Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಎಸ್ತೇರಳು 2:22 - ಕನ್ನಡ ಸತ್ಯವೇದವು C.L. Bible (BSI)

22 ಈ ವಿಷಯ ಮೊರ್ದೆಕೈಗೆ ತಿಳಿದುಬಂದಾಗ, ಆತನು ಎಸ್ತೇರಳಿಗೆ ತಿಳಿಸಿದನು. ರಾಣಿಯು ಅವನ ಹೆಸರನ್ನು ಅರಸನಿಗೆ ಹೇಳಿ ಅವರು ನಡೆಸುತ್ತಿದ್ದ ಆ ಪಿತೂರಿ ಬಗ್ಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಈ ಸಂಗತಿಯು ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನು ಎಸ್ತೇರ್ ರಾಣಿಗೆ ತಿಳಿಸಿದನು. ಆಕೆಯು ಅವನ ಹೆಸರನ್ನು ಅರಸನಿಗೆ ಹೇಳಿ ಆ ಸಂಗತಿಯನ್ನು ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಈ ಸಂಗತಿಯು ಮೊರ್ದೆಕೈಗೆ ಗೊತ್ತಾದಾಗ ಅವನು ಅದನ್ನು ಎಸ್ತೇರ್‍ರಾಣಿಗೆ ತಿಳಿಸಿದನು. ಆಕೆಯು ಅವನ ಹೆಸರನ್ನು ಅರಸನಿಗೆ ಹೇಳಿ ಆ ಸಂಗತಿಯನ್ನು ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಮೊರ್ದೆಕೈಗೆ ಈ ವಿಷಯ ಗೊತ್ತಾದಾಗ ಅವನು ಅದನ್ನು ಎಸ್ತೇರಳಿಗೆ ತಿಳಿಸಿದನು. ಎಸ್ತೇರ್ ರಾಣಿಯು ಇದನ್ನು ಕೊಡಲೇ ಅರಸನಿಗೆ ತಿಳಿಸಿದಳು. ಅಷ್ಟೇ ಅಲ್ಲ, ಮೊರ್ದೆಕೈ ಎಂಬವನು ಈ ಒಳಸಂಚನ್ನು ಕಂಡುಹಿಡಿದು ತನಗೆ ತಿಳಿಸಿದನು ಎಂಬದಾಗಿಯೂ ಅರಸನಿಗೆ ವರದಿ ಮಾಡಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಈ ಕಾರ್ಯವು ಮೊರ್ದೆಕೈಗೆ ತಿಳಿದದ್ದರಿಂದ ಅವನು ಅದನ್ನು ರಾಣಿಯಾದ ಎಸ್ತೇರಳಿಗೆ ತಿಳಿಸಿದನು. ಎಸ್ತೇರಳು ಮೊರ್ದೆಕೈಯ ಹೆಸರನ್ನು ಅರಸನಿಗೆ ಹೇಳಿ ಆ ಒಳಸಂಚಿನ ಬಗ್ಗೆ ತಿಳಿಸಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಎಸ್ತೇರಳು 2:22
6 ತಿಳಿವುಗಳ ಹೋಲಿಕೆ  

ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ.


ದೇವರ ಸಿರಿಸಂಪತ್ತು, ಜ್ಞಾನವಿಜ್ಞಾನ ಎಷ್ಟು ಅಗಾಧ! ಪರಿಶೋಧನೆಗೂ ನಿಲುಕದ ಅವರ ನಿರ್ಣಯ ಎಷ್ಟು ಅಗಮ್ಯ! ಅವರ ನಿಯೋಜನೆಗಳು ಗ್ರಹಿಕೆಗೂ ಎಷ್ಟು ಅಸಾಧ್ಯ!


ಅರಸನನ್ನು ಮನಸ್ಸಿನಲ್ಲಿಯೂ ನಿಂದಿಸಬೇಡ; ಧನಿಕನನ್ನು ಮಲಗುವ ಕೋಣೆಯಲ್ಲೂ ದೂಷಿಸಬೇಡ; ಆಕಾಶದ ಹಕ್ಕಿ ಆ ಸುದ್ದಿಯನ್ನು ಮುಟ್ಟಿಸೀತು; ಹಾರುವ ಪಕ್ಷಿ ಆ ಸಮಾಚಾರವನ್ನು ತಿಳಿಸೀತು!


ಇದಲ್ಲದೆ, ಅರಸನ ಸೀಮೆಯಲ್ಲಿದ್ದ ಕಂಚುಕಿಗಳಲ್ಲೊಬ್ಬನಾದ ಹರ್ಬೋನನು, “ಇಗೋ, ಅರಸನ ಪ್ರಾಣವನ್ನು ರಕ್ಷಿಸಲು ಸಮಾಚಾರವನ್ನು ತಿಳಿಸಿದ ಮೊರ್ದಕೈಯನ್ನು ಕೊಲ್ಲುವುದಕ್ಕಾಗಿ ಹಾಮಾನನು ಸಿದ್ಧಮಾಡಿಸಿದ ಇಪ್ಪತ್ತೆರಡು ಮೀಟರ್ ಎತ್ತರದ ನೇಣುಗಂಬವಿದೆಯಲ್ಲ,” ಎನ್ನಲು ಅರಸನು, “ಇವನನ್ನು ಅದಕ್ಕೆ ನೇತುಹಾಕಿರಿ,” ಎಂದು ಆಜ್ಞಾಪಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು