Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 4:6 - ಕನ್ನಡ ಸತ್ಯವೇದವು C.L. Bible (BSI)

6 ಅಂತೆಯೆ, ಹತಾಕನು ಅರಮನೆಯ ಹೆಬ್ಬಾಗಿಲ ಮುಂದಿರುವ ನಗರದ ಬಯಲಿಗೆ, ಮೊರ್ದೆಕೈಯನ ಬಳಿಗೆ ಹೋದಾಗ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಹತಾಕನು ಅರಮನೆಯ ಬಾಗಿಲಿನ ಮುಂದಿರುವ ಪಟ್ಟಣದ ಬಯಲಿಗೆ ಮೊರ್ದೆಕೈಯ ಹತ್ತಿರ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಹತಾಕನು ಅರಮನೆಯ ಬಾಗಲಿನ ಮುಂದಿರುವ ಪಟ್ಟಣದ ಬೈಲಿಗೆ ಮೊರ್ದೆಕೈಯ ಹತ್ತಿರ ಹೋದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಅರಮನೆಯ ಹೆಬ್ಬಾಗಿಲು ಎದುರಿನಲ್ಲಿದ್ದ ಬಯಲಿನಲ್ಲಿ ಮೊರ್ದೆಕೈಯನ್ನು ಹತಾಕನು ಸಂಧಿಸಿದಾಗ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಹಾಗೆಯೇ ಹತಾಕನು ಅರಸನ ಅರಮನೆಯ ಬಾಗಿಲ ಮುಂದೆ ಪಟ್ಟಣದ ಬೀದಿಯಲ್ಲಿದ್ದ ಮೊರ್ದೆಕೈಯ ಬಳಿಗೆ ಹೋದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 4:6
5 ತಿಳಿವುಗಳ ಹೋಲಿಕೆ  

ಅರಸನ ಆಜ್ಞೆಯೂ ನಿರ್ಣಯವೂ ಪ್ರಕಟವಾದ ಸಂಸ್ಥಾನಗಳಲ್ಲೆಲ್ಲಾ ಯೆಹೂದ್ಯರೊಳಗೆ ಅತೀವ ದುಃಖವುಂಟಾಗಿ ಅನೇಕರು ಉಪವಾಸ ಕೈಗೊಂಡರು. ರೋದನ-ಆಕ್ರಂದನಗಳೊಡನೆ ಗೋಣಿತಟ್ಟನ್ನು ಹೊದ್ದು ಬೂದಿಯಲ್ಲಿ ಕುಳಿತುಕೊಂಡರು.


ಅರಸನು ಈ ಎರಡನೆಯ ದಿನದಲ್ಲೂ ದ್ರಾಕ್ಷಾರಸ ಪಾನಮಾಡುತ್ತಿರುವಾಗ ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನಾನು ನೆರವೇರಿಸುವೆನು. ನನ್ನ ರಾಜ್ಯದ ಅರ್ಧಭಾಗವನ್ನು ಕೇಳಿದರೂ ಸರಿ, ನಾನದನ್ನು ನಿನಗೆ ಕೊಡುವೆನು,” ಎನ್ನಲು


“ಯೆಹೂದ್ಯರು ಶೂಷನ್ ನಗರದಲ್ಲೇ ಐನೂರು ಮಂದಿಯನ್ನು, ಹಾಮಾನನ ಹತ್ತು ಮಕ್ಕಳನ್ನೂ ಸಂಹರಿಸಿಬಿಟ್ಟಿದ್ದಾರೆ. ಉಳಿದ ರಾಜಸಂಸ್ಥಾನಗಳಲ್ಲಿ ಇನ್ನೆಷ್ಟುಮಂದಿಯನ್ನು ಹತಮಾಡಿರಬಹುದೋ! ನಿನ್ನ ವಿಜ್ಞಾಪನೆ ಯಾವುದಿದ್ದರೂ ನೆರವೇರಿಸುವೆನು ಕೇಳು, ನೀನು ಏನು ಕೇಳಿದರೂ ಕೊಡುವೆನು ಹೇಳು,” ಎಂದನು.


ಆಗ ಎಸ್ತೇರಳು ತನ್ನ ಸೇವೆಗಾಗಿ ನೇಮಿಸಲಾಗಿದ್ದ ರಾಜಕಂಚುಕಿಗಳಲ್ಲಿ ಒಬ್ಬನಾದ ಹತಾಕನನ್ನು ಕರೆದು, ಮೊರ್ದೆಕೈ ಬಳಿಗೆ ಕಳುಹಿಸಿ, ನಡೆದ ಸಂಗತಿ ಏನೆಂದೂ, ಮೊರ್ದೆಕೈಯ ಈ ವರ್ತನೆಗೆ ಕಾರಣವಾದರೂ ಯಾವುದೆಂದು ವಿಚಾರಿಸಿಕೊಂಡು ಬರುವಂತೆ ಹೇಳಿದಳು.


ಅವನು, ನಡೆದ ಎಲ್ಲಾ ವಿಷಯಗಳನ್ನು ಮತ್ತು ಯೆಹೂದ್ಯರನ್ನು ನಾಶಮಾಡಲು ಅನುಮತಿ ಪಡೆದುಕೊಳ್ಳುವುದಕ್ಕಾಗಿ ಹಾಮಾನನು ರಾಜಭಂಡಾರಕ್ಕೆ ಕೊಡಲು ವಾಗ್ದಾನಮಾಡಿದ ನಿಗದಿತ ಹಣದ ವಿಷಯವನ್ನು ಅವನಿಗೆ ವಿವರಿಸಿ ಹೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು