ಎಸ್ತೇರಳು 8:13 - ಕನ್ನಡ ಸತ್ಯವೇದವು C.L. Bible (BSI)13 ನಿರ್ನಾಮಗೊಳಿಸಿ ಅವರ ಆಸ್ತಿಪಾಸ್ತಿಯನ್ನೆಲ್ಲಾ ಸೂರೆಮಾಡಬೇಕು; ಈ ಪತ್ರದ ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜಾಜ್ಞೆಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು. ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಸನ್ನದ್ಧರಾಗಿರಬೇಕು.’ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಅವರ ಸೊತ್ತನ್ನು ಸೂರೆಮಾಡಬೇಕು, ಈ ಪತ್ರದ ಒಂದೊಂದು ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು, ಆ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೆ ಸಿದ್ಧರಾಗಿರಬೇಕು” ಎಂದು ಅಪ್ಪಣೆಮಾಡಿದ್ದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಈ ಪತ್ರದ ಒಂದೊಂದು ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕೆಂದೂ ಆ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವದಕ್ಕೆ ಸಿದ್ಧರಾಗಿರಬೇಕೆಂದೂ ಅಪ್ಪಣೆಮಾಡಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಈ ರಾಜಾಜ್ಞೆಯು ದೇಶದ ಶಾಸನವಾಯಿತು. ಇದನ್ನು ರಾಜ್ಯದ ಎಲ್ಲಾ ಸಂಸ್ಥಾನಗಳ ಎಲ್ಲಾ ಜನರಿಗೆ ಪ್ರಕಟಿಸಲಾಯಿತು. ಯಾವ ದಿವಸದಲ್ಲಿ ಯೆಹೂದ್ಯರನ್ನು ನಿರ್ಮೂಲ ಮಾಡಲು ಆಜ್ಞೆ ಹೊರಡಿತ್ತೋ ಆ ದಿವಸದಲ್ಲಿಯೆ ಯೆಹೂದ್ಯರು ತಮ್ಮ ವೈರಿಗಳನ್ನು ಎದುರಿಸಿ ಅವರನ್ನು ಕೊಲ್ಲುವುದಕ್ಕೆ ತಯಾರಿರಬೇಕೆಂದು ಈ ಆಜ್ಞೆಯನ್ನು ಹೊರಡಿಸಿದ್ದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು, ಅವರು ಆ ದಿನ ಸಿದ್ಧವಾಗಿರಬೇಕೆಂದು ಈ ಆಜ್ಞಾಪತ್ರದ ಪ್ರತಿಯು ಪ್ರಾಂತ ಪ್ರಾಂತಗಳಲ್ಲಿ ಕಾನೂನಾಗಿ ಸಕಲ ದೇಶದವರಿಗೂ ಸಾರಿ ಹೇಳಲಾಗಿತ್ತು. ಅಧ್ಯಾಯವನ್ನು ನೋಡಿ |