇದಲ್ಲದೆ ಅಬೀಹೈಲನ ಮಗಳಾದ ಎಸ್ತೇರ್ ರಾಣಿಯು ಪೂರಿಮ್ ಹಬ್ಬದ ಆಚರಣೆಗೆ ಸಂಬಂಧಪಟ್ಟ ಆ ಎರಡನೇ ಶಾಸನವನ್ನು ದೃಢಪಡಿಸುವುದಕ್ಕಾಗಿ ಮೊರ್ದೆಕೈಯ ಸಹಾಯವನ್ನು ಪಡೆದು ಅಧಿಕೃತ ಪತ್ರಗಳನ್ನು ಬರೆದಳು.


ಅರಸ ದಾರ್ಯಾವೆಷನ ಆಳ್ವಿಕೆಯ ಆರನೆಯ ವರ್ಷದ ಫಾಲ್ಗುಣ ಮಾಸದ ಮೂರನೆಯ ದಿನದಲ್ಲಿ ಆಲಯವನ್ನು ಪೂರೈಸಿದರು.


ಅರಸ ಅಹಷ್ವೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆಯ ತಿಂಗಳು ಆದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭಮಾಸವೂ ಶುಭದಿನವೂ ಯಾವುದು ಎಂದು ತಿಳಿದುಕೊಳ್ಳಲು ‘ಪೂರ’ನ್ನು ಅಂದರೆ ಚೀಟನ್ನು ಹಾಕಲು ಚೀಟು ಹನ್ನೆರಡನೆ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು