Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 8:17 - ಕನ್ನಡ ಸತ್ಯವೇದವು C.L. Bible (BSI)

17 ರಾಜನಿರ್ಣಯ ಶಾಸನಗಳು ಪ್ರಕಟವಾದ ಸಂಸ್ಥಾನಗಳಲ್ಲೂ ನಗರಗಳಲ್ಲೂ ವಾಸಿಸುತ್ತಿದ್ದ ಯೆಹೂದ್ಯರೆಲ್ಲರಿಗೆ ಶುಭದಿನ ಉದಯವಾಯಿತು. ಅವರು ಅದನ್ನು ಸಂತೋಷದ ಹಾಗೂ ಸಂಭ್ರಮದ ದಿನವನ್ನಾಗಿ ಆಚರಿಸಿದರು. ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ರಾಜನಿರ್ಣಯ ಶಾಸನಗಳು ಪ್ರಕಟಿಸಲ್ಪಟ್ಟ ಪ್ರತಿಯೊಂದು ಸಂಸ್ಥಾನದಲ್ಲಿಯೂ ಪಟ್ಟಣದಲ್ಲಿಯೂ ಇದ್ದ ಯೆಹೂದ್ಯರಿಗೆ ಶುಭದಿನ ಉಂಟಾಯಿತು; ಅವರು ಸಂತೋಷದಿಂದಲೂ, ಉಲ್ಲಾಸದಿಂದಲೂ ಭಕ್ಷ್ಯಭೋಜನಮಾಡಿದರು. ದೇಶದ ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ರಾಜನಿರ್ಣಯ ಶಾಸನಗಳು ಪ್ರಕಟಿಸಲ್ಪಟ್ಟ ಪ್ರತಿಯೊಂದು ಸಂಸ್ಥಾನದಲ್ಲಿಯೂ ಪಟ್ಟಣದಲ್ಲಿಯೂ ಇದ್ದ ಯೆಹೂದ್ಯರಿಗೆ ಶುಭದಿನವುಂಟಾಯಿತು; ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ ಭಕ್ಷ್ಯಭೋಜನಮಾಡಿದರು. ದೇಶದ ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ರಾಜನ ಸಾಮ್ರಾಜ್ಯದ ಸಂಸ್ಥಾನಗಳಲ್ಲಿ ಎಲ್ಲೆಲ್ಲಿ ರಾಜಶಾಸನವು ತಲಪಿತೋ ಅಲ್ಲಲ್ಲಿ ಯೆಹೂದ್ಯರೆಲ್ಲರೂ ಆನಂದದಿಂದ ನಲಿದಾಡಿದರು. ಅದು ಅವರಿಗೆ ಅತ್ಯಂತ ಸಂತಸದ ದಿವಸವಾಗಿತ್ತು. ತಮ್ಮತಮ್ಮ ಮನೆಗಳಲ್ಲಿ ಔತಣ ಸಿದ್ಧಪಡಿಸಿದರು. ಸಾಮಾನ್ಯ ಜನರಲ್ಲಿ ಎಷ್ಟೋ ಮಂದಿ ಯೆಹೂದ್ಯ ಮತಾವಲಂಭಿಗಳಾದರು. ಯಾಕೆಂದರೆ ಅವರು ಯೆಹೂದ್ಯರಿಗೆ ತುಂಬಾ ಹೆದರಿ ಆ ರೀತಿಯಾಗಿ ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಅರಸನ ಆಜ್ಞೆಯು ಪ್ರಕಟವಾದ ಪ್ರತಿ ಪ್ರಾಂತದಲ್ಲಿಯೂ ಪ್ರತಿ ಪಟ್ಟಣದಲ್ಲಿಯೂ ಯೆಹೂದ್ಯರಿಗೆ ಸಂತೋಷವೂ ಆನಂದವೂ ಸಂಭ್ರಮವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಇತರ ದೇಶಗಳ ಅನೇಕ ಜನರು ಯೆಹೂದ್ಯರಾದರು. ಯೆಹೂದ್ಯರ ಭಯವು ಅವರ ಮೇಲೆ ಇತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 8:17
17 ತಿಳಿವುಗಳ ಹೋಲಿಕೆ  

ಈ ಕಾರಣದಿಂದಾಗಿ ಬಯಲುಪ್ರದೇಶದ ಗ್ರಾಮನಿವಾಸಿ ಯೆಹೂದ್ಯರು ಹದಿನಾಲ್ಕನೇ ದಿನವನ್ನು ಶುಭದಿನವೆಂತಲೂ ನಗರವಾಸಿ ಯೆಹೂದ್ಯರು ಹದಿನೈದನೆಯ ದಿನವನ್ನು ಶುಭದಿನವೆಂತಲೂ ಆಚರಿಸಿ, ಉತ್ಸವ ಭೋಜನಮಾಡಿ, ಒಬ್ಬರಿಗೊಬ್ಬರು ತಿಂಡಿತೀರ್ಥಗಳನ್ನು ವಿನಿಮಯಿಸಿಕೊಳ್ಳುತ್ತಾರೆ.


ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ I ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ I ನಾನರಿಯದ ಜನರನೂ ನನಗಧೀನರನ್ನಾಗಿಸಿದೆ II


ನಿನ್ನ ಆಳುಗ಼ಳನ್ನೇ ಕೇಳು, ಅವರೇ ಹೇಳುವರು. ಹೀಗಿರುವುದರಿಂದ ಶುಭಕಾಲದಲ್ಲಿ ನಿನ್ನ ಬಳಿಗೆ ಬಂದಿರುವ ನನ್ನ ಸೇವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಲಿ. ಕೃಪೆಮಾಡಿ ನಿನ್ನ ಸೇವಕರಿಗೂ ಮಗನಾದ ದಾವೀದನಿಗೂ ನಿನಗಿರುವುದರಲ್ಲಿ ಸಾಧ್ಯವಾದುದ್ದನ್ನು ಕೊಡು,’ ಎಂದು ಅವನಿಗೆ ಹೇಳಿರಿ,” ಎಂದು ಅವರನ್ನು ಕಳುಹಿಸಿದನು.


ಯಾರೂ ನಿಮ್ಮ ಮುಂದೆ ನಿಲ್ಲುವುದಿಲ್ಲ. ನೀವು ಕಾಲಿಡುವ ಎಲ್ಲ ಪ್ರದೇಶಗಳ ಜನಗಳಿಗೂ ನಿಮ್ಮಿಂದ ದಿಗಿಲೂ ಹೆದರಿಕೆಯೂ ಉಂಟಾಗುವ ಹಾಗೆ ನಿಮ್ಮ ದೇವರಾದ ಸರ್ವೇಶ್ವರ ತಾನೇ ಹೇಳಿರುವಂತೆ ಮಾಡುವರು.


ಅವುಗಳಿಗೆ ಸಂಬಂಧಪಟ್ಟ ಶಾಸನದ ಪ್ರಕಾರ, ನಿಯಮಿತ ಕಾಲದಲ್ಲಿ ಆಚರಿಸುವುದು ತಮ್ಮಲ್ಲಿಯೂ ತಮ್ಮ ಸಂತಾನದವರಲ್ಲಿಯೂ ತಮ್ಮೊಂದಿಗೆ ಸೇರಿಕೊಳ್ಳುವವರಲ್ಲಿಯೂ ಮೀರಕೂಡದ ಪದ್ಧತಿನಿಯಮಗಳಾಬೇಕು;


ಆ ದಿಗಳಲ್ಲಿ ಯೆಹೂದ್ಯರಿಗೆ ಶತ್ರುಗಳ ಕಾಟ ತಪ್ಪಿ ವಿಶ್ರಾಂತಿ ದೊರೆಯಿತು. ಆ ತಿಂಗಳಿನಲ್ಲಿ ಸಂಕಟವು ಪರಿಹಾರವಾಗಿ ಸಂತೋಷ ಪ್ರಾಪ್ತಿಯಾಯಿತು; ದುಃಖವು ಕಳೆದು ಸುಖಕಾಲ ಬಂದಿತು. ಆದ್ದರಿಂದ ಆ ದಿನಗಳಲ್ಲಿ ಹಬ್ಬದ ಭೋಜನಮಾಡಿ ಪರಸ್ಪರ ತಿಂಡಿತೀರ್ಥಗಳನ್ನು ವಿನಿಮಯಮಾಡಿಕೊಳ್ಳಬೇಕು. ಹಾಗೂ ಬಡಬಗ್ಗರಿಗೆ ದಾನಧರ್ಮ ಮಾಡಬೇಕು.


ಆದುದರಿಂದ ಅರಸ ಅಹಷ್ವೇರೋಷನ ಸಮಸ್ತ ಸಂಸ್ಥಾನಗಳ ಪ್ರತಿಯೊಂದು ನಗರದಲ್ಲಿದ್ದ ಯೆಹೂದ್ಯರು ತಮಗೆ ಕೇಡು ಬಗೆದವರಿಗೆ ವಿರುದ್ಧವಾಗಿ ಕೈಯೆತ್ತಲು ಒಟ್ಟಾಗಿ ಸೇರಿದರು. ಎಲ್ಲರಿಗೂ ಅವರ ಭಯ ಇದ್ದುದರಿಂದ ಯಾರೂ ಅವರ ಮುಂದೆ ನಿಲ್ಲಲಾಗಲಿಲ್ಲ.


ಲೋಕದಲ್ಲಿರುವ ಎಲ್ಲ ಜನಗಳಿಗೂ ಇಂದಿನಿಂದ ನಿಮ್ಮ ಬಗ್ಗೆ ದಿಗಿಲೂ ಹೆದರಿಕೆಯೂ ಉಂಟಾಗುವಂತೆ ಮಾಡುತ್ತೇನೆ. ಅವರು ನಿಮ್ಮ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ಗಡಗಡನೆ ನಡುಗಿ ಸಂಕಟಪಡುವರು,’ ಎಂದು ಹೇಳಿದರು.


ಭಯಭೀತಿ ಅವರನ್ನು ಆವರಿಸಿದೆ ನಿನ್ನ ಭುಜಬಲ ನೋಡಿ ಸ್ತಬ್ದರಾಗಿಹರವರು ಕಲ್ಲಿನಂತೆ.


ಅವರು ಪ್ರಯಾಣಮಾಡುತ್ತಿದ್ದಾಗ ದೇವರು ಸುತ್ತಮುತ್ತಣದ ಊರಿನವರಲ್ಲಿ ಭಯ ಹುಟ್ಟಿಸಿದರು. ಇದರಿಂದಾಗಿ ಆ ಊರಿವನರಾರೂ ಯಕೋಬನ ಮಕ್ಕಳನ್ನು ಹಿಂದಟ್ಟಿ ಬರಲಿಲ್ಲ.


ಇದು ನಡೆದದ್ದು ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ. ಅವರು ಹದಿನಾಲ್ಕನೆಯ ದಿನದಂದು ವಿಶ್ರಮಿಸಿದರು. ಅಂದು ಸಂಭ್ರಮದ ಉತ್ಸವದಿನವನ್ನಾಗಿ ಆಚರಿಸಿದರು.


ಇದಲ್ಲದೆ, ಎಜ್ರನು ಅವರಿಗೆ, “ಹೋಗಿ ಮೃಷ್ಟಾನ್ನವನ್ನೂ ಮಧುರಪಾನವನ್ನೂ ತೆಗೆದುಕೊಳ್ಳಿ; ತಮಗಾಗಿ ಏನೂ ಸಿದ್ಧಮಾಡದವರಿಗೆ ಒಂದು ಪಾಲನ್ನು ಕಳುಹಿಸಿರಿ. ಈ ದಿನ ನಮ್ಮ ಸರ್ವೇಶ್ವರನಿಗೆ ಪ್ರತಿಷ್ಠಿತ ದಿನ! ವ್ಯಸನಪಡಬೇಡಿ; ಸರ್ವೇಶ್ವರನ ಆನಂದವೇ ನಿಮ್ಮ ಆಶ್ರಯವಾಗಿದೆ,” ಎಂದನು.


“ಸರ್ವೇಶ್ವರ ಈ ನಾಡನ್ನು ನಿಮಗೆ ಕೊಟ್ಟಿದ್ದಾರೆಂದು ನಾನು ಬಲ್ಲೆ; ನಿಮ್ಮ ವಿಷಯದಲ್ಲಿ ನಮಗೆ ಮಹಾಭೀತಿ ಉಂಟಾಗಿದೆ. ನಾಡಿನ ನಿವಾಸಿಗಳೆಲ್ಲರೂ ಕಂಗೆಟ್ಟು ಹೋಗಿದ್ದಾರೆ.


ಇದನ್ನೆಲ್ಲಾ ಕೇಳಿ ನಮ್ಮ ಎದೆ ಒಡೆದುಹೋಗಿದೆ. ನಿಮ್ಮನ್ನು ಎದುರಿಸುವ ಧೈರ್ಯ ಯಾರಿಗೂ ಇಲ್ಲ. ನಿಮ್ಮ ದೇವರಾದ ಸರ್ವೇಶ್ವರರೊಬ್ಬರೇ ಪರಲೋಕದಲ್ಲೂ ಭೂಲೋಕದಲ್ಲೂ ದೇವರು.


ಇದಲ್ಲದೆ ಅರಮನೆಯಲ್ಲಿ ಮೊರ್ದೆಕೈಯ ಅಧಿಕಾರ ಪ್ರಬಲವಾಗುತ್ತಾ ಬಂದುದರಿಂದ ಅವನ ಕೀರ್ತಿ ಎಲ್ಲಾ ಸಂಸ್ಥಾನಗಳಲ್ಲಿಯೂ ಹಬ್ಬಿತ್ತು.


ಭೀತಿಯಿತ್ತಾ ಈಜಿಪ್ಟರಿಗೆ ಇಸ್ರಯೇಲರ ಬಗ್ಗೆ I ಈ ಕಾರಣ ಆನಂದಿಸಿದರು ಅವರು ಹೋದುದಕ್ಕೆ II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು