Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 8:1 - ಕನ್ನಡ ಸತ್ಯವೇದವು C.L. Bible (BSI)

1 ಆ ದಿನದಂದೇ ಅರಸ ಅಹಷ್ವೇರೋಷನು, ಯೆಹೂದ್ಯರ ಶತ್ರುವಾದ ಹಾಮಾನನು ವಾಸವಾಗಿದ್ದ ನಿವಾಸವನ್ನು ರಾಣಿ ಎಸ್ತೇರಳಿಗೆ ಕೊಟ್ಟನು. ಆಕೆ ತನಗೂ ಮೊರ್ದೆಕೈಗೂ ಇದ್ದ ನಿಜ ಸಂಬಂಧವನ್ನು ಅರಸನಿಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್ ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್‍ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದ್ದರಿಂದ ಅರಸನು ಮೊರ್ದೆಕೈಯನ್ನು ಒಡ್ಡೋಲಗದಲ್ಲಿ ಸೇರಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಅದೇ ದಿವಸದಲ್ಲಿ ರಾಜ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಆಸ್ತಿಪಾಸ್ತಿಗಳನ್ನೆಲ್ಲಾ ರಾಣಿ ಎಸ್ತೇರಳಿಗೆ ಕೊಟ್ಟನು. ಎಸ್ತೇರ್ ರಾಣಿಯು ಅರಸನಿಗೆ, “ಮೊರ್ದೆಕೈ ತನ್ನ ಸೋದರಣ್ಣನಾಗ ಬೇಕು” ಎಂದಳು. ನಂತರ ಮೊರ್ದೆಕೈಯು ಅರಸನನ್ನು ಕಾಣಲು ಬಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅದೇ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಸೊತ್ತನ್ನು ರಾಣಿಯಾದ ಎಸ್ತೇರಳಿಗೆ ಕೊಟ್ಟನು. ಇದಲ್ಲದೆ ಮೊರ್ದೆಕೈ ಅರಸನ ಬಳಿಗೆ ಬಂದನು. ಏಕೆಂದರೆ ಮೊರ್ದೆಕೈ ತನಗೆ ಸಂಬಂಧಿಕನು ಎಂದು ಎಸ್ತೇರಳು ತಿಳಿಸಿದ್ದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 8:1
12 ತಿಳಿವುಗಳ ಹೋಲಿಕೆ  

ತಂದೆತಾಯಿಗಳನ್ನು ಕಳೆದುಕೊಂಡು ಅನಾಥಳಾಗಿದ್ದ ತನ್ನ ಚಿಕ್ಕಪ್ಪನ ಮಗಳಾದ ಎಸ್ತೇರಳನ್ನು (ಹದೆಸ್ಸಾ ಆಕೆಯ ಇನ್ನೊಂದು ಹೆಸರು) ತನ್ನ ಸ್ವಂತ ಮಗಳಂತೆ ಸ್ವೀಕರಿಸಿ ಸಾಕುತ್ತಿದ್ದನು. ಈಕೆ ಬಲು ರೂಪಸಿ ಹಾಗು ಲಾವಣ್ಯವತಿಯಾಗಿದ್ದಳು.


ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯದ ಸೊತ್ತು; ಪಾಪಿಯ ಸೊತ್ತು ಸತ್ಪುರುಷರಿಗೆ ಸೇರುವ ಸಂಪತ್ತು.


ಹೀಗೆ ಅರಸನ ಬಳಿಗೆ ಹೋಗಲು ಮೊರ್ದೆಕೈಯ ದತ್ತುಮಗಳೂ ಅವನ ಚಿಕ್ಕಪ್ಪನಾದಅಬಿಹೈಲನ ಮಗಳೂ ಆದ ಎಸ್ತೇರಳ ಸರದಿ ಬಂದಾಗ, ಅಂತಃಪುರಪಾಲಕ ಹೇಗೈ ಎಂಬ ರಾಜಕಂಚುಕಿ ನೇಮಿಸಿದ್ದನ್ನೇ ಹೊರತು ಬೇರಾವುದನ್ನೂ ಆಕೆ ಕೇಳಲಿಲ್ಲ. ನೋಡಿದವರೆಲ್ಲರೂ ಆಕೆಯನ್ನು ಬಹುವಾಗಿ ಮೆಚ್ಚುತ್ತಿದ್ದರು.


ನರಮಾನವನು ಮೆರೆದಾಡುವನು ಮಾಯೆಯಂತೆ I ಅವನ ಸಡಗರವೆಲ್ಲವೂ ನಿರರ್ಥಕದಂತೆ I ಕೂಡಿಪನಾತ ಸಿರಿ ಅದು ಯಾರದಾಗುವುದೆಂದು ಅರಿಯದೆ II


ಆಗ ದೇವರು, ‘ಎಲವೋ ಮೂರ್ಖ, ಇದೇ ರಾತ್ರಿ ನೀನು ಸಾಯಬೇಕಾಗಿದೆ, ನಿನಗಾಗಿ ಸಿದ್ಧಮಾಡಿಟ್ಟಿರುವುದೆಲ್ಲ ಯಾರ ಪಾಲಾಗುವುದು?’ ಎಂದರು.


ಆಕೆ, “ನಮ್ಮ ವೈರಿಯೂ ಶತ್ರುವೂ ಬೇರಾರೂ ಅಲ್ಲ; ಇಗೋ, ಈ ಹಾಮಾನನೇ ಆ ದುಷ್ಟ,” ಎಂದಳು. ಇದನ್ನು ಕೇಳಿದೊಡನೆ ಹಾಮಾನನು ಅರಸನ ಮತ್ತು ರಾಣಿಯ ಮುಂದೆ ಭಯದಿಂದ ನಡುಗಿದನು.


ಬಡ್ಡಿಬಾಕಿಗಳಿಂದ ಬೆಳೆದ ಆಸ್ತಿ, ಬಡವರಲ್ಲಿ ಕನಿಕರವುಳ್ಳವನಿಗೆ ನಿಧಿ.


ಅರಸ ಅಹಷ್ವೇರೋಷನ ಆಸ್ಥಾನದಲ್ಲಿ ರಾಜಸಾನ್ನಿಧ್ಯ ಸೇವಕರೂ ಪದಾಧಿಕಾರಿಗಳೂ ಆಗಿದ್ದ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಪರ್ಷಿಯ ಮತ್ತು ಮೇದ್ಯ ದೇಶಗಳ ರಾಜಪ್ರಮುಖರು ಇದ್ದರು. ಸಮಯೋಚಿತ ವ್ಯವಹಾರ ಜ್ಞಾನಹೊಂದಿದವರಾದ ಇವರನ್ನು ಅರಸನು, ಈ ವಿಷಯವಾಗಿ ವಿಚಾರಿಸಿದನು.


ಆಗ ಅರಸನು, ರಾಣಿ ಎಸ್ತೇರಳಿಗೂ ಯೆಹೂದ್ಯನಾದ ಮೊರ್ದೆಕೈಗೂ, “ಹಾಮಾನನು ಯೆಹೂದ್ಯರ ವಿರುದ್ಧ ಕೈಯೆತ್ತಿದ್ದರಿಂದ ಅವನನ್ನು ಗಲ್ಲಿಗೇರಿಸಿ ಅವನ ಮನೆಯನ್ನು ಎಸ್ತೇರಳಿಗೆ ದಾನ ಮಾಡಿದೆನಲ್ಲವೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು